ETV Bharat / bharat

ರಾಜ್ಯಸಭೆ, ಲೋಕಸಭೆ ಕಲಾಪದಲ್ಲಿ Pegasus​​​​, ಐಟಿ ದಾಳಿ ಗದ್ದಲ: ಕಲಾಪ ಮುಂದೂಡಿಕೆ

ಇಂದೂ ಸಹ ರಾಜ್ಯಸಭಾ ಕಲಾಪ ಸದ್ದು-ಗದ್ದಲದಿಂದಲೇ ಕೂಡಿತ್ತು. ಪೆಗಾಸಸ್​​​ ಹಾಗೂ ಮಾಧ್ಯಮ ಸಂಸ್ಥೆಯ ಮೇಲಿನ ಐಟಿ ದಾಳಿ ವಿಚಾರ ಕಲಾಪದಲ್ಲಿ ಕೋಲಾಹಲ ಸೃಷ್ಟಿಸಿತು. ಆಡಳಿತ ಪಕ್ಷದ ವಿರುದ್ಧ ಇತರ ಸದಸ್ಯರು ಪ್ರತಿಭಟನೆ ನಡೆಸಿದ ಪರಿಣಾಮ ಎರಡು ಬಾರಿ ಕಲಾಪ ಮುಂದೂಡಲಾಯಿತು.

author img

By

Published : Jul 22, 2021, 2:28 PM IST

Updated : Jul 22, 2021, 2:33 PM IST

two-session-halls-adjourned
ಉಭಯ ಸದನ ಮುಂದೂಡಿಕೆ

ನವದೆಹಲಿ: ಕಳೆದೆರಡು ದಿನದಲ್ಲಿ ವಿಪಕ್ಷಗಳ ಗದ್ದಲದಿಂದಲೇ ಅಂತ್ಯಗೊಂಡಿದ್ದ ರಾಜ್ಯಸಭೆ ಮತ್ತು ಲೋಕಸಭೆ ಕಲಾಪಗಳು ಇಂದೂ ಸಹ ಗದ್ದಲಕ್ಕೆ ಬಲಿಯಾಗಿವೆ. ಕಲಾಪ ಆರಂಭವಾಗುತ್ತಲೇ ವಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿಗೆ ಮುಂದಾದವು.

ಇಂದು ನಡೆದ ರಾಜ್ಯ ಸಭೆ ಕಲಾಪದಲ್ಲಿ ದಿನಪತ್ರಿಕೆ ದೈನಿಕ್ ಭಾಸ್ಕರ್ ಕಚೇರಿ ಮೇಲಿನ ಐಟಿ ದಾಳಿ ಹಾಗೂ ಪೆಗಾಸಸ್​ ಸ್ಪೈವೇರ್ ವಿವಾದ ಕಲಾಪದಲ್ಲಿ ಗದ್ದಲಕ್ಕೆ ಕಾರಣವಾಯಿತು. ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ನಗರದ ವಿವಿಧ ಭಾಗದಲ್ಲಿ ನಡೆದ ಮೀಡಿಯಾ ಹೌಸ್ ಮೇಲಿನ ಐಟಿ ರೈಡ್​ ಬಗ್ಗೆ ಪ್ರಸ್ತಾಪಿಸಿದರು. ಈ ವೇಳೆ ಗದ್ದಲ ಏರ್ಪಟ್ಟ ಪರಿಣಾಮ ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಗಿತ್ತು.

ಬಳಿಕ ಮತ್ತೆ ಆರಂಭಗೊಂಡ ಕಲಾಪದಲ್ಲಿ ಪೆಗಾಸಸ್​​​ ಕುರಿತು ವಿಪಕ್ಷಗಳು ನೇರ ಆರೋಪಕ್ಕೆ ನಿಂತವು, ಪತ್ರಕರ್ತರು, ವಿರೋಧ ಪಕ್ಷದ ನಾಯಕರ ವಿರುದ್ಧ ಮೋದಿ ಸರ್ಕಾರ ಬೇಹುಗಾರಿಕೆ ನಡೆಸುತ್ತಿದೆ ಎಂದು ಟಿಎಂಸಿ ಸದಸ್ಯರು ಪ್ರತಿಭಟನೆಗೆ ಇಳಿದರು. ಜೊತೆಗೆ ಫಲಕಗಳ ಹಿಡಿದು ಆಕ್ರೋಶ ಹೊರಹಾಕಿದರು.

ಮಾತಿನ ಚಕಮಕಿ

ಈ ವೇಳೆ ಕಲಾಪದಲ್ಲಿ ಆಡಳಿತ ಪಕ್ಷದ ಸದಸ್ಯರು ಹಾಗೂ ಉಳಿದ ಸದಸ್ಯರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಕಲಾಪ ಸುಗಮವಾಗಿ ನಡೆಸಲು ವಿಪಕ್ಷ ಸದಸ್ಯರು ಅಡ್ಡಿಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಮಧ್ಯಪ್ರವೇಶಿಸಿ ಗದ್ದಲ ಮಾಡದಂತೆ ಮನವಿ ಮಾಡಿದರು. ಆದರೆ, ಗದ್ದಲ-ಗಲಾಟೆ ಮುಂದುವರಿದ ಕಾರಣ ಮತ್ತೊಮ್ಮೆ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. 2 ಗಂಟೆಗೆ ಆರಂಭವಾಗದಾಲೂ ಗದ್ದಲ ಮುಂದುವರಿದ ಪರಿಣಾಮ ಕಲಾಪ ನಾಳೆಗೆ ಮುಂದೂಡಲಾಗಿದೆ.

ಲೋಕಸಭೆಯಲ್ಲೂ ಕೋಲಾಹಲ

ಇತ್ತ ಲೋಕಸಭೆಯಲ್ಲಿ ಪ್ರತಿಪಕ್ಷಗಳು ಬಯಸುವ ಯಾವುದೇ ವಿಷಯದ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಆದರೆ, ಪ್ರತಿಪಕ್ಷಗಳು ಗದ್ದಲ ಏರ್ಪಡಿಸಿದ್ದರಿಂದ ಎರಡು ಬಾರಿ ಮುಂದೂಡಲಾಯಿತು.

ಮುಂದುವರಿದು ಮಾತನಾಡಿದ ಜೋಶಿ, ರಾಜ್ಯಸಭೆಯಲ್ಲಿ ಕೋವಿಡ್ ಕುರಿತು ಚರ್ಚೆಯಾಗಿದೆ. ಇಲ್ಲಿ ಯಾವ ವಿಷಯಬೇಕಾದರೂ ಚರ್ಚೆ ಮಾಡಲು ನಾವು ಸಿದ್ಧರಿದ್ದೇವೆ ಎಂದರು. ಆದರೆ, ವಿಪಕ್ಷಗಳು ಪೆಗಾಸಸ್​ ಮತ್ತು ಐಟಿ ದಾಳಿ ಜೊತೆಗೆ ಆಕ್ಸಿಜನ್ ಕೊರತೆ ವಿಷಯದಲ್ಲಿ ಗದ್ದಲ ಮಾಡಿದವು. ಈ ಗದ್ದಲದ ನಡುವೆಯೇ ಒಳನಾಡಿ ಹಡಗುಗಳ ಮಸೂದೆ 2021 ಮತ್ತು ಅಗತ್ಯ ರಕ್ಷಣಾ ಸೇವೆಗಳ ಮಸೂದೆ 2021 ಅನ್ನು ಸದನದಲ್ಲಿ ಮಂಡಿಸಲಾಯಿತು.

Last Updated : Jul 22, 2021, 2:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.