ETV Bharat / bharat

ಮನೆಯ ಮೇಲ್ಛಾವಣಿ ಕುಸಿತ : ಇಬ್ಬರು ಸಾವು, ಮತ್ತಿಬ್ಬರು ಗಂಭೀರ

ಮನೆ ಹಳೆಯದಾಗಿದ್ದು, ಬಾಡಿಗೆಗೆ ಪಡೆದು ನಾಲ್ವರು ವಾಸ ಮಾಡುತ್ತಿದ್ದರು. ಗಾಯಗೊಂಡ ಇಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ..

delhi
ಬೇಗಂಪುರ ಪ್ರದೇಶದಲ್ಲಿ ಕುಸಿದ ಮನೆಯ ಮೇಲ್ಛಾವಣಿ
author img

By

Published : Jan 7, 2022, 12:39 PM IST

ನವದೆಹಲಿ : ಮನೆಯ ಮೇಲ್ಛಾವಣಿ ಕುಸಿದು ಇಬ್ಬರು ಸಾವನ್ನಪ್ಪಿದ್ದರೆ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ದೆಹಲಿಯ ಬೇಗಂಪುರ ಪ್ರದೇಶದಲ್ಲಿ ನಡೆದಿದೆ.

ಈ ಕುರಿತು ಮಾಹಿತಿ ನೀಡಿರುವ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು, ಇಂದು ಬೆಳಗ್ಗೆ 4:24ಕ್ಕೆ ಬೇಗಂಪುರ ಪ್ರದೇಶದಲ್ಲಿ ಮನೆಯ ಮೇಲ್ಛಾವಣಿ ಕುಸಿದ ಕುರಿತು ಕರೆ ಬಂತು. ಕೂಡಲೇ ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಯಿತು.

ಮನೆ ಹಳೆಯದಾಗಿದ್ದು, ಬಾಡಿಗೆಗೆ ಪಡೆದು ನಾಲ್ವರು ವಾಸ ಮಾಡುತ್ತಿದ್ದರು. ಗಾಯಗೊಂಡ ಇಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬೇಗಂಪುರ ಪ್ರದೇಶದಲ್ಲಿ ಕುಸಿದ ಮನೆಯ ಮೇಲ್ಛಾವಣಿ..

ಜೈನನಗರ, ಬೇಗಂಪುರ ಭಾಗದಲ್ಲಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸದ ಹಿನ್ನೆಲೆ ಹಲವು ಮನೆಗಳು ಕುಸಿಯುತ್ತಿವೆ. ಈ ಕುರಿತು ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದರೂ ಕೂಡ ಯಾವುದೇ ಪ್ರಯೋಜವಾಗಿಲ್ಲ ಎಂದು ಸ್ಥಳೀಯರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.