ಭಟಿಂಡಾ (ಪಂಜಾಬ್): ಜಿಲ್ಲೆಯ ಕೇಂದ್ರ ಕಾರಾಗೃಹ ಮತ್ತೊಮ್ಮೆ ಸುದ್ದಿಯಾಗಿದೆ. ಭಟಿಂಡ ಕೇಂದ್ರ ಕಾರಾಗೃಹದಲ್ಲಿ ಇಬ್ಬರು ಗ್ಯಾಂಗ್ಸ್ಟಾರ್ಗಳು ಜೈಲು ವಾರ್ಡನ್‌ಗೇ ಥಳಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಜೈಲಿನಲ್ಲಿರುವ ಗ್ಯಾಂಗ್ಸ್ಟಾರ್ಗಳಾದ ರಾಜವೀರ್ ಸಿಂಗ್ ಮತ್ತು ಗುರುದೀಪ್ ಸಿಂಗ್ ಈ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಓದಿ: ಜೈಲಿನಲ್ಲಿ ಶಾಲೆ, ಯೋಗಾಭ್ಯಾಸ: ಕೈದಿಗಳ ಮನಪರಿವರ್ತನೆಗೆ ಹೊಸ ವಿಧಾನ
ಸಿಕ್ಕಿರುವ ಮಾಹಿತಿಯ ಪ್ರಕಾರ, ದರೋಡೆಕೋರರು ಹೊಡೆಯುವ ಸಮಯದಲ್ಲಿ ಸ್ಥಳಕ್ಕೆ ಬಂದ ಜೈಲು ಅಧಿಕಾರಿಗಳಿಗೆ ಬೆದರಿಕೆ ಹಾಕಿದರು ಮತ್ತು ಭದ್ರತಾ ಬ್ಲಾಕ್‌ನಿಂದ ಹೊರಬರಲು ಪ್ರಯತ್ನಿಸಿದರು. ಸದ್ಯ ಜೈಲು ಅಧಿಕಾರಿ ಗೌರವದೀಪ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.