ETV Bharat / bharat

ಪೊಲೀಸರು ಬೆನ್ನಟ್ಟಿದ್ದಾರೆ ಎಂದು ಭಾವಿಸಿ ನದಿಗೆ ಹಾರಿದ ಸ್ಮಗ್ಲರ್ಸ್​.. ದುರ್ಮರಣ - ಬೈಕ್ ಸವಾರರು ಪೊಲೀಸ್ ವ್ಯಾನ್

ಬೈಕ್ ಸವಾರರು ಪೊಲೀಸ್ ವ್ಯಾನ್ ಎಂದು ಭಾವಿಸಿ, ತಮ್ಮ ಬೈಕ್​​ನ ವೇಗವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ. ಆಂಬ್ಯುಲೆನ್ಸ್ ಅತಿ ವೇಗದಲ್ಲಿ ಚಲಿಸುತ್ತಿತ್ತು.. ಹಾಗೂ ಅದರ ಸೈರನ್ ಮೊಳಗುತ್ತಲೇ ಇತ್ತು. ಇದರಿಂದ ಗಾಬರಿಗೊಂಡ ಇವರು ಪೊಲೀಸರೆಂದು ಭಾವಿಸಿ, ಹೆದರಿ ಧರ್ಮಾವತಿ ನದಿಗೆ ಹಾರಿದ್ದಾರೆ ಎಂದು ಕೋಚಾಸ್​ನ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Two liquor smugglers jump into river in Bihar's Rohtas, drown
ಪೊಲೀಸರು ಬೆನ್ನಟ್ಟಿದ್ದಾರೆ ಎಂದು ಭಾವಿಸಿ ನದಿಗೆ ಹಾರಿದ ಸ್ಮಗ್ಲರ್ಸ್​.. ದುರ್ಮರಣ
author img

By

Published : Dec 22, 2022, 8:03 AM IST

ಪಾಟ್ನಾ(ಬಿಹಾರ): ಇಬ್ಬರು ಮದ್ಯ ಕಳ್ಳಸಾಗಣೆದಾರರು ಬಿಹಾರದ ರೋಹ್ತಾಸ್ ಜಿಲ್ಲೆಯ ಧರ್ಮಾವತಿ ನದಿಗೆ ಹಾರಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ವಾರಾಣಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಉತ್ತರಪ್ರದೇಶದ ಚಂದೌಲಿ ಜಿಲ್ಲೆಯಿಂದ ಬಂದಿದ್ದ ಇಬ್ಬರು ಕಳ್ಳಸಾಗಾಣಿಕೆದಾರರು ಸಸಾರಾಮ್-ಚೌಸಾ ರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದರು. ಮಹಂತ್ ಭಗೀರಥ ಗ್ರಾಮಕ್ಕೆ ತಲುಪಿದಾಗ ಹಿಂದಿನಿಂದ ಆಂಬ್ಯುಲೆನ್ಸ್ ಬರುತ್ತಿತ್ತು.

ಬೈಕ್ ಸವಾರರು ಪೊಲೀಸ್ ವ್ಯಾನ್ ಎಂದು ಭಾವಿಸಿ, ತಮ್ಮ ಬೈಕ್​​ನ ವೇಗವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ. ಆಂಬ್ಯುಲೆನ್ಸ್ ಅತಿ ವೇಗದಲ್ಲಿ ಚಲಿಸುತ್ತಿತ್ತು.. ಹಾಗೂ ಅದರ ಸೈರನ್ ಮೊಳಗುತ್ತಲೇ ಇತ್ತು. ಇದರಿಂದ ಗಾಬರಿಗೊಂಡ ಇವರು ಪೊಲೀಸರೆಂದು ಭಾವಿಸಿ, ಹೆದರಿ ಧರ್ಮಾವತಿ ನದಿಗೆ ಹಾರಿದ್ದಾರೆ ಎಂದು ಕೋಚಾಸ್​ನ ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬೈಕ್ ಸವಾರರಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬನನ್ನು ರಕ್ಷಿಸಿ ವಾರಾಣಸಿಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಆದರೆ ತೀವ್ರ ಗಾಯಗೊಂಡಿದ್ದ ಅವರು ಕೊನೆಗೆ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಸಾವನ್ನಪ್ಪಿದ ಬೈಕ್​ ಸವಾರರು, ಮದ್ಯದ ಬಾಟಲ್​ಗಳನ್ನು ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: 36 ಕೇಸ್​ಗಳಲ್ಲಿ ಭಾಗಿ.. ಮೂರು ವರ್ಷಗಳ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದ ಇರಾನಿ ಗ್ಯಾಂಗ್ ಸದಸ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.