ಪ್ರತಾಪ್‌ಗಢ (ಉತ್ತರ ಪ್ರದೇಶ): ಸಾಮೂಹಿಕ ಅತ್ಯಾಚಾರ ಮಾಡುವ ಜತೆಗೆ ಅಪ್ರಾಪ್ತ ಬಾಲಕಿಯ ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳಿಗೆ ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯ ಪೋಕ್ಸೊ ನ್ಯಾಯಾಲಯ ಮರಣದಂಡನೆ ವಿಧಿಸಿದೆ. 2021 ಡಿಸೆಂಬರ್ 27ರಂದು ನಡೆದಿದ್ದ ಈ ಪ್ರಕರಣದ ತ್ವರಿತ ವಿಚಾರಣೆ ನಡೆಸಿದ ನ್ಯಾಯಾಲಯವು 11 ತಿಂಗಳೊಳಗೆ ತೀರ್ಪು ಪ್ರಕಟಿಸಿತು.
11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯ ಎರಡು ಕಣ್ಣುಗಳು ಮತ್ತು ಮುಖ, ಕಾಲಿನ ಮೂಳೆಗಳಿಗೆ ಹಾನಿ ಮಾಡಿದ್ದ ಇಬ್ಬರು ಅಪರಾಧಿಗಳಿಗೆ ತಲಾ 50,000 ರೂಪಾಯಿ ದಂಡವನ್ನು ನ್ಯಾಯಾಲಯವು ವಿಧಿಸಿದೆ.
ಮೂವರು ಆರೋಪಿಗಳಲ್ಲಿ ಒಬ್ಬ ಅಪ್ರಾಪ್ತ: ಪ್ರಾಸಿಕ್ಯೂಷನ್ ಪ್ರಕಾರ, ಮೂವರು ಆರೋಪಿಗಳಾದ ಹಲೀಮ್, ರಿಜ್ವಾನ್ ಹಾಗು ಇನ್ನೊಬ್ಬ ಅಪ್ರಾಪ್ತ ಸೇರಿಕೊಂಡು ಬಾಲಕಿ ಮೇಲೆ ಅತ್ಯಾಚಾರ ಮಾಡಿ, ಗಂಭೀರವಾಗಿ ಗಾಯಗೊಳಿಸಿದ ನಂತರ ಆಕೆಯನ್ನು ರೈಲು ಹಳಿ ಮೇಲೆ ಎಸೆದು ಓಡಿಹೋಗಿದ್ದರು. ಅಪ್ರಾಪ್ತನ ಪ್ರಕರಣವನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.
ಇದನ್ನೂ ಓದಿ:ಸೇನಾ ಭೂಮಿ-ಖನಿಜ ಗುತ್ತಿಗೆ ಹಗರಣ: ಪಶ್ಚಿಮ ಬಂಗಾಳ, ಜಾರ್ಖಂಡ್ನಲ್ಲಿ ಇಡಿ-ಐಟಿ ದಾಳಿ