ETV Bharat / bharat

ಕೇಂದ್ರ ಸರ್ಕಾರದ ಆದೇಶದ ವಿರುದ್ಧ ಹೈಕೋರ್ಟ್​ ಮೊರೆ ಹೋದ ಟ್ವಿಟರ್​

ಕೆಲ ನಿರ್ದಿಷ್ಟ ವಿಷಯಗಳನ್ನು ತೆಗೆದುಹಾಕುವ ಬಗ್ಗೆ ಟ್ವಿಟರ್​ಗೆ ಜೂನ್​ನಲ್ಲಿ ಕೇಂದ್ರ ಸರ್ಕಾರದ ಐಟಿ ಸಚಿವಾಲಯ ಆದೇಶಿಸಿದೆ. ಈ ಆದೇಶದ ವಿರುದ್ಧ ಟ್ವಿಟರ್​ ನ್ಯಾಯಾಲಯದ ಮೊರೆ ಹೋಗಿದೆ.

Twitter takes Indian govt to court over 'arbitrary' content blocking orders
ಕೇಂದ್ರ ಸರ್ಕಾರದ ಆದೇಶದ ವಿರುದ್ಧ ಹೈಕೋರ್ಟ್​ ಮೊರೆ ಹೋದ ಟ್ವಿಟರ್​
author img

By

Published : Jul 5, 2022, 10:46 PM IST

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಟ್ವಿಟರ್ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿದೆ. ಕೆಲ ನಿರ್ದಿಷ್ಟ ವಿಷಯಗಳನ್ನು ತೆಗೆದುಹಾಕುವ ಕುರಿತು ಹಾಗೂ ಇಂತಹ ವಿಷಯಗಳನ್ನು ನಿರ್ಬಂಧಿಸಬೇಕು ಎಂಬ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಆದೇಶದ ವಿರುದ್ಧ ಕರ್ನಾಟಕ ಹೈಕೋರ್ಟ್​ನ ಮೊರೆ ಹೋಗಲಾಗಿದೆ.

ಕೆಲ ಕಂಟೆಂಟ್ ನಿರ್ಬಂಧಿಸುವ ಬಗ್ಗೆ ಸೆಕ್ಷನ್ 69 'ಎ' ಅಡಿ ಐಟಿ ಸಚಿವಾಲಯ ಹೊರಡಿಸಿದ ಆದೇಶ ಅನ್ವಯವಾಗಲ್ಲ. ಈ ಕಾರಣಕ್ಕಾಗಿ ಟ್ವಿಟರ್ ಸರ್ಕಾರದ ಆದೇಶದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ ಎಂದು ವರದಿಯಾಗಿದೆ.

ಅಲ್ಲದೇ, ಸೆಕ್ಷನ್ 69 'ಎ' ಅಡಿ ನಿರ್ಬಂಧಿಸುವುದಾಗಿ ಹೇಳುವ ಸರ್ಕಾರ, ಅದು ಹೇಗೆ ಅಥವಾ ಯಾವ ವಿಷಯದಲ್ಲಿ ಉಲ್ಲಂಘನೆಯಾಗಿದೆ ಎಂದು ಆದೇಶದಲ್ಲಿ ತಿಳಿಸಿಲ್ಲ ಎಂದು ಟ್ವಿಟರ್​ ಆರೋಪಿಸಿದೆ. ಈ ನಿರ್ಬಂಧದ ಆದೇಶ ರದ್ದುಗೊಳಿಸಲು ಟ್ವಿಟರ್​ ನ್ಯಾಯಾಲಯದ ಮೊರೆ ಹೋಗಿದೆ ಎಂದು ಹೇಳಲಾಗಿದೆ.

ಕೆಲ ನಿರ್ದಿಷ್ಟ ವಿಷಯಗಳನ್ನು ತೆಗೆದುಹಾಕುವ ಬಗ್ಗೆ ಜೂನ್​ನಲ್ಲಿ ಆದೇಶದ ಹೊರಡಿಸಿದ್ದ ಐಟಿ ಸಚಿವಾಲಯವು ಈ ಆದೇಶ ಪಾಲಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಟ್ವಿಟರ್‌ಗೆ ಎಚ್ಚರಿಕೆ ನೀಡಿತ್ತು.

ಇದನ್ನೂ ಓದಿ: ನ್ಯೂಸ್​ ಚಾನೆಲ್​​ನ ಆ್ಯಂಕರ್​ ರೋಹಿತ್ ರಂಜನ್ ಅರೆಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.