ETV Bharat / bharat

ಶ್ರೀರಾಮ ಮಂದಿರ ನಿರ್ಮಾಣ: ಮೈಸೂರಿನಿಂದ ಅಯೋಧ್ಯಾ ತಲುಪಿದ ಶಿಲಾ ಬಂಡೆಗಳು - ಬಾಬರಿ ಮಸೀದಿಯನ್ನು ಕೆಡವಲಾದ ಅಯೋಧ್ಯೆಯ ವಿವಾದಿತ ಸ್ಥಳ

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ಶ್ರೀರಾಮ ಮಂದಿರದಲ್ಲಿ ಸ್ಥಾಪಿತವಾಗಲಿರುವ ರಾಮಲಲ್ಲಾನ ವಿಗ್ರಹ ತಯಾರಿಕೆಗಾಗಿ ದೇಶ ವಿದೇಶಗಳಿಂದ ಕಲ್ಲುಬಂಡೆಗಳನ್ನು ತರಿಸಿಕೊಳ್ಳಲಾಗುತ್ತಿದೆ. ಈಗ ಕರ್ನಾಟಕದ ಮೈಸೂರಿನಿಂದ ಎರಡು ಶಿಲಾ ಬಂಡೆಗಳು ಅಯೋಧ್ಯಾ ತಲುಪಿವೆ.

TWO ROCKS REACHED AYODHYA
TWO ROCKS REACHED AYODHYA
author img

By

Published : Feb 15, 2023, 5:05 PM IST

Updated : Feb 15, 2023, 9:34 PM IST

ಮೈಸೂರಿನಿಂದ ಅಯೋಧ್ಯಾ ತಲುಪಿದ ಶಿಲಾ ಬಂಡೆಗಳು

ಅಯೋಧ್ಯಾ( ಉತ್ತರಪ್ರದೇಶ): ಭಗವಾನ್ ರಾಮಲಲ್ಲಾನ ಭವ್ಯ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಶ್ರೀರಾಮನ ಸ್ಥಿರ ವಿಗ್ರಹದ ನಿರ್ಮಾಣಕ್ಕೆ ಯಾವ ಕಲ್ಲುಬಂಡೆಗಳನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ನೇಪಾಳದ ಕಾಳಿ ಗಂಡಕಿ ನದಿಯಿಂದ ತಂದ ದೇವ ಶಿಲಾವನ್ನು ಪೂಜೆಯ ನಂತರ ಅಯೋಧ್ಯೆಯ ರಾಮಸೇವಕ ಪುರಂನಲ್ಲಿ ಇರಿಸಲಾಗಿದೆ. ಹಾಗೆಯೇ ಈಗ ಕರ್ನಾಟಕದ ಮೈಸೂರಿನಿಂದ ಅಯೋಧ್ಯೆಗೆ ಎರಡು ಬಗೆಯ ಶಿಲಾ ಬಂಡೆಗಳು ಆಗಮಿಸಿವೆ. ಇವುಗಳಲ್ಲಿ ಒಂದು ಕಪ್ಪು ಬಣ್ಣದ್ದಾಗಿದ್ದರೆ ಮತ್ತೊಂದು ಒಳಗಿನಿಂದ ಹಳದಿ ಬಣ್ಣದ್ದಾಗಿದೆ.

ವಾಸ್ತು ವಿಜ್ಞಾನಿಗಳಿಂದ ಬಂಡೆಗಳ ಪರಿಶೀಲನೆ: ಈ ಬಂಡೆಗಳನ್ನು ಸಹ ರಾಮಸೇವಕ ಪುರಂನಲ್ಲಿರುವ ದೇವ ಶಿಲೆಗಳ ಬಳಿ ಇರಿಸಲಾಗಿದೆ. ವಿಗ್ರಹದ ಆಕಾರ ಮತ್ತು ಗಾತ್ರದ ಬಗ್ಗೆ ಶಿಲ್ಪಕಲಾ ತಜ್ಞರು ನಿರಂತರವಾಗಿ ವಿಚಾರ ಮಂಥನ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ದೇವರ ಪ್ರತಿಷ್ಠಾಪನೆಗಾಗಿ ಕಲ್ಲುಗಳನ್ನು ಪರೀಕ್ಷಿಸಿ ಆಯ್ಕೆ ಮಾಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಕರ್ನಾಟಕದ ಮೈಸೂರಿನಿಂದ, ಪೂಜಿಸಲ್ಪಟ್ಟ ಎರಡು ಶಿಲಾ ಬಂಡೆಗಳು ಮಂಗಳವಾರ ಅಯೋಧ್ಯೆಗೆ ತಲುಪಿವೆ. ವಾಸ್ತು ವಿಜ್ಞಾನಿಗಳು ಬಂಡೆಗಳನ್ನು ಪರಿಶೀಲಿಸುತ್ತಿದ್ದಾರೆ.

’ಭಾರತದ ಹಲವು ಕಡೆಗಳಿಂದ ಉತ್ತಮ ಬಂಡೆಗಳನ್ನ ತರಿಸಲಾಗುತ್ತಿದೆ’: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾತನಾಡಿ, ಭಾರತದಲ್ಲಿ ಇಂಥ ಕಲ್ಲುಗಳು ಎಲ್ಲೆಲ್ಲಿ ಲಭ್ಯವಿವೆಯೋ ಅವೆಲ್ಲವನ್ನೂ ಇಲ್ಲಿಗೆ ತರಿಸಲಾಗುತ್ತಿದೆ. ಈ ಕಲ್ಲುಗಳಿಂದಲೇ ವಿಗ್ರಹಗಳನ್ನು ತಯಾರಿಸಲಾಗುವುದು ಎಂಬ ಕಡ್ಡಾಯವೇನಿಲ್ಲ. ಕಲ್ಲುಗಳನ್ನು ಸರಿಪಡಿಸಿದ ನಂತರ ಆ ಕಲ್ಲಿನಿಂದ ಪ್ರತಿಮೆ ಮಾಡಬಹುದೇ ಅಥವಾ ಬೇಡವೇ ಎಂಬುದನ್ನು ಶಿಲ್ಪಕಲಾ ತಜ್ಞರು ನಿರ್ಧರಿಸುತ್ತಾರೆ. ಎಲ್ಲ ಕಲ್ಲುಗಳನ್ನು ಸಂಗ್ರಹಿಸಿದ ನಂತರ ಅವನ್ನು ಮೂರ್ತಿ ತಯಾರಕರಿಗೆ ತೋರಿಸಲಾಗುತ್ತದೆ. ಶಿಲ್ಪಕಲಾ ತಜ್ಞರ ಒಪ್ಪಿಗೆ ದೊರೆತ ನಂತರವೇ ರಾಮಲಲ್ಲಾ ವಿಗ್ರಹ ನಿರ್ಮಾಣ ಕಾರ್ಯ ಆರಂಭಿಸಲಾಗುವುದು ಎಂದು ಹೇಳಿದರು.

ಶಾಲಿಗ್ರಾಮದಿಂದ ಅಯೋಧ್ಯಾ ತಲುಪಿರುವ ಬಂಡೆಗಳು: ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿನ ಭಗವಾನ್ ರಾಮನ ವಿಗ್ರಹವನ್ನು ಕೆತ್ತಲು ಎರಡು ಅಪರೂಪದ ಶಾಲಿಗ್ರಾಮ ಬಂಡೆಗಳು ನೇಪಾಳದಿಂದ ಫೆಬ್ರವರಿ ಮೊದಲ ವಾರದಲ್ಲಿ ಅಯೋಧ್ಯೆಗೆ ಆಗಮಿಸಿವೆ. ಇವನ್ನು ರಾಮಜನ್ಮಭೂಮಿ ಟ್ರಸ್ಟ್‌ಗೆ ಹಸ್ತಾಂತರಿಸುವ ಮೊದಲು ದೇವಾಲಯದ ಅರ್ಚಕರು ಇವುಗಳಿಗೆ ಮಾಲಾರ್ಪಣೆ ಮಾಡಿ ಪವಿತ್ರ ಸಂಪ್ರದಾಯಗಳನ್ನು ನೆರವೇರಿಸಿದರು. 60 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಈ ಶಾಲಿಗ್ರಾಮ ಶಿಲೆಗಳು ಎರಡು ವಿಭಿನ್ನ ಟ್ರಕ್‌ಗಳಲ್ಲಿ ನೇಪಾಳದಿಂದ ಅಯೋಧ್ಯೆಗೆ ತಲುಪಿವೆ. ಒಂದು ಬಂಡೆ 26 ಟನ್ ಮತ್ತು ಇನ್ನೊಂದು 14 ಟನ್ ತೂಕವಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕಚೇರಿ ಉಸ್ತುವಾರಿ ಪ್ರಕಾಶ್ ಗುಪ್ತಾ ಹೇಳಿದ್ದರು.

ಅಯೋಧ್ಯೆಯ ಭವ್ಯ ರಾಮಮಂದಿರದ ಗರ್ಭಗುಡಿಯಲ್ಲಿ ಒಂಬತ್ತು ಅಡಿ ಎತ್ತರದಲ್ಲಿ ನೂತನ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು ಮತ್ತು ಇದರ ನಿರ್ಮಾಣ ಕಾರ್ಯದಲ್ಲಿ ಅತ್ಯುತ್ತಮ ಶಿಲ್ಪಿಗಳನ್ನು ತೊಡಗಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರು ತಿಳಿಸಿದ್ದಾರೆ. ದಶಕಗಳ ಸುದೀರ್ಘ ಕಾನೂನು ಹೋರಾಟದ ನಂತರ ನವೆಂಬರ್ 9, 2019 ರಂದು ಸುಪ್ರೀಂಕೋರ್ಟ್, ಡಿಸೆಂಬರ್ 6, 1992 ರಂದು ಬಾಬರಿ ಮಸೀದಿಯನ್ನು ಕೆಡವಲಾದ ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 5, 2020 ರಂದು ದೇವಾಲಯದ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿದರು.

ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ ಸಾಲದು, ದೇಶ ರಾಮರಾಜ್ಯವಾಗಬೇಕು: ಪೇಜಾವರ ಶ್ರೀ

Last Updated : Feb 15, 2023, 9:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.