ನವದೆಹಲಿ: ಪ್ರತಿಶತ 50 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ ನಂತರ ಇದೀಗ ಟ್ವಿಟರ್ ಕಂಪನಿಯು ತನ್ನ 4,400 ಗುತ್ತಿಗೆ ಕಾರ್ಮಿಕರನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ. ಈ ಕುರಿತು ಯಾವುದೇ ಮನ್ಸೂಚನೆ ನೀಡುತ್ತಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: ಆಂತರಿಕ ಅವ್ಯವಸ್ಥೆ: ಉದ್ಯೋಗಿಗಳಿಗೆ ಮರಳಿ ಬರುವಂತೆ ಮನವಿ ಮಾಡಿದ ಟ್ವಿಟರ್
ಕಾರ್ಮಿಕರ ವಜಾಗೊಳಿಸುವಿಕೆಯ ಬಗ್ಗೆ ಕಂಪನಿಯ ಮಾಲೀಕ ಎಲಾನ್ ಮಸ್ಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಿರ್ಣಾಯಕ ಬದಲಾವಣೆಗಳನ್ನು ಮಾಡುವ ಮಧ್ಯದಲ್ಲಿ ನನ್ನ ಗುತ್ತಿಗೆದಾರರೊಬ್ಬರು ಸೂಚನೆಯಿಲ್ಲದೇ ಕೆಲಸ ಕಳೆದುಕೊಂಡಿದ್ದಾರೆ ಓರ್ವ ಮ್ಯಾನೇಜರ್ ತಿಳಿಸಿದ್ದಾರೆ.
44 ಶತಕೋಟಿ ಯುಎಸ್ ಡಾಲರ್ ಕೊಟ್ಟು ಟ್ವಿಟರ್ ಸ್ವಾಧೀನಪಡಿಸಿಕೊಂಡ ನಂತರ ಎಲೋನ್ ಮಸ್ಕ್ ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೆ ಸರಿಸುಮಾರು ಅರ್ಧದಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ್ದರು.
ಇದನ್ನೂ ಓದಿ: ಅರ್ಧದಷ್ಟು ನೌಕರರ ವಜಾಕ್ಕೆ ಎಲೋನ್ ಮಸ್ಕ್ ನೀಡಿದ ಕಾರಣವಿದು!