ETV Bharat / bharat

ಪ್ರತ್ಯೇಕ ರಸ್ತೆ ಅಪಘಾತ: ತೆಲಂಗಾಣದಲ್ಲಿ 7, ಆಂಧ್ರದಲ್ಲಿ 8 ಮಂದಿ ದುರ್ಮರಣ - ಆಂಧ್ರಪ್ರದೇಶ ರಸ್ತೆ ಅಪಘಾತ ಪ್ರಕರಣ

ಆಂಧ್ರಪ್ರದೇಶ, ತೆಲಂಗಾಣದಲ್ಲಿ ನಡೆದ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಒಟ್ಟು 15 ಮಂದಿ ದುರ್ಮರಣಕ್ಕೀಡಾಗಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

TWO DIFFERENT ACCIDENTS IN ANDHRA PRADESH

author img

By

Published : May 26, 2022, 10:11 PM IST

Updated : May 26, 2022, 10:53 PM IST

ತೆಲಂಗಾಣ/ಆಂಧ್ರಪ್ರದೇಶ: ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ನಡೆದ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಒಟ್ಟು 15 ಜನರು ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ವಾಪಸ್​ ಆಗ್ತಿದ್ದ ವೇಳೆ ರಸ್ತೆ ಅಪಘಾತ ಸಂಭವಿಸಿ, ಮದನಪಲ್ಲಿಯಲ್ಲಿ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ.

ಮೃತರನ್ನ ಗಂಗಿರೆಡ್ಡಿ, ಮಧುಲತಾ, ಕುಶಿತಾರೆಡ್ಡಿ, ದೇವಾಂಶರೆಡ್ಡಿ ಎಂದು ಗುರುತಿಸಲಾಗಿದೆ. ನಿಮ್ಮನಪಲ್ಲಿ ಮಂಡಲ ರೆಡ್ಡಿ ವಾರಿಪಲ್ಲೆಯಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಇವರು ವಾಪಸ್​ ಆಗುತ್ತಿದ್ದಾಗ ಘಟನೆ ನಡೆದಿದೆ. ನಿಯಂತ್ರಣ ಕಳೆದುಕೊಂಡ ಕಾರು, ಸೇತುವೆಯ ಗೋಡೆಗೆ ಡಿಕ್ಕಿ ಹೊಡೆದು ನದಿಗೆ ಉರುಳಿ ಬಿದ್ದಿದೆ.

ಪ್ರತ್ಯೇಕ ರಸ್ತೆ ಅಪಘಾತ: ತೆಲಂಗಾಣದಲ್ಲಿ 7, ಆಂಧ್ರದಲ್ಲಿ 8 ಮಂದಿ ದುರ್ಮರಣ

ಮತ್ತೊಂದು ಘಟನೆಯಲ್ಲಿ ಕೃಷ್ಣಾ ಜಿಲ್ಲೆಯ ಮೊಪಿದೇವಿ ವಲಯದಲ್ಲಿ ನಡೆದಿದ್ದು, ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಉಳಿದಂತೆ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ತೆರಳುತ್ತಿದ್ದ ವೇಳೆ ರಸ್ತೆ ಬದಿ ನಿಲ್ಲಿಸಿದ್ದ ಫ್ಲೆಕ್ಸ್​​​ ಅಡ್ಡಿಯಿಂದಾಗಿ ಈ ಅವಘಡ ಸಂಭವಿಸಿದೆ. ಮೃತರನ್ನ ವಿಜಯ (50), ಬೂರೆಪಲ್ಲಿ ರಮಣ (52), ಬೂರೆಪಲ್ಲಿ ವೆಂಕಟೇಶ್ವರಮ್ಮ (50) ಮತ್ತು ಕೋನ ವೆಂಕಟೇಶ್ (70) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ವಿದ್ಯುತ್ ಶಾರ್ಟ್​ ಸರ್ಕ್ಯೂಟ್​ನಿಂದ ಹೊತ್ತಿ ಉರಿದ ಮನೆ.. ಸಜೀವ ಸಮಾಧಿಯಾದ ಮಗು!

ಇನ್ನುಳಿದಂತೆ ತೆಲಂಗಾಣದ ಎರಡು ವಿಭಿನ್ನ ಸ್ಥಳಗಳಲ್ಲಿ ರಸ್ತೆ ಅಪಘಾತ ಸಂಭವಿಸಿ ಏಳು ಜನರು ಸಾವನ್ನಪ್ಪಿದ್ದಾರೆ, ಸಿದ್ದಿಪೇಟೆ ಮತ್ತು ಖಮ್ಮಂ ಜಿಲ್ಲೆಗಳಲ್ಲಿ ಈ ಅವಘಡ ಸಂಭವಿಸಿವೆ. ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ಜಗದೇವಪುರ ಮಂಡಲದ ಅಲಿರಾಜಪೇಟೆ ಸೇತುವೆ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಲಾರಿಗೆ ಆಟೋ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ ಖಮ್ಮಂ ಜಿಲ್ಲೆಯ ಮುಡಿಗೊಂಡ ಮಂಡಲದ ಗೋಕಿನೆಪಲ್ಲಿ ಗ್ರಾಮದ ಬಳಿ ರಸ್ತೆ ಅಪಘಾತ ಸಂಭವಿಸಿದ್ದು, ಆಟೋಗೆ ಬಸ್ ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Last Updated : May 26, 2022, 10:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.