ಮುಂಬೈ/ಮಹಾರಾಷ್ಟ್ರ: ಹೊಸ ಐಟಿ ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ನಡುವೆ ನಡೆಯುತ್ತಿರುವ ವಿವಾದದ ಮಧ್ಯೆ, ಶಿವಸೇನಾ ಮುಖವಾಣಿ ಸಾಮ್ನಾ ಸೋಮವಾರ ತನ್ನ ಸಂಪಾದಕೀಯದಲ್ಲಿ ಮೈಕ್ರೋಬ್ಲಾಗಿಂಗ್ ಸೈಟ್ 'ಟ್ವಿಟರ್' ಅನ್ನು ಬಿಜೆಪಿ ಬಳಸಿ ಬಿಸಾಡಿದೆ ಎಂದು ಗಂಭೀರ ಆರೋಪ ಮಾಡಿದೆ. ಅಷ್ಟೇ ಅಲ್ಲ ಬಿಜೆಪಿಯ ರಾಜಕೀಯ ಹಿತಾಸಕ್ತಿಯನ್ನು ಕಡೆಗಣಿಸಿದೆ ಮತ್ತು ಅದು ಬಿಜೆಪಿಗೆ ಇದು 'ಹೊರೆಯಾಗಿದೆ' ಎಂದು ಟೀಕಿಸಿದೆ.
ಟ್ವಿಟರ್ ಈಗ ಕೇಂದ್ರ ಸರ್ಕಾರಕ್ಕೆ ಹೊರೆಯಾಗಿ ಪರಿಣಮಿಸಿದೆ. ಈ ಹೊರೆಯನ್ನು ಆಡಳಿತ ಸರ್ಕಾರ ಬಿಸಾಡಲು ಬಯಸಿದೆ. "ಈ ಹಿಂದೆ, ಟ್ವಿಟರ್ ಭಾರತೀಯ ಜನತಾ ಪಕ್ಷದ ರಾಜಕೀಯ ಹೋರಾಟದ ಆತ್ಮವಾಗಿತ್ತು. ಆದರೆ, ಟ್ವಿಟರ್ ಈಗ ಕೇಂದ್ರ ಸರ್ಕಾರಕ್ಕೆ ದುಬಾರಿಯಾಗಿ ಮಾರ್ಪಟ್ಟಿದೆ. ಇಂದು ಟ್ವಿಟರ್ ನಂತಹ ಮಾಧ್ಯಮಗಳನ್ನು ಹೊರತುಪಡಿಸಿ, ಎಲ್ಲ ಮಾಧ್ಯಮಗಳು ದೇಶದಲ್ಲಿ ಮೋದಿ ಸರ್ಕಾರದ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಸಾಮ್ನಾ ಹೇಳಿದೆ.
"ಸುಳ್ಳು ಪ್ರಚಾರ" ಕ್ಕೆ ಪ್ರತಿಪಕ್ಷಗಳು ಪ್ರತಿಕ್ರಿಯಿಸಲು ಪ್ರಾರಂಭಿಸಿದ್ದರಿಂದ ಟ್ವಿಟರ್ ಬಿಜೆಪಿಯ ರಾಜಕೀಯ ತಿರುವು ಮುರುವಾಗಿದೆ. ಟ್ವಿಟರ್ ಮೋದಿ ಸರ್ಕಾರದ ಆದೇಶಗಳಿಗೆ ಸೊಪ್ಪು ಹಾಕದ್ದರಿಂದ ಅದರ ಹಿತಾಸಕ್ತಿಯನ್ನು ಕಳೆದುಕೊಂಡಿದೆ ಎಂದು ಸಾಮ್ನಾ ಸಂಪಾದಕೀಯ ಹೇಳಿದೆ. "ಕಳೆದ ಕೆಲವು ವರ್ಷಗಳಲ್ಲಿ, ಚಾರಿತ್ರ್ಯಹರಣ ಅಭಿಯಾನವನ್ನು ಸಾಮಾಜಿಕ ಮಾಧ್ಯಮದಲ್ಲಿ ನಡೆಸಲಾಗುತ್ತಿದೆ. ಬಿಜೆಪಿಯನ್ನು ಹೊರತುಪಡಿಸಿ ಬೇರೆ ಯಾವುದೇ ರಾಜಕೀಯ ಪಕ್ಷವು ಅದನ್ನು ಹೇಗೆ ಸಂಪೂರ್ಣವಾಗಿ ಬಳಸಿಕೊಳ್ಳಬೇಕೆಂದು ತಿಳಿದಿರಲಿಲ್ಲ. 2014 ರಲ್ಲಿ ಬಿಜೆಪಿ ಈ ಕಾರ್ಯವನ್ನು ಕರಗತ ಮಾಡಿಕೊಂಡಿತ್ತು. ಈ ಅಭಿಯಾನದಲ್ಲಿ ಆ ಸಮಯದಲ್ಲಿ, ಬಿಜೆಪಿ ಸೈನ್ಯವು ಸೈಬರ್ ಜಗತ್ತಿನಲ್ಲಿ ಹೆಚ್ಚು ಸಕ್ರಿಯವಾಗಿತ್ತು ಎಂದು ಅದು ಹೇಳಿದೆ.
ಈ ಹಿಂದೆ ಟ್ವಿಟರ್ನಲ್ಲಿ ಮನಮೋಹನ್ ಸಿಂಗ್, ಸೇರಿ ಹಲವು ನಾಯಕರ ವಿರುದ್ಧ ಮಾತನಾಡಿದ್ದು ಯಾರು?
ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ರಾಹುಲ್ ಗಾಂಧಿಯವರಿಗೆ ಆಕ್ಷೇಪಾರ್ಹ ಪದಗಳನ್ನು ಯಾವ ನಿಯಮಗಳ ಅಡಿಯಲ್ಲಿ ಬಳಸಲಾಗಿದೆ? ಡಾ.ಮನ್ಮೋಹನ್ ಸಿಂಗ್ ಅವರಂತಹ ಹಿರಿಯ ನಾಯಕನಿಗೆ ಬಳಿಸಿದ ಪದಗಳು ಯಾವುವು? ರಾಜಕೀಯ ಮತ್ತು ಸಾಮಾಜಿಕ ಸೇವೆಯಲ್ಲಿ ಜೀವನವನ್ನು ಕಳೆದಿರುವ ಉದ್ಧವ್ ಠಾಕ್ರೆ ಅವರಿಂದ ಹಿಡಿದು ಮಮತಾ ಬ್ಯಾನರ್ಜಿಯಂತಹ ರಾಜಕಾರಣಿಗಳಿಗೆ, ಶರದ್ ಪವಾರ್, ಪ್ರಿಯಾಂಕಾ ಗಾಂಧಿ, ಮುಲಾಯಂ ಸಿಂಗ್ ಯಾದವ್ ಮುಂತಾದ ಪ್ರತಿಪಕ್ಷ ನಾಯಕರ ವಿರುದ್ಧ ಚಾರಿತ್ರ್ಯ ಹರಣ ಅಭಿಯಾನವನ್ನು ಪ್ರಾರಂಭಿಸಿದರು ಯಾರು? ಎಂದು ಸಾಮ್ನಾ ಬಿಜೆಪಿಯನ್ನು ಪ್ರಶ್ನಿಸಿದೆ.
ಆಗ ಬೇಕಿದ್ದು, ಈಗೇಕೆ ಬೇಡವಾಯ್ತು?
ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಈ ದಿನಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಇದು ಬಿಜೆಪಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಸಾಮ್ನಾ ಆರೋಪಿಸಿದೆ. ಮತ್ತು ಟ್ವಿಟರ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಕಾರಣದಿಂದಾಗಿ, "ಗಂಗೆಯಲ್ಲಿ ಹರಿಯುವ ಮೃತದೇಹಗಳು, ವಾರಾಣಸಿ ಮತ್ತು ಗುಜರಾತ್‌ನಲ್ಲಿ ನಿರಂತರವಾಗಿ ಬೆಂಕಿ ಉರಿಯುತ್ತಿರುವುದು, ಶ್ಮಶಾನಗಳ ಹೊರಗೆ ಆ್ಯಂಬುಲೆನ್ಸ್ ಕ್ಯೂಗಳು ಇಂತಹ ವಿಷಯಗಳು ಇಡೀ ಜಗತ್ತನ್ನೇ ತಲುಪಿವೆ ಮತ್ತು ಬಿಜೆಪಿ ಸರ್ಕಾರದ ಕಾರ್ಯ ವಿಧಾನವನ್ನು ಬಹಿರಂಗಪಡಿಸಿವೆ. ಟ್ವಿಟರ್ ಹೊಸ ಮಧ್ಯವರ್ತಿ ಮಾರ್ಗಸೂಚಿ ನಿಯಮಗಳನ್ನು ಪಾಲಿಸದಿದ್ದನ್ನು ಉಲ್ಲೇಖಿಸಿ, ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಶನಿವಾರ ಟ್ವಿಟರ್‌ಗೆ ಅಂತಿಮವಾಗಿ ಹೊಸ ಮಾರ್ಗಸೂಚಿಗಳ ಅವಶ್ಯಕತೆಗಳನ್ನು ತಕ್ಷಣವೇ ಪಾಲಿಸುವಂತೆ ಕೇಳಿಕೊಂಡಿದೆ.
ಈ ವಿಷಯವೀಗ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಇದನ್ನೇ ಸಾಮ್ನಾ ತನ್ನ ಸಂಪಾದಕೀಯದಲ್ಲಿ ಉಲ್ಲೇಖಿಸಿ ಕೇಂದ್ರ ಸರ್ಕಾರವನ್ನು ಟೀಕಿಸಿದೆ.