ETV Bharat / bharat

ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾರ: 8 ಯುವಕರ ಬಂಧನ

author img

By

Published : Mar 31, 2021, 8:58 AM IST

ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ 8 ಯುವಕರನ್ನು ತ್ರಿಪುರದ ಚಂಪಾಹೌರ್ ಪೊಲೀಸರು ಬಂಧಿಸಿದ್ದಾರೆ.

Two minor girls gang raped, eight arrested
ಬಂಧಿತ ಅತ್ಯಾಚಾರ ಆರೋಪಿಗಳು

ಚಂಪಾಹೌರ್ (ಖೋವಾಯಿ): ತ್ರಿಪುರದ ಖೋವಾಯ್ ಜಿಲ್ಲೆಯ ಖತಿಯಾಬರಿ ಪ್ರದೇಶದಲ್ಲಿ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ 8 ಯುವಕರನ್ನು ಬಂಧಿಸಲಾಗಿದೆ.

ಇಬ್ಬರು ಬಾಲಕಿಯರು ಸೋಮವಾರ ಸಂಜೆ ತಮ್ಮ ಮೋಟಾರ್ ಸೈಕಲ್‌ಗಳಲ್ಲಿ ಸ್ನೇಹಿತರೊಂದಿಗೆ ಕಾಲಕಳೆಯಲೆಂದು ಮನೆಯಿಂದ ಹೊರಹೋಗಿದ್ದರು. ಇವರೊಂದಿಗೆ ಖತಿಯಾಬರಿ ಪ್ರದೇಶದಲ್ಲಿ 6 ಬೈಕ್​ಗಳಲ್ಲಿ ಯುವಕರ ಗುಂಪೊಂದು ಸೇರಿಕೊಂಡಿತು. ಬಳಿಕ ಎಲ್ಲರೂ ಶಾಂತವಾದ ಸ್ಥಳ ಹುಡುಕುತ್ತಾ ಕಾಡಿನೊಳಗೆ ಪ್ರವೇಶಿಸಿದ್ದಾರೆ. ಸಂಜೆ 7:30ರ ಸುಮಾರಿಗೆ ಅಪ್ರಾಪ್ತೆಯರೊಂದಿಗಿದ್ದ 8 ಯುವಕರು ಒಬ್ಬರಾದ ಮೇಲೊಬ್ಬರಂತೆ ಬಾಲಕಿಯರ ಮೇಲೆ ನಿರಂತರ ಅತ್ಯಾಚಾರ ಮತ್ತು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಪ್ರಜ್ಞಾಹೀನರಾಗಿದ್ದ ಬಾಲಕಿಯರು, ರಾತ್ರಿ 1 ಗಂಟೆ ಸುಮಾರಿಗೆ ತಮ್ಮ ಪೋಷಕರನ್ನು ಸಂಪರ್ಕಿಸಿ ನಡೆದ ವಿಷಯವನ್ನು ತಿಳಿಸಿದ್ದಾರೆ. ತಕ್ಷಣ ಬಾಲಕಿಯರ ಪೋಷಕರು ಚಂಪಾಹೌರ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು, ಬಾಲಕಿಯರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 341/376 (ಡಿ) / 506 ಮತ್ತು 6 ಪೋಸ್ಕೋ ಅಡಿ ಪ್ರಕರಣ ದಾಖಲಿಸಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಬಂಧಿತರನ್ನು ಚಂಪಾಹೌರ್ ಪೊಲೀಸ್ ಠಾಣಾ ವ್ಯಾಪ್ತಿಯ ಫುಲ್ಟಾಲಿ ಪ್ರದೇಶದ ಜಗ್ಗು ಡೆಬ್ಬರ್ಮಾ (21), ಬಿಮಲ್ ಡೆಬ್ಬರ್ಮಾ (22), ಮೈಕೆಲ್ ಡೆಬ್ಬರ್ಮಾ (19), ರಿಶಿತಾ ಡೆಬ್ಬರ್ಮಾ (19), ಬಿಕಾಶ್ ಡೆಬ್ಬರ್ಮಾ (22) ), ನಿತೇಶ್ ಡೆಬ್ಬರ್ಮಾ (21), ಜ್ಯುವೆಲ್ ಡೆಬ್ಬರ್ಮಾ (19) ಮತ್ತು ಬೀರೇಶ್ ಡೆಬ್ಬರ್ಮಾ (19 ) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ: ಇಬ್ಬರು ಅಂತಾರಾಜ್ಯ ಬೈಕ್ ಕಳ್ಳರ ಬಂಧನ.. 6 ಲಕ್ಷ ರೂ. ಮೌಲ್ಯದ 10 ವಾಹನಗಳು ವಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.