ETV Bharat / bharat

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೆರಡು ಚೀತಾ ಮರಿಗಳ ಸಾವು

ಮೊನ್ನೆ ತಾನೇ ಜ್ವಾಲಾ ಎಂಬ ಹೆಣ್ಣು ಚೀತಾ 4 ಮರಿಗಳಿಗೆ ಜನ್ಮ ನೀಡಿತ್ತು. ಆದರೆ ಅತಿಯಾದ ತಾಪಮಾನ ಮತ್ತು ನಿರ್ಜಲೀಕರಣದಿಂದ 3 ಮರಿಗಳು ಸಾವನ್ನಪ್ಪಿವೆ.

Cheetah cubs die
ಚೀತಾ ಮರಿಗಳು ಸಾವು
author img

By

Published : May 26, 2023, 1:50 PM IST

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (ಕೆಎನ್‌ಪಿ) ಭಾರತ ಮೂಲದ ಇನ್ನೂ ಎರಡು ಚೀತಾ ಮರಿಗಳು ಸಾವನ್ನಪ್ಪಿವೆ ಎಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮೂಲಕ ದೇಶದಲ್ಲಿ ಮಹತ್ವಾಕಾಂಕ್ಷೆಯ ಚೀತಾ ಪುನರುಜ್ಜೀವನ ಯೋಜನೆಗೆ ಹಿನ್ನಡೆಯಾಗಿದೆ.

ಈ 2 ಮರಿಗಳ ಸಾವಿನೊಂದಿಗೆ ಒಟ್ಟು ಕೆಎನ್‌ಪಿಯಲ್ಲಿ ಮೃತಪಟ್ಟ ಚೀತಾ ಮರಿಗಳ ಸಂಖ್ಯೆ ಮೂರಕ್ಕೆ ಏರಿದೆ. ನಮೀಬಿಯಾದಿಂದ ಭಾರತದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಚೀತಾಗಳನ್ನು ಕರೆತರಲಾಗಿತ್ತು. ಕರೆತಂದಿದ್ದ ಚೀತಾಗಳ ಪೈಕಿ "ಜ್ವಾಲ" ಎನ್ನುವ ಚೀತಾದ ಎರಡು ಮರಿಗಳು ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಗುರುವಾರ ತಿಳಿಸಿದೆ. ಕೆಲ ದಿನಗಳ ಹಿಂದೆ ಜ್ವಾಲಾ ಚೀತಾ 4 ಮರಿಗಳಿಗೆ ಜನ್ಮ ನೀಡಿತ್ತು. ಅದರಲ್ಲಿ ಒಂದು ಮರಿ ಮಂಗಳವಾರ ಮೃತಪಟ್ಟಿತ್ತು. ಈಗ ಇನ್ನೆರಡು ಮರಿಗಳು ಸಾವನ್ನಪ್ಪಿದ್ದು ಒಟ್ಟು 4 ಮರಿಗಳ ಪೈಕಿ 3 ಮರಿಗಳು ಸಾವನ್ನಪ್ಪಿವೆ.

ಮರಿಗಳ ಸಾವಿಗೆ ಕಾರಣ: ತಾಪಮಾನವು 46-47 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಮರಿಗಳು ತೀವ್ರ ನಿರ್ಜಲೀಕರಣಗೊಂಡಿವೆ. ಇದರಿಂದ ಮರಿಗಳ ಸಾವಾಗುತ್ತಿದೆ ಎನ್ನಲಾಗಿದೆ. ಮಾಹಿತಿಯ ಪ್ರಕಾರ ಮಂಗಳವಾರ ಒಂದು ಮರಿ ಸಾವನ್ನಪ್ಪಿದ ಬಳಿಕ ಉಳಿದ ಮೂರು ಮರಿಗಳ ಮೇಲೆ ತೀವ್ರಾ ನಿಗಾ ಇಡಲಾಗಿತ್ತು. ಮಧ್ಯಾಹ್ನ ಜ್ವಾಲಾ ಚೀತಾಗೆ ಪೂರಕ ಆಹಾರ ನೀಡಲಾಯಿತು.

ಇದನ್ನೂ ಓದಿ: ಎರಡು ತಿಂಗಳೊಳಗೆ 3 ಚೀತಾ ಸಾವು: ಸುಪ್ರೀಂ ಕೋರ್ಟ್ ಕಳವಳ, ರಾಜಸ್ಥಾನಕ್ಕೆ ಸ್ಥಳಾಂತರಿಸಲು ಸಲಹೆ

ಆದರೆ, ಅದರ ಮೂರು ಮರಿಗಳ ಆರೋಗ್ಯ ಹಠಾತ್​ ಹದಗೆಟ್ಟಿದೆ. ತಕ್ಷಣ ಅವುಗಳನ್ನು ಚಿಕಿತ್ಸೆಗಾಗಿ ಪಾಲ್ಪುರದ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ 3 ಮರಿಗಳು ಸಾವನ್ನಪ್ಪಿವೆ. ಉಳಿದ 1 ಮರಿಯ ಸ್ಥಿತಿಯು ಹದಗೆಟ್ಟಿದೆ ಎಂದು ಹೇಳಲಾಗುತ್ತಿದೆ. ಇಲ್ಲಿರುವ ಚೀತಾಗಳ ಮತ್ತು ಮರಿಗಳ ಚಿಕಿತ್ಸೆಗಾಗಿ, ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದ ಚೀತಾ ತಜ್ಞರಿಂದ ನಿರಂತರ ಸಲಹೆಯನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ.

ಇದಕ್ಕೂ ಮೊದಲು, ಸ್ಥಳಾಂತರಗೊಂಡ ನಮೀಬಿಯಾದ ಚೀತಾಗಳಲ್ಲಿ ಒಂದಾದ ಸಶಾ ಮಾರ್ಚ್ 27 ರಂದು ಮೂತ್ರಪಿಂಡ ಸಂಬಂಧಿತ ಕಾಯಿಲೆಯಿಂದ ಸಾವನ್ನಪ್ಪಿದ್ದರೆ, ದಕ್ಷಿಣ ಆಫ್ರಿಕಾದ ಉದಯ್ ಎಂಬ ಮತ್ತೊಂದು ಚೀತಾ ಏಪ್ರಿಲ್ 13 ರಂದು ಸಾವನ್ನಪ್ಪಿತು. ದಕ್ಷಿಣ ಆಫ್ರಿಕಾದಿಂದ ತರಲಾದ ದಕ್ಷ ಎಂಬ ಚಿರತೆ, ಈ ವರ್ಷ ಮೇ 9 ರಂದು ಗಾಯಗಳಿಂದ ಸಾವನ್ನಪ್ಪಿತ್ತು.

ದೇಶದಲ್ಲಿ ಚೀತಾ ಅಳಿವಿನಂಚಿನಲ್ಲಿರುವುದರಿಂದ ಸೆಪ್ಟೆಂಬರ್ 17, 2022 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನಮೀಬಿಯಾದಿಂದ ತಂದ ಐದು ಹೆಣ್ಣು ಮತ್ತು ಮೂರು ಗಂಡು ಚೀತಾಗಳನ್ನು ಕೆಎನ್‌ಪಿಯಲ್ಲಿ ಆವರಣದಲ್ಲಿ ಬಿಡಲಾಗಿತ್ತು. ಈ 2023 ರ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ತರಲಾಯಿತು.

ಇದನ್ನೂ ಓದಿ: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ದುರಂತ: ಎರಡು ತಿಂಗಳ ಚೀತಾ ಮರಿ ಸಾವು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.