ETV Bharat / bharat

ಅನೈತಿಕ ಸಂಬಂಧ ಆರೋಪ: ಸತ್ವ ಪರೀಕ್ಷೆ ಎಂದು ಕುದಿಯೋ ಎಣ್ಣೆಗೆ ಕೈ ಹಾಕಿ ಸುಟ್ಟುಕೊಂಡ್ರು! - ಗುಜರಾತ್

ಅನೈತಿಕ ಸಂಬಂಧ ಇಲ್ಲ ಎಂದು ತೋರಿಸಿಕೊಳ್ಳಲು ಸತ್ವ ಪರೀಕ್ಷೆಗಿಳಿದ ಇಬ್ಬರು ಕುದಿಯುವ ಎಣ್ಣೆಗೆ ಕೈಹಾಕಿ ಕೈ ಸುಟ್ಟುಕೊಂಡಿದ್ದಾರೆ.

two persons hand was dipped in boiling oil in dhangadhra
ಸತ್ವ ಪರೀಕ್ಷೆ ಎಂದು ಕುದಿಯೋ ಎಣ್ಣೆಗೆ ಕೈ ಹಾಕಿ ಸುಟ್ಟುಕೊಂಡ್ರು!
author img

By

Published : Jul 15, 2021, 8:17 PM IST

ಗುಜರಾತ್​: ರಾಮ ತನ್ನ ಪತ್ನಿ ಸೀತೆಯನ್ನು ಪರೀಕ್ಷಿಸಲು ಅಗ್ನಿಪರೀಕ್ಷೆ ನಡೆಸಿದ್ದು ಪುರಾಣ ಪ್ರಸಿದ್ಧ ಕಥೆ. ಅಂತಹ ಘಟನೆಯನ್ನು ನೆನಪಿಸುತ್ತೆ ಈ ಇಬ್ಬರು ಮಾಡಿದ ಕೆಲಸ. ಆದರೆ, ಇಬ್ಬರೂ ಈ ಪರೀಕ್ಷೆಯಲ್ಲಿ ಸೋತಿದ್ದಾರೆ.

ಹೌದು, ಗುಜರಾತ್‌ ಧ್ರಂಗಾಧ್ರಾ ಪಟ್ಟಣದಿಂದ ಪಶ್ಚಿಮಕ್ಕೆ 20 ಕಿ.ಮೀ ದೂರದಲ್ಲಿರುವ ನಿಮಕ್​ನಗರ ನಿವಾಸಿ ಗೀತಾ ವಿಂಚಿಯಾ (39) ಮತ್ತು ಧೀರೂ ಭೀಮಾನಿ (60) ಸಾರ್ವಜನಿಕವಾಗಿ ಕುದಿಯುವ ಎಣ್ಣೆಯಲ್ಲಿ ಕೈ ಮುಳುಗಿಸಿ ಕೈ ಸುಟ್ಟುಕೊಂಡರು.

ಸತ್ವ ಪರೀಕ್ಷೆ ಎಂದು ಕುದಿಯೋ ಎಣ್ಣೆಗೆ ಕೈ ಹಾಕಿ ಸುಟ್ಟುಕೊಂಡ್ರು!

ಪ್ರಕರಣದ ಮತ್ತಷ್ಟು ವಿವರ..

ವಿಂಚಿಯಾ ಎಂಬಾಕೆಯ ಪತಿ ಕೆಲಸಕ್ಕಾಗಿ ಮುಂಜಾನೆ ಮನೆಯಿಂದ ಹೋದ ನಂತರದಲ್ಲಿ ಒಬ್ಬ ವ್ಯಕ್ತಿಯು ನಿರಂತರವಾಗಿ ಆಕೆಯ ಮನೆಗೆ ಬರುತ್ತಾನೆ ಎಂದು ಭೀಮಾನಿ ಎಂಬಾತ ಆರೋಪಿಸಿದ್ದಾನೆ. ಆದರೆ ಈ ಆರೋಪವನ್ನು ಮಹಿಳೆ ತಿರಸ್ಕರಿಸಿದ್ದಾಳೆ. ನಂತರ ನಡೆದ ಬೆಳವಣಿಗೆಯಲ್ಲಿ ಯಾರು ನಿರಪರಾಧಿ? ಎಂದು ಸಾಬೀತುಪಡಿಸಲು ಮುಂದಾಗುತ್ತಾರೆ. ಆಗ ಹೊಳೆದಿದ್ದೇ ಕುದಿಯುವ ಎಣ್ಣೆಯಲ್ಲಿ ಕೈ ಹಾಕುವ ಪ್ರಸಂಗ.

ಈ ಘಟನೆ ಸಂಬಂಧ ವಿಂಚಿಯಾ ಮತ್ತು ಭೀಮನಿಯನ್ನು ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಸೆಕ್ಷನ್ 107 ಅಡಿಯಲ್ಲಿ ಧ್ರಂಗಾಧ್ರಾ ತಾಲ್ಲೂಕು ಪೊಲೀಸರು ವಶಕ್ಕೆ ಪಡೆದಿದ್ದಾರೆ.

'ಕಳೆದ ಎರಡು ತಿಂಗಳುಗಳಿಂದ ಭೀಮನಿ ನನ್ನ ಮೇಲೆ ಅನೈತಿಕ ಸಂಬಂಧದ ವದಂತಿಗಳನ್ನು ಹಬ್ಬಿಸುತ್ತಿದ್ದರು. ನನ್ನ ಪತಿ ಬೆಳಿಗ್ಗೆ 4 ಗಂಟೆಗೆ ಕೆಲಸಕ್ಕೆ ತೆರಳಿದ ನಂತರ ಒಬ್ಬ ವ್ಯಕ್ತಿಯು ನನ್ನ ಮನೆಗೆ ಪ್ರವೇಶಿಸುವುದನ್ನು ನೋಡಿದ್ದೇನೆ ಎಂದು ಅವರು ಹೇಳಿಕೊಳ್ಳುತ್ತಿದ್ದರು. ಹೀಗಾಗಿ ನಾನು ಏನು ಎಂದು ಸಾಬೀತುಪಡಿಸಲು ಪರೀಕ್ಷೆಗೆ ಅಣಿಯಾದೆ' ಎಂದು ಹೇಳಿದ್ದಾಳೆ ಮಹಿಳೆ.

'ನಾವು ಮದುವೆಯಾಗಿ 27 ವರ್ಷಗಳಾಗಿವೆ. ಆದರೆ ನನಗೆ ಗರ್ಭ ಧರಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಜನರು ವದಂತಿಗಳನ್ನು ಹರಡುತ್ತಿದ್ದಾರೆ' ಎಂದು ವಿಂಚಿಯಾ ದುಃಖ ತೋಡಿಕೊಂಡಳು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.