ಕೊಚ್ಚಿ/ಕೇರಳ: ಅಕ್ರಮವಾಗಿ ಹೆರಾಯಿನ್ (ಮಾದಕ ವಸ್ತು) ಸಾಗಿಸುತ್ತಿದ್ದ ಹಡುಗನ್ನ ಭಾರತೀಯ ನೌಕಾಪಡೆ ಸಿಬ್ಬಂದಿಗಳು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿರುವ ಘಟನೆ ಗುರುವಾರ ಕೊಚ್ಚಿಯಲ್ಲಿ ನಡೆದಿದೆ.
ಬಂಧಿತರು ಇರಾನ್ ಮತ್ತು ಪಾಕಿಸ್ತಾನ ಮೂಲದವರು ಎಂದು ಮೂಲಗಳು ತಿಳಿಸಿವೆ. ಒಟ್ಟು 200 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಅನ್ನು ಇರಾನ್ ಮೂಲದ ಹಡುಗಿನಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ನಾಕಾಪಡೆ ಸಿಬ್ಬಂದಿಗಳು ಹಡುಗನ್ನು ತಪಾಸಣೆ ನಡೆಸಿದಾಗ ಹಡುಗಿನಲ್ಲಿ ಹೆರಾಯಿನ್ ಪತ್ತೆಯಾಗಿದೆ.
ತಕ್ಷಣವೇ ಇಬ್ಬರುನ್ನ ಬಂಧಿಸಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋಗೆ ಹಸ್ತಾಂತರಿಸಿ, ಹಡಗನ್ನು ಮಟ್ಟಂಚೇರಿಗೆ ಕೊಂಡೊಯ್ಯಲಾಯಿತು. ಸದ್ಯ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಗುಜರಾತ್ ಕರಾವಳಿಯಲ್ಲಿ ಪಾಕ್ ದೋಣಿ ವಶ: 200 ಕೋಟಿ ರೂ. ಮೌಲ್ಯದ ಮಾದಕ ವಸ್ತು ಪತ್ತೆ