ETV Bharat / bharat

ಮಣಿಪುರ ಹಿಂಸಾಚಾರ: ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಕೊಲೆಯಾದ ಸ್ಥಿತಿಯಲ್ಲಿ ಪತ್ತೆ - ಮಣಿಪುರದ ವಿದ್ಯಾರ್ಥಿಗಳ ಸಾವು

ಮಣಿಪುರ ಜನಾಂಗೀಯ ಸಂಘರ್ಷದ ವೇಳೆ, ಕಳೆದ ಜುಲೈನಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿದ್ಯಾರ್ಥಿಗಳ ಹತ್ಯೆಯ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಸರ್ಕಾರ ಸಂಯಮದಿಂದಿರುವಂತೆ ಜನರಿಗೆ ಮನವಿ ಮಾಡಿದೆ.

two missing students  two missing students killed by somebody  manipur violence  manipur violence news  ವಿದ್ಯಾರ್ಥಿಗಳಿಬ್ಬರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆ  ಫೋಟೋ ವೈರಲ್​ ತಾಳ್ಮೆಯಿಂದಿರಿ ಎಂದ ಸರ್ಕಾರ  ಮಣಿಪುರದಲ್ಲಿ ಕೋಮು ಸಂಘರ್ಷ  ಮಣಿಪುರದಲ್ಲಿ ಕೋಮು ಸಂಘರ್ಷದಲ್ಲಿ ಅಮಾಯಕರು ಬಲಿ  ಇಬ್ಬರು ವಿದ್ಯಾರ್ಥಿಗಳು ಕೊಲೆಯಾದ ಸ್ಥಿತಿಯಲ್ಲಿ ಪತ್ತೆ  ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ವೈರಲ್  ಮಣಿಪುರದ ವಿದ್ಯಾರ್ಥಿಗಳ ಸಾವು  ರಾಜ್ಯದಲ್ಲಿ ಬಿಗಿ ಭದ್ರತೆ
ನಾಪತ್ತೆಯಾಗಿದ್ದ ವಿದ್ಯಾರ್ಥಿಗಳಿಬ್ಬರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆ
author img

By ETV Bharat Karnataka Team

Published : Sep 26, 2023, 1:03 PM IST

ಇಂಫಾಲ (ಮಣಿಪುರ): ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಈಶಾನ್ಯ ರಾಜ್ಯ ಮಣಿಪುರದಲ್ಲಿ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜುಲೈ ತಿಂಗಳಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿದ್ದಾರೆ. ಈ ವಿದ್ಯಾರ್ಥಿಗಳನ್ನು ಶಸ್ತ್ರಸಜ್ಜಿತ ತಂಡ ಹತ್ಯೆ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸೋಮವಾರ ರಾತ್ರಿಯಿಂದಲೇ ಮೃತದೇಹಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮತ್ತೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ವಿದ್ಯಾರ್ಥಿಗಳ ಶವವಿರುವ ಫೋಟೋಗಳು ವೈರಲ್ ಆಗುತ್ತಿವೆ.

ವಿದ್ಯಾರ್ಥಿಗಳನ್ನು ಶಸ್ತ್ರಸಜ್ಜಿತ ವ್ಯಕ್ತಿಗಳು ಅಪಹರಿಸಿ ಹತ್ಯೆಗೈದಿದ್ದಾರೆ ಎಂದು ಹೇಳಲಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ಸೆರೆಹಿಡಿದಿರುವ ಫೋಟೋದಲ್ಲಿ ಶಸ್ತ್ರಧಾರಿಗಳು ವಿದ್ಯಾರ್ಥಿಗಳ ಹಿಂದೆ ನಿಂತಿರುವುದನ್ನು ಫೋಟೋದಲ್ಲಿ ನೋಡಬಹುದು. ಪೊದೆಗಳ ನಡುವೆ ವಿದ್ಯಾರ್ಥಿಗಳ ಶವ ಎಸೆದಿರುವ ಮತ್ತೊಂದು ಫೋಟೋ ದೊರೆತಿದೆ.

ಕೊಲೆಯಾದ ವಿದ್ಯಾರ್ಥಿಗಳನ್ನು 17 ವರ್ಷದ ಬಾಲಕಿ ಮತ್ತು 20 ವರ್ಷದ ಮೈತೇಯಿ ಸಮುದಾಯಕ್ಕೆ ಸೇರಿದ ಯುವಕ ಎಂದು ಸರ್ಕಾರ ಗುರುತಿಸಿದೆ. ಜುಲೈ 6ರಂದು ಇಬ್ಬರೂ ನಾಪತ್ತೆಯಾಗಿದ್ದರು. ಜುಲೈ 6ರಂದು ಹುಡುಗಿ ತನ್ನ ಸ್ನೇಹಿತನೊಂದಿಗೆ ಹೊರಹೋಗಿದ್ದಳು. ಅಂದಿನಿಂದ ನಾಪತ್ತೆಯಾಗಿದ್ದರು. ಇಬ್ಬರು ಇಂಫಾಲ್ ಬಳಿಯ ನಂಬೋಲ್ ಕಡೆಗೆ ಹೋಗಿರುವುದು ಸಿಸಿಟಿವಿ ಕ್ಯಾಮರಾಗಳ ಮೂಲಕ ತಿಳಿದುಬಂದಿತ್ತು. ಬಳಿಕ ಫೋನ್‌ಗಳು ಸ್ವಿಚ್ ಆಫ್ ಆಗಿದ್ದವು. ಫೋನ್ ಸಿಗ್ನಲ್‌ಗಳನ್ನು ಕೊನೆಯದಾಗಿ ಚುರಾಚಂದ್‌ಪುರ ಜಿಲ್ಲೆಯ ವಿಂಟರ್ ಫ್ಲವರ್ ಟೂರಿಸ್ಟ್ ಸೆಂಟರ್‌ನಲ್ಲಿ ಪತ್ತೆ ಹಚ್ಚಲಾಗಿತ್ತು.

ಮಣಿಪುರ ಸರ್ಕಾರ ಮನವಿ: ಇಂಫಾಲದ ವಿಂಟರ್ ಫ್ಲವರ್ ಟೂರಿಸ್ಟ್ ಸೆಂಟರ್​ನಿಂದಲೇ ವಿದ್ಯಾರ್ಥಿಗಳನ್ನು ಅಪಹರಿಸಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣವನ್ನು ಈಗಾಗಲೇ ಸಿಬಿಐ ತನಿಖೆಗೆ ವಹಿಸಲಾಗಿದೆ ಎಂದು ಮಣಿಪುರ ಸರ್ಕಾರ ಹೇಳಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಭರವಸೆ ನೀಡಿದೆ. ಕುಕಿ ಪಂಗಡಕ್ಕೆ ಸೇರಿದ ದುಷ್ಕರ್ಮಿಗಳು ಹತ್ಯೆಗೈದಿರುವ ಶಂಕೆಯಿದೆ. ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ರಾಜ್ಯದ ಜನರು ಸಂಯಮದಿಂದ ವರ್ತಿಸುವಂತೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಬಿಗಿ ಭದ್ರತೆ: ಕೇಂದ್ರ ಸಶಸಸ್ತ್ರ ಪಡೆಗಳ ಸಹಾಯದಿಂದ ರಾಜ್ಯ ಪೊಲೀಸರು ಆರೋಪಿಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ. ಕೊಲೆಯ ಹೊಣೆಗಾರರನ್ನು ಯಾವುದೇ ಸಂದರ್ಭದಲ್ಲೂ ಬಿಡುವುದಿಲ್ಲ. ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಣಿಪುರದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಫೋಟೋಗಳಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳ ಮುಖಗಳನ್ನು ಗುರುತಿಸುವುದು ಕಷ್ಟಕರವಾಗಿದೆ. ಹೀಗಾಗಿ ಸೈಬರ್ ಫೋರೆನ್ಸಿಕ್ ಉಪಕರಣಗಳ ಮೂಲಕ ಅವರನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಮಣಿಪುರ ಹಿಂಸಾಚಾರ: ಉನ್ನತ ಶಿಕ್ಷಣಕ್ಕಾಗಿ ಕೇರಳಕ್ಕೆ ಬಂದ ಕುಕಿ ವಿದ್ಯಾರ್ಥಿಗಳು.. ಉಚಿತ ಊಟ, ವಸತಿ ವ್ಯವಸ್ಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.