ETV Bharat / bharat

ನಿಧಿಗಾಗಿ ಸುರಂಗ ಅಗೆಯುವಾಗ ಉಸಿರುಕಟ್ಟಿ ಇಬ್ಬರ ಸಾವು - ನಿಧಿಗಾಗಿ ಸುರಂಗವನ್ನು ಅಗೆಯುವಾಗ ಉಸಿರುಕಟ್ಟಿ ಇಬ್ಬರು ಸಾವು

ನಜರೆತ್‌ನಲ್ಲಿ ನಿಧಿಗಾಗಿ ಗುಂಡಿ ಅಗೆಯುವ ವೇಳೆ ವಿಷಕಾರಿ ಅನಿಲ ಉಸಿರಾಡಿ ಇಬ್ಬರು ಸಾವನ್ನಪ್ಪಿದ್ದಾರೆ. ತಿರುವಳ್ಳುವರ್ ಕಾಲೋನಿಯಲ್ಲಿರುವ ತಮ್ಮ ಮನೆಯ ಹಿತ್ತಲಿನಲ್ಲಿ ನಿಧಿ ಇದೆ ಎಂದು ನಂಬಿದ್ದ ಶಿವಮಲೈ (40) ಮತ್ತು ಶಿವವೇಲನ್ (37) ಸಹೋದರರು ಕಳೆದ ಆರು ತಿಂಗಳಿನಿಂದ 40 ಅಡಿ ಆಳದ ಗುಂಡಿಯನ್ನ ಅಗೆಯುತ್ತಿದ್ದರು.

ನಿಧಿಗಾಗಿ ಸುರಂಗವನ್ನು ಅಗೆಯುವಾಗ ಉಸಿರುಕಟ್ಟಿ ಇಬ್ಬರು ಸಾವು

author img

By

Published : Mar 30, 2021, 10:41 AM IST

ಟ್ಯುಟಿಕೋರಿನ್ (ತಮಿಳುನಾಡು): ನಜರೆತ್‌ನಲ್ಲಿ ನಿಧಿಗಾಗಿ ಗುಂಡಿ ಅಗೆಯುವ ವೇಳೆ ಉಸಿರುಗಟ್ಟಿ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ರಘುಪತಿ (47) ಮತ್ತು ನಿರ್ಮಲ್ ಗಣಪತಿ (17) ಎಂದು ಗುರುತಿಸಲಾಗಿದೆ.

ತಿರುವಳ್ಳುವರ್ ಕಾಲೋನಿಯಲ್ಲಿರುವ ತಮ್ಮ ಮನೆಯ ಹಿತ್ತಲಿನಲ್ಲಿ ನಿಧಿ ಇದೆ ಎಂದು ನಂಬಿದ್ದ ಶಿವಮಲೈ (40) ಮತ್ತು ಶಿವವೇಲನ್ (37) ಸಹೋದರರು ಕಳೆದ ಆರು ತಿಂಗಳಿನಿಂದ 40 ಅಡಿ ಆಳದ ಗುಂಡಿಯನ್ನ ಅಗೆಯುತ್ತಿದ್ದರು. ಅದರ ಪಕ್ಕದಲ್ಲೆ 7 ಅಡಿಯ ಟನಲ್​ ಒಂದನ್ನು ನಿರ್ಮಿಸಿದ್ದರು.

ಮಾಣಿಕಂದನ್ ಅವರ ಮಗ ಗಣಪತಿ ಮತ್ತು ಸಾಥಾಂಕುಲಂ ಪನ್ನಂಪಾರ ಮೂಲದ ಅಲ್ವರ್ತಿರುನಗರಿ ಅಲಮರಥನ್ ಅವರ ಪುತ್ರ ರಘುಪತಿ ಅವರೊಂದಿಗೆ ಬಂದರು. ಈ ನಾಲ್ವರೂ ವಿಷಕಾರಿ ಅನಿಲವನ್ನು ಉಸಿರಾಡಿದರು ಎಂದು ಹೇಳಲಾಗುತ್ತದೆ. ಶಿವವೇಲನ್ ಅವರ ಪತ್ನಿ ರೂಪಾ ಅವರಿಗೆ ನೀರು ತರುವಾಗ ಮೂರ್ಛೆ ಹೋದರು. ಪ್ರಜ್ಞಾಹೀನ ರೂಪಾ ಅವರನ್ನು ರಕ್ಷಿಸಲು ನೆರೆಹೊರೆಯವರು ಪ್ರಯತ್ನಿಸುತ್ತಿದ್ದಂತೆ ಈ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ದಾಳಿ: ಗಾಯಗೊಂಡಿದ್ದ ಮತ್ತೊಬ್ಬ ಕೌನ್ಸಿಲರ್ ಸಾವು

ಮಾಹಿತಿ ಪಡೆದ ಸಾಥನ್‌ಕುಲಂ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಗಾಡ್ವಿನ್ ಜೆಗತೀಶ್ ಕುಮಾರ್, ನಜರೆತ್ ಇನ್ಸ್‌ಪೆಕ್ಟರ್ ವಿಜಯಲಕ್ಷ್ಮಿ ಮತ್ತು ಅವೈಕುಂಡಂ ಅಗ್ನಿಶಾಮಕ ಕೇಂದ್ರ ಅಧಿಕಾರಿ ಮುತುಕುಮಾರ್ ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದರು.

ರಘುಪತಿ ಮತ್ತು ನಿರ್ಮಲ್ ಗಣಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವವೇಲನ್ ಮತ್ತು ಶಿವಮಲೈ ಅವರನ್ನು ನೆಲ್ಲೈ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.