ಶ್ರೀಕಾಕುಲಂ (ಆಂಧ್ರಪ್ರದೇಶ): ಟ್ರ್ಯಾಕ್ಟರ್ ಟೈರ್‌ಗೆ ಗಾಳಿ ತುಂಬುವ ವೇಳೆ ಟೈರ್ ಬ್ಲಾಸ್ಟ್ ಆಗಿ ಇಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ನಡೆದಿದೆ.
ಶ್ರೀಕಾಕುಲಂನ ಕೋಮನಪಲ್ಲಿ ಗ್ರಾಮದಲ್ಲಿ ದಾಸರಿ ಸೂರ್ಯನಾರಾಯಣ ಎಂಬುವರು ಮೂವತ್ತು ವರ್ಷಗಳಿಂದ ಸೈಕಲ್ ರಿಪೇರಿ ಅಂಗಡಿ ನಡೆಸುತ್ತಿದ್ದರು. ನಿನ್ನೆ ರಾತ್ರಿ ಅಂಗಡಿ ಮುಚ್ಚುವ ವೇಳೆ ಬೊಮ್ಮಾಲಿ ಗೋವಿಂದ ಎಂಬ ಗ್ರಾಹಕರೊಬ್ಬರು ಟ್ರಾಕ್ಟರ್ ಟೈರ್ ತಂದು ಗಾಳಿ ತುಂಬಲು ಹೇಳಿದ್ದಾರೆ. ಗಾಳಿ ತುಂಬುವಾಗ ಟೈರ್ ಸ್ಫೋಟಿಸಿದ್ದು, ಇದರ ರಭಸಕ್ಕೆ ಸೂರ್ಯನಾರಾಯಣ ಹಾಗೂ ಗೋವಿಂದ ಇಬ್ಬರೂ ಹತ್ತು ಅಡಿ ಮೇಲಕ್ಕೆ ಹಾರಿ ಬಿದ್ದಿದ್ದಾರೆ.
ಇದನ್ನೂ ಓದಿ: 10 ವರ್ಷದ ಹಿಂದೆ ಹೆಂಡತಿ ಬಿಟ್ಟು ಹೋಗಿದ್ದ ಪತಿರಾಯ: ಪತ್ನಿ ಬೇರೆಯವನ ಜೊತೆ ಇದ್ದಿದ್ದನ್ನು ನೋಡಿ ಆತ ಮಾಡಿದ್ದೇನು?
ಸೂರ್ಯನಾರಾಯಣ ಸ್ಥಳದಲ್ಲೇ ಮೃತಪಟ್ಟಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಗೋವಿಂದ ಸಾವನ್ನಪ್ಪಿದ್ದಾರೆ. ಇಬ್ಬರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.