ETV Bharat / bharat

ಪ್ರಧಾನಿ ಮೋದಿ, ಸಿಎಂ ಯೋಗಿ ಹತ್ಯೆ ಮಾಡುವುದಾಗಿ ಟ್ವಿಟ್ಟರ್​ ಬಳಕೆದಾರನಿಂದ ಬೆದರಿಕೆ!

ಟ್ವಿಟರ್ ಬಳಕೆದಾರನೊಬ್ಬ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ. ಈ ಕುರಿತಂತೆ ನಾಗರಿಕರೊಬ್ಬರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿಗಿದ್ದು, ತನಿಖೆ ಮುಂದುವರೆದಿದೆ.

pm-modi-and-up-cm
ಪ್ರಧಾನಿ ಮೋದಿ, ಯೋಗಿ
author img

By

Published : Nov 8, 2021, 7:52 AM IST

ಲಖನೌ (ಉ.ಪ್ರ): ಟ್ವಿಟ್ಟರ್ ಬಳಕೆದಾರನೊಬ್ಬ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬಾಂಬ್ ಸ್ಫೋಟಿಸಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಹಿನ್ನೆಲೆ ಯುಪಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಡಿಸಿಪಿ ಪ್ರಮೋದ್ ಕುಮಾರ್ ತಿವಾರಿ, ಯುಪಿ ಪೊಲೀಸ್ ಸಹಾಯವಾಣಿಗೆ ಭಾನುವಾರ ಈ ಬೆದರಿಕೆ ಕುರಿತು ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ಇದೊಂದು ಕಿಡಿಗೇಡಿಗಳ ಕೃತ್ಯ ಇರಬಹುದು ಎನಿಸುತ್ತಿದೆ ಎಂದಿದ್ದಾರೆ.

ಈ ಟ್ವಿಟ್ಟರ್ ಖಾತೆಯು ನಕಲಿಯಾಗಿದೆ. ಬೇರೆ ಹೆಸರು ನೀಡಿ ಖಾತೆ ತೆರೆಯಲಾಗಿದೆ. ತನಿಖೆ ಮುಗಿಯುವವರೆಗೆ ಮತ್ತು ಅಧಿಕೃತ ಹೆಸರು ಪತ್ತೆಯಾಗುವವರೆಗೆ ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಜೊತೆಗೆ ಟ್ವಿಟ್ಟರ್ ಸಂಸ್ಥೆಗೂ ಈ ಬಗ್ಗೆ ಮಾಹಿತಿ ನೀಡಲು ಕೋರಲಾಗಿದೆ. ಈ ಹಿಂದೆಯೂ ಇದೇ ರೀತಿಯ ಬೆದರಿಕೆ ಹಾಕಿರುವುದು ಪತ್ತೆಯಾಗಿತ್ತು. ಈ ಬೆದರಿಕೆ ಹೊರತುಪಡಿಸಿ ಆ ಪೋಸ್ಟ್​ಗೆ ಆಕ್ಷೇಪಾರ್ಹ ಕಾಮೆಂಟ್​ಗಳನ್ನೂ ಸಹ ಮಾಡಲಾಗಿದೆ. ಆರೋಪಿಯನ್ನ ಶೀಘ್ರ ಬಂಧಿಸಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಗೋಧಿ ತುಂಬಿದ್ದ ಲಾರಿ ಪಲ್ಟಿ: ನಾಲ್ವರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.