ETV Bharat / bharat

ಬೀಗ ಹಾಕಿದ ಮನೆಯಲ್ಲಿ ಇಬ್ಬರು ಮಕ್ಕಳು ಸೇರಿ ನಾಲ್ವರ ಶವ ಪತ್ತೆ; ಕೊಲೆ ಶಂಕೆ - ಇಬ್ಬರು ಮಕ್ಕಳು ಸೇರಿ ನಾಲ್ವರು ಶವವಾಗಿ ಪತ್ತೆ

ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಗಂಡ ನಾಪತ್ತೆಯಾಗಿದ್ದಾನೆ. ಹೀಗಾಗಿ ಆತನ ಕೈವಾಡವಿರುವ ಸಾಧ್ಯತೆ ದಟ್ಟವಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Ahmedabad Family Murder case
Ahmedabad Family Murder case
author img

By

Published : Mar 30, 2022, 8:02 PM IST

ಅಹಮದಾಬಾದ್​(ಗುಜರಾತ್​): ಬೀಗ ಹಾಕಿದ ಮನೆವೊಂದರಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಶವವಾಗಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಇದೊಂದು ಕೊಲೆಯಂತಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಹಮದಾಬಾದ್​ನ ಓಧವ್​ ಪ್ರದೇಶದ ದಿವ್ಯ ಪ್ರಭಾ ಹೌಸಿಂಗ್ ಸೊಸೈಟಿಯಲ್ಲಿರುವ ಮನೆಯಲ್ಲಿ ಘಟನೆ ನಡೆದಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಹರಿತವಾದ ಆಯುಧಗಳಿಂದ ಇವರ ಮೇಲೆ ದಾಳಿ ಮಾಡಿರುವ ಸಾಧ್ಯತೆ ಇದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಕೃತ್ಯ ನಡೆದಿದೆ ಎನ್ನಲಾಗಿದ್ದು, ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿವೆ. ಕಳೆದ ಕೆಲ ದಿನಗಳಿಂದ ತಮ್ಮ ಮಗಳು ಕಾಣೆಯಾಗಿದ್ದು, ಆಕೆ ವಾಸ ಮಾಡುತ್ತಿದ್ದ ಮನೆಗೆ ಹೊರಗಡೆಯಿಂದ ಬೀಗ ಹಾಕಲಾಗಿದೆ ಎಂದು ಸೋನಾಲ್​ಬೆನ್​​ ತಾಯಿ​ ಪೊಲೀಸರಿಗೆ ದೂರು ನೀಡುತ್ತಿದ್ದಂತೆ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ಭಗವಂತ್ ಮಾನ್​​ ಸರ್ಕಾರದಿಂದ ಬಿಸಿ: ಶುಲ್ಕ ಹೆಚ್ಚಳಕ್ಕೆ ಕಡಿವಾಣ

ಬೀಗ ಹಾಕಿದ್ದ ಮನೆ ಬಾಗಿಲು ಮುರಿದು ಒಳ ಹೋದಾಗ ನಾಲ್ವರು ಶವಗಳಾಗಿ ಪತ್ತೆಯಾಗಿದ್ದು, ವಿವಿಧ ಕೊಠಡಿಯಲ್ಲಿ ಇವರ ಮೃತದೇಹಗಳು ಸಿಕ್ಕಿವೆ. ಸೋನಾಲ್​ಬೆನ್​ ಗಂಡ ನಾಪತ್ತೆಯಾಗಿದ್ದು, ದುಷ್ಕೃತ್ಯದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಸೋನಾಲ್​ಬೆನ್​ ಪತಿ ವಿನೋದ್ ಮನೆ ಮಾರಾಟ ಮಾಡಿದ್ದರು. ಹಣಕಾಸಿನ ವಿಚಾರವಾಗಿ ಗಂಡ-ಹೆಂಡತಿ ನಡುವೆ ಜಗಳ ಸಹ ನಡೆದಿತ್ತು. ಇದರ ಬೆನ್ನಲ್ಲೇ ಈ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.