ETV Bharat / bharat

ಜಮ್ಮು ಕಾಶ್ಮೀರ: ಇಬ್ಬರು ಎಲ್​ಇಟಿ/ಟಿಆರ್‌ಎಫ್‌ ಉಗ್ರರ ಬಂಧನ - ಟಿಆರ್​ಎಫ್​ ಮತ್ತು ಎಲ್​ಇಟಿ ಸಂಘಟನೆ

ಅಹ್ಮದ್​ ಮಿರ್​ ಈಚೆಗಷ್ಟೇ ಉಗ್ರಗಾಮಿ ಸಂಘಟನೆಗೆ ಸೇರಿಕೊಂಡಿದ್ದು, ಹಫೀಜ್​ ಸೆಪ್ಟೆಂಬರ್​ನಿಂದಲೇ ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.

militants arrested
ಎಲ್​ಇಟಿ ಸಂಘಟನೆ ಉಗ್ರಗಾಮಿಗಳ ಬಂಧನ
author img

By

Published : Nov 8, 2021, 2:46 PM IST

ಶ್ರೀನಗರ: ದಕ್ಷಿಣ ಕಾಶ್ಮೀರದಲ್ಲಿ ಟಿಆರ್​ಎಫ್/​ ಎಲ್​ಇಟಿಗೆ ಸಂಬಂಧಿಸಿದ ಇಬ್ಬರು ಉಗ್ರರನ್ನು ಬಂಧಿಸಿರುವುದಾಗಿ ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಉಗ್ರರನ್ನು ಹಫೀಜ್​ ಅಬ್ದುಲ್ಲಾ ಮಲಿಕ್​, ಸರ್ವಾರ್ ಅಹ್ಮದ್​ ಮಿರ್​ ಎಂದು ಗುರುತಿಸಲಾಗಿದೆ.

ಇಬ್ಬರು ಉಗ್ರಗಾಮಿಗಳು ದಿ ರೆಸಿಸ್ಟೆಂಟ್​ ಫ್ರಂಟ್​(ಟಿಆರ್​ಎಫ್​​), ಲಷ್ಕರ್​-ಇ-ತೊಯ್ಬಾ ಸಂಘಟನೆ ಜತೆ ಗುರುತಿಸಿಕೊಂಡಿದ್ದರು. ಜಮ್ಮು ಕಾಶ್ಮೀರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹಫೀಜ್​ ಮಲಿಕ್​ ಅನಂತ್​ನಾಗ್​ ಜಿಲ್ಲೆಯ ವಹದಾನ್​ ಎಂಬಲ್ಲಿ ಸೆರೆ ಸಿಕ್ಕರೆ, ಸರ್ವಾರ್​ ಅಹ್ಮದ್​ ಮಿರ್​ ಪುಲ್ವಾಮಾದ ಬಥೆನ್​ ಎಂಬಲ್ಲಿ ಬಂಧಿಸಲಾಗಿದೆ.

ಅಹ್ಮದ್​ ಮಿರ್​ ಈಚೆಗಷ್ಟೇ ಉಗ್ರಗಾಮಿ ಸಂಘಟನೆಗೆ ಸೇರಿಕೊಂಡಿದ್ದು, ಹಫೀಜ್​ ಸೆಪ್ಟೆಂಬರ್​ನಿಂದಲೇ ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

ಉಗ್ರರ ಬಗ್ಗೆ ಖಚಿತ ಮಾಹಿತಿ ಆಧಾರದ ಮೇಲೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಲ್ಲಿಕ್​ ಮತ್ತು ಮಿರ್​ನನ್ನು ಬಂಧಿಸಲಾಗಿದೆ. ಅಲ್ಲದೇ ಮಲ್ಲಿಕ್​ನಿಂದ ಒಂದು ಪಿಸ್ತೂಲ್​ ಮತ್ತು 7 ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.