ETV Bharat / bharat

ಸೇನಾ ವಾಹನಕ್ಕೆ ಅಪ್ಪಳಿಸಿದ ಟ್ರಕ್​.. ಇಬ್ಬರು ಬಿಎಸ್​ಎಫ್​ ಯೋಧರು ಹುತಾತ್ಮ, ಐವರಿಗೆ ಗಂಭೀರ ಗಾಯ

author img

By

Published : Nov 5, 2022, 9:33 PM IST

ರಾಜಸ್ಥಾನದಲ್ಲಿ ನಡೆದ ರಸ್ತೆ ದುರಂತದಲ್ಲಿ ಇಬ್ಬರು ಬಿಎಸ್​ಎಫ್​ ಯೋಧರು ಸ್ಥಳದಲ್ಲೇ ಸಾವನ್ನಪ್ಪಿ, ಐವರು ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

two-bsf-jawans-died-road-accident-in-rajasthan
ಇಬ್ಬರು ಬಿಎಸ್​ಎಫ್​ ಯೋಧರು ಹುತಾತ್ಮ

ಬಾರ್ಮರ್ (ರಾಜಸ್ಥಾನ): ಬಿಎಸ್​ಎಫ್​ ಸಿಬ್ಬಂದಿ ಸಾಗುತ್ತಿದ್ದ ವಾಹನಕ್ಕೆ ರಭಸವಾಗಿ ಬಂದ ಟ್ರಕ್​​ ಡಿಕ್ಕಿಯಾಗಿ ಇಬ್ಬರು ಯೋಧರು ಮೃತಪಟ್ಟು, ಐವರು ಗಂಭೀರ ಗಾಯಗೊಂಡ ಘಟನೆ ರಾಜಸ್ಥಾನದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದರಲ್ಲಿ ಇಬ್ಬರು ಯೋಧರ ಸ್ಥಿತಿ ಚಿಂತಾಜನಕವಾಗಿದೆ.

ಇಲ್ಲಿನ ಬಾರ್ಮರ್ ಜಿಲ್ಲೆಯ ಚೌಹತನ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಬಿಎಸ್​ಎಫ್​ ಯೋಧರ ವಾಹನ ಸಾಗುತ್ತಿತ್ತು. ಎದುರಿನಿಂದ ರಭಸವಾಗಿ ಬಂದ ಟ್ರಕ್​​ ಸೇನಾ ವಾಹನಕ್ಕೆ ಬಂದಪ್ಪಳಿಸಿದೆ. ದುರ್ಘಟನೆಯಲ್ಲಿ ಇಬ್ಬರು ಯೋಧರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ವಿಷಯ ತಿಳಿದ ಗ್ರಾಮಸ್ಥರು ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದರು. ಸ್ಥಳೀಯರ ನೆರವಿನೊಂದಿಗೆ ಗಾಯಗೊಂಡ ಬಿಎಸ್‌ಎಫ್ ಯೋದರನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಿ ಅಲ್ಲಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜಸ್ಥಾನದ 83 ನೇ ಬೆಟಾಲಿಯನ್‌ನ ಬಿಎಸ್‌ಎಫ್ ಯೋಧರು ಕಾರ್ಯ ನಿಮಿತ್ತ ಬಾರ್ಮರ್‌ಗೆ ತೆರಳುತ್ತಿದ್ದಾಗ ಈ ದುರಂತ ನಡೆದಿದೆ ಎಂದು ಸೇನಾಧಿಕಾರಿ ತಿಳಿಸಿದ್ದಾರೆ.

ಓದಿ: ಅಮೇಥಿ ಆಸ್ಪತ್ರೆಯಲ್ಲಿ ಸಿಗದ ಸ್ಟ್ರೆಚರ್: ಬ್ಯಾಂಡೇಜ್ ಕಟ್ಟಿಕೊಂಡ ರೋಗಿ ಪಾಡು ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.