ETV Bharat / bharat

ಎಟವಾ ಸಫಾರಿ ಪಾರ್ಕ್​ನ ಎರಡು ಸಿಂಹಿಣಿಗಳಿಗೆ ಕೋವಿಡ್ ಪಾಸಿಟಿವ್! - ಉತ್ತರ ಪ್ರದೇಶದಲ್ಲಿ ಸಿಂಹಗಳಿಗೆ ಕೊರೋನಾ

ಉತ್ತರ ಪ್ರದೇಶದ ಎಟಾವಾ ಲಯನ್ ಸಫಾರಿ ಪಾರ್ಕ್​ನ ಎರಡು ಸಿಂಹಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಕಳೆದ ವಾರವಷ್ಟೇ ಹೈದಾರಾಬಾದ್​ನ ನ್ಯಾಷನಲ್ ಪಾರ್ಕ್​ನಲ್ಲಿ 8 ಸಿಂಹಗಳಲ್ಲಿ ಸೋಂಕು ಪತ್ತೆಯಾಗಿತ್ತು.

Two lionesses test positive for COVID-19 at UP's Etawah Safari Park
ಎಟವಾ ಸಫಾರಿ ಪಾರ್ಕ್​ನ ಎರಡು ಸಿಂಹಿಣಿಗಳಿಗೆ ಕೋವಿಡ್ ಪಾಸಿಟಿವ್!
author img

By

Published : May 8, 2021, 1:44 PM IST

ಎಟಾವಾ( ಉತ್ತರ ಪ್ರದೇಶ) : ಇಲ್ಲಿನ ಸಫಾರಿ ಪಾರ್ಕ್​ನಲ್ಲಿ ಎರಡು ಸಿಂಹಿಣಿಗಳಲ್ಲಿ ಕೋವಿಡ್​ ಪಾಸಿಟಿವ್ ಕಂಡು ಬಂದಿದ್ದು, ತಜ್ಞರ ಸಲಹೆಯಂತೆ ಚಿಕಿತ್ಸೆ ನೀಡಲಾಗ್ತಿದೆ ಎಂದು ಸಫಾರಿ ಪಾರ್ಕ್​ನ ನಿರ್ದೇಶಕರು ತಿಳಿಸಿದ್ದಾರೆ.

ಶುಕ್ರವಾರ ಸಂಜೆ 7 ಗಂಟೆಯವರೆಗೂ ಎರಡೂ ಸಿಂಹಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. ಏಪ್ರಿಲ್ 30 ರಂದು 9 ವರ್ಷದ ಸಿಂಹಿಣಿ ಜೆನ್ನಿಫರ್ ಮತ್ತು 4 ವರ್ಷದ ಗೌರಿಯಲ್ಲಿ 104 ರಿಂದ 105 ಡಿಗ್ರಿ ಸೆಲ್ಸಿಯಸ್ ಟೆಂಪರೇಚರ್​ ಕಂಡುಬಂದಿತ್ತು ಎಂದು ಎಟಾವ ಲಯನ್ ಸಫಾರಿ ಪಾರ್ಕ್​ನ ಅಧಿಕಾರಿಗಳು ತಿಳಿಸಿದ್ದಾರೆ.

ಮೇ 3 ಮತ್ತು 5 ರಂದು ಅಧಿಕಾರಿಗಳು ಸಿಂಹಗಳ ಮಾದರಿಗಳನ್ನು ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ (ಐವಿಆರ್​​ಐ) ಪರೀಕ್ಷೆಗೆ ಕಳುಹಿಸಿದ್ದರು.

ಓದಿ : ಕಂಗನಾಗೆ ಕೊರೊನಾ... ಈ ವೈರಸ್​​ ಹೊಡೆದೋಡಿಸುವೆ ಎಂದ ಬಾಲಿವುಡ್​ ನಟಿ

"ನಾವು ಸಿಂಹಗಳನ್ನು ಪರೀಕ್ಷೆ ನಡೆಸಿ ಮಾದರಿಯನ್ನು ಬರೇಲಿಯ ಐವಿಆರ್​ಐ ಸಂಸ್ಥೆಗೆ ಮೇ 3 ಮತ್ತು ಮೇ 6 ರಂದು ಕಳುಹಿಸಿದ್ದೆವು. ವರದಿಯಲ್ಲಿ ಎರಡೂ ಸಿಂಹಿಣಿಗಳಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದೆ" ಎಂದು ಸಫಾರಿ ನಿರ್ದೇಶಕ ಕೆ.ಕೆ. ಸಿಂಗ್ ಮಾಹಿತಿ ನೀಡಿದ್ದಾರೆ.

ಈ ಕುರಿತಂತೆ ಕಳೆದ ಗುರುವಾರ ಸಂಜೆ ಐವಿಆರ್​​ಐ ಬರೇಲಿ, ನವದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರ, ಡೆಹ್ರಾಡೂನ್​ನ ವೈಲ್ಡ್​ಲೈಫ್​ ಇನ್ಸ್​​ಟ್ಯೂಟ್​ ಆಫ್ ಇಂಡಿಯಾ ಸೇರಿದಂತೆ ವಿವಿಧ ಸಂಸ್ಥೆಗಳ ತಜ್ಞರು ಜಂಟಿ ವಿಡಿಯೋ ಕಾನ್ಫರೆನ್ಸಿಂಗ್ ನಡೆಸಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ. ಸೋಂಕಿತ ಎರಡೂ ಸಿಂಹಗಳನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಳೆದ ವಾರ, ಹೈದರಾಬಾದ್​ನ ನೆಹರು ಝೂಲಾಜಿಕಲ್ ಪಾರ್ಕ್​( ಎನ್​ಝೆಡ್​ಪಿ) ನ 8 ಸಿಂಹಗಳಲ್ಲಿ ಕೂಡ ಕೋವಿಡ್ ಸೋಂಕು ಕಂಡು ಬಂದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.