ನವದೆಹಲಿ: ಸಾಮಾಜಿಕ ಜಾಲತಾಣ ಕಂಪನಿ ತನ್ನ ನೂತನ 'ಟಿಪ್ ಜಾರ್' ಫೀಚರ್ ಅನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿದೆ. ಭಾರತ ಸೇರಿದಂತೆ ಜಗತ್ತಿನಾದ್ಯಂತ ಇರುವ ಆ್ಯಂಡ್ರಾಯ್ಡ್ ಹಾಗೂ ಐಓಎಸ್ ಬಳಕೆದಾರರು ಈ ಹೊಸ ಫೀಚರ್ ಮೂಲಕ ತಮಗೆ ಬೇಕಾದ ಅಕೌಂಟಿನವರಿಗೆ ಹಣ ಸಂದಾಯ ಮಾಡುವ ಫೀಚರ್ ಇದಾಗಿದೆ.
ಸದ್ಯಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಟ್ವಿಟರ್ ಬಳಸುವ, ಕೆಲವೇ ಕೆಲ ಲಾಭರಹಿತ ಸಂಸ್ಥೆಗಳ ಸದಸ್ಯರು, ಪತ್ರಕರ್ತರು ಹಾಗೂ ಸಾಫ್ಟವೇರ್ ವಿನ್ಯಾಸಗಾರರಿಗೆ ಪ್ರಾಯೋಗಿಕವಾಗಿ ಈ ಟಿಪ್ ಜಾರ್ ಫೀಚರ್ ಬಳಕೆಗೆ ಅನುವು ಮಾಡಿಕೊಡಲಾಗಿದೆ.
ಭಾರತದ ಹಲವಾರು ಪೇಮೆಂಟ್ ಪ್ರೊವೈಡರ್ ಕಂಪನಿಗಳನ್ನು ಈ ಟಿಪ್ ಜಾರ್ ಫೀಚರ್ ಅಡಿ ತರಲು ಕಂಪನಿ ಯೋಜಿಸಿದ್ದು, ಈ ಫೀಚರ್ ಹಲವಾರು ಭಾಷೆಗಳಲ್ಲಿ ಲಭ್ಯವಾಗಲಿದೆ. ಸದ್ಯ ಬ್ಯಾಂಡ್ ಕ್ಯಾಂಪ್, ಕ್ಯಾಶ್ ಆ್ಯಪ್ (ಜಾಕ್ ಡೋರ್ಸೆ ಒಡೆತನದ್ದು), ಪ್ಯಾಟ್ರಿಯಾನ್, ಪೇಪಾಲ್ ಮತ್ತು ವೆನ್ಮೊ ಮುಂತಾದ ಪೇಮೆಂಟ್ ಪ್ರೊವೈಡರ್ ಕಂಪನಿಗಳನ್ನು ಈಗಾಗಲೇ ಟಿಪ್ ಜಾರ್ ಒಳಗೊಂಡಿದೆ.
ಆಂಗ್ಲ ಭಾಷೆಯಲ್ಲಿ ಟ್ವಿಟರ್ ಬಳಸುವ ಬಳಕೆದಾರರು ಕೆಲ ಸೀಮಿತ ಸಂಖ್ಯೆ ಅಕೌಂಟುಗಳಿಗೆ ಟಿಪ್ ಅಥವಾ ಕ್ಯಾಶ್ ಗಿಫ್ಟ್ಗಳನ್ನು ಕಳುಹಿಸಬಹುದು. ಟಿಪ್ ಜಾರ್ ಅನ್ನು ಆನ್ ಮಾಡಿಕೊಂಡಲ್ಲಿ ಅಂಥವರ ಪ್ರೊಫೈಲ್ ಪೇಜಿನ ಫಾಲೋ ಬಟನ್ ಪಕ್ಕದಲ್ಲಿ ಇದರ ಐಕಾನ್ ಕಾಣಿಸಲಿದೆ.