ETV Bharat / bharat

ಸರಕು ಸಾಗಿಸುವ 2 ಹಡಗುಗಳ ನಡುವೆ ಡಿಕ್ಕಿ ; ಭಾರತೀಯ ಕೋಸ್ಟ್ ಗಾರ್ಡ್ ಹೈ ಅಲರ್ಟ್‌

Two merchant vessels collide : ಗುಜರಾತ್‌ ಸಮೀಪದ ಕಚ್ ಕೊಲ್ಲಿಯಲ್ಲಿ ಎರಡು ಸರಕು ಸಾಗಣೆ ಹಡಗುಗಳ ನಡುವೆ ಡಿಕ್ಕಿಯಾಗಿದೆ. ತೈಲ ಸೋರಿಕೆಯ ಭೀತಿಯಿಂದಾಗಿ ಭಾರತೀಯ ಕೋಸ್ಟ್ ಗಾರ್ಡ್ ಪರಿಸ್ಥಿತಿಯ ಮೇಲೆ ನಿಗಾ ಇರಿಸಿವೆ..

Two merchant vessels collide in Gulf of Kutch, Indian Coast Guard monitoring situation to prevent oil spill
ಸರಕು ಸಾಗಾಟದ 2 ಹಡಗುಗಳ ನಡುವೆ ಡಿಕ್ಕಿ; ಭಾರತೀಯ ಕೋಸ್ಟ್ ಗಾರ್ಡ್ ಹೈ ಅಲರ್ಟ್‌
author img

By

Published : Nov 27, 2021, 8:10 PM IST

ಕಚ್ (ಗುಜರಾತ್): ಎರಡು ಸರಕು ಸಾಗಿಸುವ ಹಡಗುಗಳು ಡಿಕ್ಕಿ ಹೊಡೆದಿರುವ ಘಟನೆ ಗುಜರಾತ್‌ ಸಮೀಪದ ಕಚ್ ಕೊಲ್ಲಿಯಲ್ಲಿ ನಡೆದಿದೆ. ಏವಿಯೇಟರ್ ಹಾಗೂ ಎಂವಿ ಏನ್ಷಿಯಂಟ್ ಗ್ರೇಸ್ ಎಂಬ ಎರಡು ಹಡಗುಗಳು ಅಪಘಾತಕ್ಕೀಡಾಗಿವೆ. ಭಾರತೀಯ ಕೋಸ್ಟ್ ಗಾರ್ಡ್ ಪರಿಸ್ಥಿತಿಯ ಮೇಲೆ ನಿಗಾ ಇರಿಸಿರುವುದಾಗಿ ಐಸಿಜಿ ಅಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್ 26ರ ರಾತ್ರಿ ಈ ಘರ್ಷಣೆ ಸಂಭವಿಸಿದೆ. ಮಾಲಿನ್ಯ ನಿಯಂತ್ರಣ ನೌಕೆ ಸೇರಿದಂತೆ ಪ್ರದೇಶದಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಹಡುಗುಗಳು ಸಮೀಪದಲ್ಲಿ ಮುಂಜಾಗ್ರತಾ ಕ್ರಮವಾಗಿ ಸನ್ನದ್ಧವಾಗಿವಾಗಿವೆ ಎಂದು ಗುಜರಾತ್‌ನ ಡಿಫೆನ್ಸ್‌ ಪಿಆರ್‌ಒ ಮೂಲಗಳು ತಿಳಿಸಿವೆ.

ನ್ಯಾವಿಗೇಷನಲ್ ದೋಷದಿಂದ ಘರ್ಷಣೆ ಸಂಭವಿಸಿದೆ ಎನ್ನಲಾಗಿದೆ. ಯಾವುದೇ ಸಂಭವನೀಯ ತೈಲ ಸೋರಿಕೆಯನ್ನು ತಡೆಯಲು ಭಾರತೀಯ ಕೋಸ್ಟ್ ಗಾರ್ಡ್ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಐಸಿಜಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.