ETV Bharat / bharat

ಭಾರತದಲ್ಲಿ ಕಾನೂನು ರಕ್ಷಣೆ ಕಳೆದುಕೊಂಡ ಬೆನ್ನಲ್ಲೇ ಕಾನೂನಿಗೆ ಮಣಿಯುತ್ತೇನೆಂದ ಟ್ವಿಟರ್

ಇಲ್ಲಿಯವರೆಗೆ ತಿರುಚಿದ ವಿಡಿಯೋಗಳಿಗೆ, ಮೂರನೇ ವ್ಯಕ್ತಿ ಪೋಸ್ಟ್ ಮಾಡುವ ಆಕ್ಷೇಪಾರ್ಹ ವಿಷಯಗಳಿಗೆ ಟ್ವಿಟರ್​ಗೆ ರಕ್ಷಣೆ ನೀಡಲಾಗುತ್ತಿದ್ದು, ಆದರೀಗ ಅಂತಂಹ ಯಾವುದೇ ರಕ್ಷಣೆ ನೀಡಲಾಗುತ್ತಿಲ್ಲ ಎಂದು ಸರ್ಕಾರದ ಉನ್ನತ ಮೂಲಗಳು ಹೇಳಿವೆ.

twitter-loses-its-status-as-intermediary-platform-in-india
ಭಾರತದಲ್ಲಿ ಕಾನೂನು ರಕ್ಷಣೆ ಕಳೆದುಕೊಂಡ ಬೆನ್ನಲ್ಲೇ ಕಾನೂನಿಗೆ ಮಣಿದ ಟ್ವಿಟರ್
author img

By

Published : Jun 16, 2021, 11:46 AM IST

ನವದೆಹಲಿ: ನೂತನ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಗಳನ್ನು ಪಾಲಿಸದ ಕಾರಣದಿಂದಾಗಿ ಅದರಲ್ಲೂ ಹೊಸ ಕಾಯ್ದೆಯಲ್ಲಿ ಹೇಳುವಂತೆ ಕೆಲವು ಅಧಿಕಾರಿಗಳನ್ನು ನೇಮಿಸದ ಹಿನ್ನೆಲೆಯಲ್ಲಿ ಟ್ವಿಟರ್ (Twitter)​ ಭಾರತದಲ್ಲಿ ಕಾನೂನಾತ್ಮಕ ರಕ್ಷಣೆಯನ್ನು ಕಳೆದುಕೊಂಡಿದೆ. ಈ ಮಹತ್ವದ ಬೆಳವಣಿಗೆ ಬೆನ್ನಲ್ಲೇ ತಾನು ಕೇಂದ್ರ ಸರ್ಕಾರ ಕಾನೂನು ಪಾಲಿಸುವುದಾಗಿ ಟ್ವಿಟರ್ ಭರವಸೆ ನೀಡಿದೆ.

ಮೇ 25ರಂದು ಜಾರಿಗೆ ತರಲಾದ ಹೊಸ ಕಾಯ್ದೆಯ ನಿಯಮಗಳನ್ನು ಟ್ವಿಟರ್ ಪಾಲಿಸದ ಕಾರಣದಿಂದಾಗಿ 'ಬಳಕೆದಾರರ ಮಧ್ಯವರ್ತಿ'ಯಾಗಿ ಕಾರ್ಯನಿರ್ವಹಿಸಲು ಅದಕ್ಕೆ ಕಾನೂನು ರಕ್ಷಣೆ ನೀಡಲಾಗುತ್ತಿಲ್ಲ. ಟ್ವೀಟ್ ಪೋಸ್ಟ್​ಗಳು ಆಕ್ಷೇಪಾರ್ಹವಾಗಿದ್ದಲ್ಲಿ ಭಾರತೀಯ ಕಾನೂನಿನ ಅಡಿಯಲ್ಲಿ ಟ್ವಿಟರ್​ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಈ ಮೂಲಕ ಮೂರನೇ ವ್ಯಕ್ತಿ ಹಾಕುವ ಪೋಸ್ಟ್​ಗಳಿಗೂ ಟ್ವಿಟರ್​ ಜವಾಬ್ದಾರನಾಗಿ ಇರಬೇಕಾಗುತ್ತದೆ. ಈಗಾಗಲೇ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಕೋಮು ಪ್ರಚೋದನೆ ನೀಡುವ ಆರೋಪದಲ್ಲಿ ಟ್ವಿಟರ್​ ವಿರುದ್ಧ ದೂರು ದಾಖಲಾಗಿದೆ.

ಉತ್ತರ ಪ್ರದೇಶದಲ್ಲಿ ದೂರು ಯಾವ ಕಾರಣಕ್ಕಾಗಿ?

ಜೂನ್ 5ರಂದು ಉತ್ತರ ಪ್ರದೇಶದ ಗಾಜಿಯಾಬಾದ್​​ನಲ್ಲಿ ಹಿರಿಯ ಮುಸ್ಲಿಂ ವ್ಯಕ್ತಿಯೋರ್ವನನ್ನು ಹಲವರು ಥಳಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಲಾಗಿದ್ದು, ಆಕ್ಷೇಪಾರ್ಹ, ಪ್ರಚೋದನಾತ್ಮಕ ವಿಷಯವನ್ನು ಟ್ವಿಟರ್​​ನಿಂದ ತೆಗೆಯದ ಆರೋಪದಲ್ಲಿ ವ್ಯಕ್ತಿಯೋರ್ವರು ದೂರು ನೀಡಿದ್ದರು. ಗಾಜಿಯಾಬಾದ್ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಮುಸ್ಲಿಂ ವ್ಯಕ್ತಿಯ ಗಡ್ಡವನ್ನು ಬಲವಂತವಾಗಿ ಕತ್ತರಿಸಿ, ವಂದೇ ಮಾತರಂ ಮತ್ತು ಜೈ ಶ್ರೀರಾಮ್ ಎಂದು ಹೇಳಲು ಒತ್ತಾಯಪಡಿಸಲಾಗಿತ್ತು. ಈ ವಿಚಾರದಲ್ಲಿ ಟ್ವಿಟರ್ ಮಾತ್ರವಲ್ಲದೇ ಹಲವು ಪತ್ರಕರ್ತರ ಮೇಲೆಯೂ ಎಫ್​ಐಆರ್ ದಾಖಲಾಗಿದೆ.

ಇದಾದ ನಂತರ ಜೂನ್ 4ರಂದು ಸುದ್ದಿಗೋಷ್ಠಿ ನಡೆಸಿದ ಪೊಲೀಸರು, ಟ್ವಿಟರ್​ ಆಕ್ಷೇಪಾರ್ಹ ವಿಡಿಯೋ ಬಗ್ಗೆ ಮಾಹಿತಿ ನೀಡಿದೆ. ಆದರೆ ಈವರೆಗೂ ವಿಡಿಯೋ ಡಿಲೀಟ್​ ಮಾಡಿಲ್ಲ ಎಂದು ಮಾಹಿತಿ ನೀಡಿದ್ದರು. ಇಲ್ಲಿಯವರೆಗೆ ತಿರುಚಿದ ವಿಡಿಯೋಗಳಿಗೆ, ಮೂರನೇ ವ್ಯಕ್ತಿ ಪೋಸ್ಟ್ ಮಾಡುವ ಆಕ್ಷೇಪಾರ್ಹ ವಿಷಯಗಳಿಗೆ ಟ್ವಿಟರ್​ಗೆ ರಕ್ಷಣೆ ನೀಡಲಾಗುತ್ತಿದ್ದು, ಆದರೀಗ ಅಂತಹ ಯಾವುದೇ ರಕ್ಷಣೆ ನೀಡಲಾಗುತ್ತಿಲ್ಲ ಎಂದು ಉನ್ನತ ಮೂಲಗಳು ಹೇಳಿದ್ದು, ಗಾಜಿಯಾಬಾದ್ ಪ್ರಕರಣದಲ್ಲೂ ಅದು ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ.

ಇದನ್ನೂ ಓದಿ: ಮಧ್ಯಂತರ ಮುಖ್ಯ ಅನುಸರಣೆ ಅಧಿಕಾರಿಯನ್ನು ನೇಮಿಸಿದ ಟ್ವಿಟ್ಟರ್​ ಇಂಡಿಯಾ

ಈ ಹಿಂದೆ ಜೂನ್ 9ರಂದು ಟ್ವಿಟರ್ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ಟ್ವಿಟರ್ ಸರ್ಕಾರಕ್ಕೆ ಪತ್ರ ಬರೆದಿತ್ತು.

ಅಧಿಕಾರಿ ನೇಮಿಸಿದ ಟ್ವಿಟರ್

ಸದ್ಯಕ್ಕೆ ಟ್ವಿಟರ್​ ಮಧ್ಯಂತರ ಮುಖ್ಯ ಅನುಸರಣೆ ಅಧಿಕಾರಿಯನ್ನು ನೇಮಕ ಮಾಡಿರುವುದಾಗಿ ಸ್ಪಷ್ಟನೆ ನೀಡಿದ್ದು, ಶೀಘ್ರದಲ್ಲೇ ಅಧಿಕಾರಿಯ ವಿವರಗಳನ್ನು ಮಾಹಿತಿ ತಂತ್ರಜ್ಞಾನ (ಐಟಿ) ಸಚಿವಾಲಯದೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಹೇಳಿದೆ.

ಈ ಅಧಿಕಾರಿಯ ಮಾಹಿತಿ ಹಂಚಿಕೊಂಡ ಬಳಿಕ ಅದನ್ನು ಪರಿಶೀಲನೆ ನಡೆಸುವ ಸರ್ಕಾರ ಟ್ವಿಟರ್ ಐಟಿ ನೀತಿಗಳನ್ನು ಒಪ್ಪಿಕೊಂಡಿದೆಯೋ? ಅಥವಾ ಇಲ್ಲವೇ? ಎಂಬುದರ ನಿರ್ಧಾರಕ್ಕೆ ಬರಲಿದೆ. ಈಗ ಕಾನೂನು ರಕ್ಷಣೆಗೆ ಕತ್ತರಿ ಬಿದ್ದ ಬೆನ್ನಲ್ಲೇ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಯಮಗಳನ್ನು ಪಾಲಿಸುವುದಾಗಿ ಟ್ವಿಟರ್​ ಭರವಸೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.