ಗುವಾಹಟಿ( ಅಸ್ಸೋಂ): ಲಂಚ ಪಡೆದ ಆರೋಪದಲ್ಲಿ ಧುಬ್ರಿ ಜಿಲ್ಲಾ ಪರಿಷತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಬಿಸ್ವಜಿತ್ ಗೋಸ್ವಾಮಿ ಮತ್ತು ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಮೃಣಾಲ್ ಕಾಂತಿ ಸರ್ಕಾರ್ ಅವರನ್ನು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ ಶುಕ್ರವಾರ ಬಂಧಿಸಿದೆ.
ಧುಬ್ರಿ ಜಿಲ್ಲಾ ಪರಿಷತ್ ಸಿಇಒ ಬಿಸ್ವಜಿತ್ ಗೋಸ್ವಾಮಿ ಅವರು ಗುತ್ತಿಗೆದಾರರಿಂದ ಪೂರ್ಣಗೊಂಡ ಕಾಮಗಾರಿಗಳ ಒಟ್ಟು ಬಿಲ್ ಮೊತ್ತದ ಶೇಕಡಾ 9 ರಷ್ಟನ್ನು ಲಂಚವಾಗಿ ಕೇಳಿದ್ದಾರೆ ಎಂಬ ದೂರು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯಕ್ಕೆ ಬಂದಿತ್ತು.
ಲಂಚ ಸ್ವೀಕರಿಸುವ ವೇಳೆ ಧುಬ್ರಿಯ ಹೆಚ್ಚುವರಿ ಜಿಲ್ಲಾ ಕಾರ್ಯಕ್ರಮ ನಿರ್ವಾಹಕ ಬಲೆಗೆ: ವಿಜಿಲೆನ್ಸ್ ಹಾಗೂ ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯದಿಂದ ಭ್ರಷ್ಟರ ಮೇಲೆ ಬಲೆ ಬೀಸಲಾಯಿತು. ಧುಬ್ರಿಯ ಹೆಚ್ಚುವರಿ ಜಿಲ್ಲಾ ಕಾರ್ಯಕ್ರಮ ನಿರ್ವಾಹಕರಾದ ಮೃಣಾಲ್ ಕಾಂತಿ ಸರ್ಕಾರ್ ಅವರು ಲಂಚದ ಬೇಡಿಕೆಯ ಭಾಗವಾಗಿ 30,000 ರೂಪಾಯಿ ಸ್ವೀಕರಿಸುವ ವೇಳೆ ಸಿಇಒ ಕಚೇರಿಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾರೆ. ಅದರ ಬೆನ್ನಲ್ಲೇ ವಿಜಿಲೆನ್ಸ್ ಧುಬ್ರಿ ಜಿಲ್ಲಾ ಪರಿಷತ್ ಸಿಇಒ ಬಿಸ್ವಜಿತ್ ಗೋಸ್ವಾಮಿ ಅವರನ್ನು ಅರೆಸ್ಟ್ ಮಾಡಲಾಗಿದೆ.
ಅಸ್ಸೋಂನ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ವಿರೋಧಿ ನಿರ್ದೇಶನಾಲಯ ಟ್ವೀಟ್: "ಟ್ರ್ಯಾಪ್ ಕಾರ್ಯಾಚರಣೆಯಲ್ಲಿ, ಧುಬ್ರಿ ಜಿಲ್ಲಾ ಪರಿಷತ್ ಸಿಇಒ ಬಿಸ್ವಜಿತ್ ಗೋಸ್ವಾಮಿ ಹಾಗೂ ಮೃಣಾಲ್ ಕಾಂತಿ ಸರ್ಕಾರ್ ಅವರನ್ನು ಬಂಧಿಸಲಾಗಿದೆ'' ಎಂದು ಅಸ್ಸೋಂನ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ವಿರೋಧಿ ನಿರ್ದೇಶನಾಲಯ ಟ್ವೀಟ್ ಮಾಡಿದೆ.
2.32 ಕೋಟಿ ರೂಪಾಯಿ ನಗದು ವಶಕ್ಕೆ: ಧುಬ್ರಿ ಜಿಲ್ಲಾ ಪರಿಷತ್ ಸಿಇಒ ಬಿಸ್ವಜಿತ್ ಗೋಸ್ವಾಮಿ ಅವರ ಅಧಿಕೃತ ಮತ್ತು ಸ್ವಂತ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಬಿಸ್ವಜಿತ್ ಗೋಸ್ವಾಮಿ ಅವರ ಮನೆಯಲ್ಲಿ ಶೋಧ ನಡೆಸಿದಾಗ 2.32 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಆಸ್ತಿ ಖರೀದಿ, ಬಹು ಬ್ಯಾಂಕ್ ಖಾತೆಗಳು ಮತ್ತು ಇತರ ಹೂಡಿಕೆಗಳಿಗೆ ಸಂಬಂಧಿಸಿದ ಹಲವಾರು ದಾಖಲೆಗಳು ಸಹ ಪತ್ತೆಯಾಗಿವೆ'' ಎಂದು ಅಧಿಕಾರಿ ತಿಳಿಸಿದ್ದಾರೆ.
ತನಿಖಾಧಿಕಾರಿಗಳನ್ನು ಅಭಿನಂದಿಸಿದ ಮುಖ್ಯಮಂತ್ರಿ: ತನಿಖಾಧಿಕಾರಿಗಳನ್ನು ಅಭಿನಂದಿಸಿದ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು, ನಿರ್ದೇಶನಾಲಯವು ತನ್ನ ಭ್ರಷ್ಟಾಚಾರ ವಿರೋಧಿ ಅಭಿಯಾನದಲ್ಲಿ ಯಶಸ್ವಿಯಾಗಿದೆ. ಇದರ ಪರಿಣಾಮವಾಗಿ ಅವರು ಅಧಿಕಾರ ವಹಿಸಿಕೊಂಡ 2021 ಮೇ 10 ದಿನದಿಂದ ಈವರೆಗೆ 117 ಸರ್ಕಾರಿ ನೌಕರರನ್ನು ಬಂಧಿಸಲಾಗಿದೆ. ಆಡಳಿತದಿಂದ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಪ್ರಯತ್ನಗಳು ಅದೇ ಸಂಕಲ್ಪ ಮತ್ತು ಶಕ್ತಿಯೊಂದಿಗೆ ಮುಂದುವರಿಯುತ್ತದೆ'' ಎಂದು ತಿಳಿಸಿದರು.
ಇದನ್ನೂ ಓದಿ: ಛತ್ತೀಸ್‌ಗಢದ ಐಎಎಸ್ ಅಧಿಕಾರಿ ರಾನು ಸಾಹು ಬಂಧನ.. ಮೂರು ದಿನಗಳ ಕಾಲ ಇಡಿ ವಶಕ್ಕೆ