ETV Bharat / bharat

ಹೈದರಾಬಾದ್​ನಲ್ಲಿ ಯುವತಿ ಮೇಲೆ ಅತ್ಯಾಚಾರ: ಇಬ್ಬರು ಆರೋಪಿಗಳ ಬಂಧನ - ಅತ್ಯಾಚಾರ

ಪೊಲೀಸ್​ ಠಾಣೆಗೆ ತೆರಳುತ್ತಿದ್ದ ಯುವತಿಗೆ ಡ್ರಾಪ್​ ಕೊಡುವುದಾಗಿ ಹೇಳಿದ ದುಷ್ಕರ್ಮಿಗಳು, ಬೇರೆಡೆ ಕರೆದೊಯ್ದು ಅತ್ಯಾಚಾರ ಎಸಗಿರುವ ಘಟನೆ ಹೈದರಾಬಾದ್‌ನಲ್ಲಿ ಶನಿವಾರ ನಡೆದಿದೆ.

rape
ಅತ್ಯಾಚಾರ
author img

By ETV Bharat Karnataka Team

Published : Jan 8, 2024, 10:31 AM IST

ಹೈದರಾಬಾದ್​: ಯುವತಿಯ ಮೇಲೆ ಇಬ್ಬರು ದುರುಳರು ಅತ್ಯಾಚಾರ ಎಸಗಿರುವ ಘಟನೆ ಶನಿವಾರ ಮಧ್ಯರಾತ್ರಿ ಹೈದರಾಬಾದ್​ನ ಹಳೆ ಬಸ್ತಿ ಬಂಡ್ಲಗುಡ ಎಂಬಲ್ಲಿ ನಡೆದಿದೆ. ಘಟನೆ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಗೌಸನಗರದ ಮುಳಕಲಪೆಂಟ ಶ್ರೀಕಾಂತ್ (22) ಮತ್ತು ಅಫಜಲಗಂಜ್‌ನ ಪಾನಗಂಟಿ ಕಾಶಿವಿಶ್ವನಾಥ್ (32) ಬಂಧಿತರು.

ಘಟನೆಯ ಪೂರ್ಣ ವಿವರ: ಇನ್ಸ್​​ಪೆಕ್ಟರ್ ಮೊಹಮ್ಮದ್ ಶಾಕಿರ್ ಅಲಿ ಪ್ರತಿಕ್ರಿಯಿಸಿ, "ಸಂತ್ರಸ್ತ ಯುವತಿ (21) ಸೂರ್ಯಪೇಟೆ ಮೂಲದವಳು. ತನ್ನ ಸಹೋದರ ಹಾಗೂ ತಾಯಿಯೊಂದಿಗೆ ಮನೆಯಲ್ಲಿ ವಾಸವಾಗಿದ್ದಳು. ಶನಿವಾರ ತನ್ನ ಸಹೋದರನೊಂದಿಗೆ ಯಾವುದೋ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾಳೆ. ಇದರಿಂದ ಕೋಪಗೊಂಡಿದ್ದ ಆಕೆಯ ಸಹೋದರ ಥಳಿಸಿದ್ದಾನೆ. ನೊಂದ ಯುವತಿ ಒಂಟಿಯಾಗಿ ಬಸ್​ ನಿಲ್ದಾಣಕ್ಕೆ ಬಂದು ಹೈದರಾಬಾದ್​ ಬಸ್​ ಹತ್ತಿದ್ದಾಳೆ. ರಾತ್ರಿ 10.40ರ ಸುಮಾರಿಗೆ ಹೈದರಾಬಾದ್‌ನ​ ಎಂಜಿಬಿಎಸ್ ಬಸ್ ನಿಲ್ದಾಣದಲ್ಲಿ ಇಳಿದಿದ್ದಾಳೆ. ಅಲ್ಲಿಂದ ಹೊರಬಂದು ಟೀ ಸ್ಟಾಲ್​ನಲ್ಲಿ ಟೀ ಕುಡಿದಿದ್ದಾಳೆ. ಬಳಿಕ ಅಫ್ಜಲ್‌ಗಂಜ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಆರೋಪಿಗಳಾದ ಶ್ರೀಕಾಂತ್ ಮತ್ತು ಕಾಶಿವಿಶ್ವನಾಥ್ ತಮ್ಮ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದು ವಿಚಾರಿಸಿದ್ದಾರೆ. ತಾನು ಸಮೀಪದ ಪೊಲೀಸ್​ ಠಾಣೆ ಹೋಗುತ್ತಿರುವುದಾಗಿ ಯುವತಿ ತಿಳಿಸಿದ್ದಾಳೆ. ಈ ವೇಳೆ ಆರೋಪಿಗಳು ನಾವೂ ಅಲ್ಲಿಗೆ ಹೋಗುತ್ತಿದ್ದೇವೆ, ನಿನ್ನನ್ನು ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿ ಬೈಕ್​ ಹತ್ತಿಸಿಕೊಂಡಿದ್ದಾರೆ".

"ಇವರನ್ನು ನಂಬಿದ ಯುವತಿ ಬೈಕ್​ ಹತ್ತಿದ್ದಾಳೆ. ಆಕೆಯ ನಂಬಿಕೆಯನ್ನು ಇನ್ನೂ ಬಲವಾಗಿಸಲು ಅಫ್ಜಲ್‌ಗಂಜ್ ಪ್ರದೇಶದ ಐಸ್‌ಕ್ರೀಂ ಪಾರ್ಲರ್‌ ಸಮೀಪ ವಾಹನ ನಿಲ್ಲಿಸಿ ಐಸ್​ಕ್ರೀಂ ತೆಗೆದುಕೊಟ್ಟಿದ್ದಾರೆ. ನಂತರ ನೇರವಾಗಿ ಬಂಡ್ಲಗುಡ ಪೊಲೀಸ್​ ಠಾಣಾ ವ್ಯಾಪ್ತಿಯ ಲೇಕ್‌ವ್ಯೂ ಹಿಲ್ಸ್ ಬಳಿಯ ಆರೋಪಿ ಶ್ರೀಕಾಂತ್​​ನ ಸ್ಕ್ರ್ಯಾಪ್ ಗೋಡೌನ್‌ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ. ಅಲ್ಲಿಂದ ಬೇರೆಡೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಈ ವೇಳೆ ಸಂತ್ರಸ್ತೆ ಕಿರುಚಿದ್ದಾಳೆ. ಸ್ಥಳೀಯರು ಕಿರುಚಾಟ ಕೇಳಿ ಹುಡುಕಾಡಿದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ".

"ಸ್ಥಳೀಯರ ಮಾಹಿತಿ ಆಧರಿಸಿ, ಸ್ಥಳಕ್ಕೆ ಚಂದ್ರಾಯನಗುಟ್ಟ ಇನ್ಸ್​ಪೆಕ್ಟರ್ ಕೆ.ಗುರುನಾಥ್ ಹಾಗೂ ಬಂಡ್ಲಗುಡ ಎಸ್‌ಐ ವೆಂಕಟೇಶ್ವರ್‌ಜಿ ಆಗಮಿಸಿ ಪರಿಶೀಲನೆ ನಡೆಸಿ ಯುವತಿಯಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಸ್ಕ್ರ್ಯಾಪ್ ಗೋಡೌನ್​ನನ್ನು ಸಂತ್ರಸ್ತೆ ತೋರಿಸಿದ್ದು ಇದು ಶ್ರೀಕಾಂತ್ ಎಂಬಾತನದ್ದು ಎಂದು ಸ್ಥಳೀಯರು ಹೇಳಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ" ಎಂದು ಪೊಲೀಸ್ ಇನ್ಸ್​​ಪೆಕ್ಟರ್ ಮೊಹಮ್ಮದ್ ಶಾಕಿರ್ ಅಲಿ ತಿಳಿಸಿದರು.

ಇದನ್ನೂ ಓದಿ: ಯುವತಿ ಮೇಲೆ ಅತ್ಯಾಚಾರ ಆರೋಪ : ಎಎಸ್​ಪಿ ವಿರುದ್ಧ ಪ್ರಕರಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.