ಮೇದಕ್(ತೆಲಂಗಾಣ): ಜಿಲ್ಲೆಯಲ್ಲಿ ಒಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಯುವಕರಿಬ್ಬರ ಮಧ್ಯೆ ಮದುವೆ ನಡೆದಿದ್ದು, ತಾಳಿ ಕಟ್ಟಿಸಿಕೊಂಡಿರುವ ಯುವಕ ಆತನೊಂದಿಗೆ ಸಂಸಾರ ಮಾಡುವುದಾಗಿ ಹಠ ಹಿಡಿದಿದ್ದ ವಿಚಿತ್ರ ಘಟನೆ ಚಿಲಪ್ಚೆಡ್ ತಾಲೂಕಿನಲ್ಲಿ ನಡೆದಿದೆ.
ಏನಿದು ಘಟನೆ.. ಈ ವಿಚಿತ್ರ ಮತ್ತು ಅಸಹ್ಯ ಘಟನೆ ಮೇದಕ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಚಿಲಪ್ಚೆಡ್ ತಾಲೂಕಿನ ಚಂದೂರಿನ ನಿವಾಸಿ 22 ವರ್ಷದ ಆಟೋ ಡ್ರೈವರ್ಗೆ ಸಂಗಾರೆಡ್ಡಿ ಜಿಲ್ಲೆಯ ಜೋಗಿಪೇಟೆಯ 21 ವರ್ಷದ ಯುವಕನ ಮಧ್ಯೆ ಮದುವೆಯಾಗಿದೆ.
ಸೇಂದಿ ದೋಸ್ತರು: ಮೊದಲು ಇವರಿಬ್ಬರಿಗೂ ಪರಿಚಯ ಇಲ್ಲ. ಒಂದು ದಿನ ಇವರಿಬ್ಬರು ಕೋಲ್ಚರಂ ತಾಲೂಕಿನ ದುಂಪಲಕುಂಟಾದ ಸೇಂದಿ ಅಂಗಡಿಯಲ್ಲಿ ಕುಡಿಯಲು ಕುಳಿತಿದ್ದರು. ಆಗ ಇಬ್ಬರ ಮಧ್ಯೆ ಪರಿಚಯ ಬೆಳೆದಿದೆ. ಆಗಿನಿಂದಲೂ ಇಬ್ಬರು ಸೇಂದಿ ದೋಸ್ತರಾಗಿದ್ರು ಎನ್ನಲಾಗಿದೆ.
ಓದಿ: ಜ್ಯೋತಿಷಿಯ ಭವಿಷ್ಯ ನಂಬಿ ಮೇಕೆಯೊಂದಿಗೆ ವಿವಾಹವಾದ ಯುವಕ!
ಇಬ್ಬರ ಮಧ್ಯೆ ಮದುವೆ: ಈ ತಿಂಗಳು 1ನೇ ದಿನಾಕದಂದು ಇಬ್ಬರು ಕಂಠ ಪೂರ್ತಿವರೆಗೆ ಕುಡಿದಿದ್ದಾರೆ. ಕುಡಿದ ಮತ್ತಿನಲ್ಲಿ ಚಂದೂರ್ ಯುವಕನೊಂದಿಗೆ ಜೋಗಿಪೇಟೆ ಯುವಕ ತಾಳಿ ಕಟ್ಟಿಸಿಕೊಂಡಿದ್ದಾನೆ. ಬಳಿಕ ನಡೆದಿದ್ದೇ ಬೇರೆ...
ಸಂಸಾರಕ್ಕೆ ರೆಡಿ: ತಾಳಿ ಕಟ್ಟಿಸಿಕೊಂಡ ಜೋಗಿಪೇಟೆ ಯುವಕ ಸಂಸಾರ ಮಾಡುವುದಕ್ಕೆ ರೆಡಿ ಆಗಿದ್ದಾನೆ. ಚಂದೂರ್ ಯುವಕನೇ ನನ್ನ ಗಂಡ ಎಂದು ಆತನ ಮನೆಗೆ ಸಂಸಾರಕ್ಕೆ ಹೋಗಿದ್ದಾನೆ. ಅಲ್ಲಿ ಚಂದೂರ್ ಯುವಕ ಪೋಷಕರು ಜೋಗಿಪೇಟೆ ಯುವಕನಿಗೆ ಬುದ್ಧಿ ಮಾತು ಹೇಳಿದ್ದಾರೆ. ಆದ್ರೂ ಸಹಿತ ಜೋಗಿಪೇಟೆ ಯುವಕ ಸಂಸಾರ ಮಾಡುವುದಾಗಿಯೇ ಹಠ ಹಿಡಿದಿದ್ದನು.
ಹಣಕ್ಕೆ ಬೇಡಿಕೆ: ಚಂದೂರ್ ಯುವಕನ ಪೋಷಕರು ಜೋಗಿಪೇಟೆ ಯುವಕನಿಗೆ ಕಪಾಳಮೋಕ್ಷ ಮಾಡಿ ಸ್ಥಳದಿಂದ ಕಳುಹಿಸಿದ್ದಾರೆ. ಅಲ್ಲಿಂದ ಆ ಯುವಕ ನೇರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ. ಪೊಲೀಸರು ಸ್ಥಳಕ್ಕಾಗಮಿಸಿ ಯುವಕನಿಗೆ ತಿಳಿ ಹೇಳಿದ್ದಾರೆ. ಆಗ ಜೋಗಿಪೇಟೆ ಯುವಕ 1 ಲಕ್ಷ ರೂಪಾಯಿ ಕೊಟ್ರೆ ಮಾತ್ರ ದೂರು ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿದ್ದಾನೆ.
ಓದಿ: ವಿದ್ಯಾರ್ಥಿನಿಯ ತಾಳಿ ಬಿಚ್ಚಿಸಿ ಪರೀಕ್ಷೆಗೆ ಕಳಿಸಿದ ಪೋಷಕರು : ಬೆಳಕಿಗೆ ಬಂದ ಬಾಲ್ಯವಿವಾಹ!
ಪಂಚಾಯ್ತಿ ನಡೆದಿದ್ದು ಹೀಗೆ: ಪೊಲೀಸರು ಗ್ರಾಮದ ಹಿರಿಯರು ಮತ್ತು ಇಬ್ಬರು ಯುವಕರ ಪೋಷಕರನ್ನು ಸ್ಥಳಕ್ಕೆ ಕರೆಸಿ ಪಂಚಾಯ್ತಿ ನಡೆಸಿದ್ದಾರೆ. ಸುಮಾರು ಗಂಟೆಗಳ ಕಾಲ ನಡೆದ ಪಂಚಾಯ್ತಿಯಲ್ಲಿ ಜೋಗಿಪೇಟೆ ಕುಟುಂಬಕ್ಕೆ 10 ಸಾವಿರ ರೂಪಾಯಿ ಪರಿಹಾರ ನೀಡುವುದರ ಮೂಲಕ ಈ ಪ್ರಕರಣ ಸುಖಾಂತ್ಯ ಕಂಡಿದೆ.
ದೂರು ವಾಪಸ್: 10 ಸಾವಿರ ಪರಿಹಾರ ಪಡೆದ ಜೋಗಿಪೇಟೆ ಯುವಕ ನೀಡಿರುವ ದೂರನ್ನು ವಾಪಸ್ ಪಡೆದಿದ್ದಾನೆ ಎಂದು ಚಿಲಪ್ಚೇಡ್ ಪೊಲೀಸ್ ಠಾಣೆಯ ಎಸ್ಐ ಮಹಮ್ಮದ್ ಗೌಸ್ ತಿಳಿಸಿದ್ದಾರೆ.