ಡೆಹ್ರಾಡೂನ್ (ಉತ್ತರಾಖಂಡ): ಭಾರತ - ನೇಪಾಳ ಗಡಿಯಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಎರಡು ತೂಗು ಸೇತುವೆಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ಇದರಿಂದ ಉಭಯ ದೇಶಗಳಲ್ಲಿನ ಐದು ಡಜನ್‌ಗೂ ಹೆಚ್ಚು ಹಳ್ಳಿಗಳಿಗೆ ಅನುಕೂಲವಾಗಲಿದೆ.
ನೇಪಾಳ ಸರ್ಕಾರವು ನಿರ್ಮಿಸಿದ ಎರಡು ಸೇತುವೆಗಳನ್ನು ಉತ್ತರಾಖಂಡದ ಪಿಥೋರಗಢ್ ಜಿಲ್ಲಾಧಿಕಾರಿ ಡಾ.ಆಶಿಶ್ ಚೌಹಾಣ್ ಮತ್ತು ನೇಪಾಳದ ಡಾರ್ಚುಲಾ ಜಿಲ್ಲಾಧಿಕಾರಿ ಡಾ.ಉಪಾಧ್ಯಾಯ ಜಂಟಿಯಾಗಿ ಉದ್ಘಾಟಿಸಿದರು. ಮೊದಲ ಸೇತುವೆಯನ್ನು ಭಾರತದ ಎಲೆಗಡ್ ಮತ್ತು ನೇಪಾಳದ ಬಾಡು ನಡುವೆ ಹಾಗೂ ಎರಡನೇ ಸೇತುವೆಯನ್ನು ನೇಪಾಳದ ದ್ವೈಸೆರಾ ಮತ್ತು ಲಾಲಿ ನಡುವೆ ನಿರ್ಮಿಸಲಾಗಿದೆ.
ಸೇತುವೆಗಳ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಆಶಿಶ್ ಚೌಹಾಣ್, ಈ ಹೊಸ ಸೇತುವೆಗಳಿಂದ ಎರಡೂ ರಾಷ್ಟ್ರಗಳ ಜನರಿಗೆ ಸಾಕಷ್ಟು ಸಹಾಯವಾಗಲಿದೆ ಎಂದರು. ಇತ್ತ, ಸೇತುವೆಗಳಲ್ಲಿ ಸಂಚಾರ ಆರಂಭಗೊಂಡಿರುವುದಕ್ಕೆ ಸ್ಥಳೀಯ ನಿವಾಸಿಗಳು ಸಹ ಸಂತಸ ವ್ಯಕ್ತಪಡಿಸಿದ್ದಾರೆ. ಇಲ್ಲಿ ಭದ್ರತೆಗಾಗಿ ಭಾರತದ ಎಸ್‌ಎಸ್‌ಬಿ ಮತ್ತು ನೇಪಾಳದ ಸಶಸ್ತ್ರ ಪಡೆ ನಿಯೋಜಿಸಲಾಗಿದೆ.
ಇದನ್ನೂ ಓದಿ: ಬಿ.ಎಲ್.ಸಂತೋಷ್ ನೇತೃತ್ವದಲ್ಲಿ ಹಾರ್ದಿಕ್ ಪಟೇಲ್ ಬಿಜೆಪಿ ಸೇರ್ಪಡೆ!?