ETV Bharat / bharat

ತಮ್ಮನನ್ನು ಮಡಿಲಲ್ಲಿಟ್ಟುಕೊಂಡೇ ಪಾಠ ಕೇಳುವ ಪುಟ್ಟ ಬಾಲಕಿ: ಶಿಕ್ಷಣದ ಮಹತ್ವ ತಿಳಿಯಲು ಈಕೆಯೇ ಸೂಕ್ತ - ಮಣಿಪುರದಲ್ಲಿ ಶಿಕ್ಷಣದ ಮಹತ್ವ ಹೇಳುವ ಬಾಲಕಿ

ಶಿಕ್ಷಣ ಈಗ ದುಬಾರಿಯಾಗುತ್ತಿದೆ. ಒಂದು ವೇಳೆ ಶಿಕ್ಷಣ ದುಬಾರಿ ಅಲ್ಲದಿದ್ದರೂ, ಕೆಲವು ಬಡಮಕ್ಕಳಿಗೆ ಅದು ಕನಸಾಗಿಯೇ ಉಳಿದಿದೆ. ಕೌಟುಂಬಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗಳು ಕೆಲವೊಮ್ಮೆ ಶಿಕ್ಷಣ ಪಡೆದು ಜೀವನ ರೂಪಿಸಿಕೊಳ್ಳಬೇಕಾದ ಮಗುವನ್ನು ಅನಕ್ಷರತೆಯ ಕತ್ತಲಿನಲ್ಲಿ ಕೊಳೆಯುವಂತೆ ಮಾಡುತ್ತವೆ ಎಂಬುದು ಎಲ್ಲರೂ ಅರಿತಿರಬೇಕಾದ ಸತ್ಯ. ಇದಕ್ಕೆಲ್ಲಾ ಅಪವಾದ ಎಂಬಂತಿದೆ ಮಣಿಪುರದ ಪುಟ್ಟ ಬಾಲಕಿಯೊಬ್ಬಳ ಕತೆ.

Twitter bows to 10-year-old Manipur Girl attending classes with her younger sibling on lap
ತಮ್ಮನನ್ನು ಮಡಿಲಲ್ಲಿಟ್ಟುಕೊಂಡೇ ಪಾಠ ಕೇಳುವ ಪುಟ್ಟ ಬಾಲಕಿ: ಶಿಕ್ಷಣದ ಮಹತ್ವ ತಿಳಿಯಲು ಈಕೆಯೇ ಸೂಕ್ತ
author img

By

Published : Apr 6, 2022, 11:43 AM IST

Updated : Apr 6, 2022, 12:36 PM IST

ಇಂಫಾಲ, ಮಣಿಪುರ: ಹಿಜಾಬ್ ಧರಿಸಿಲ್ಲವೆಂದು ಶಿಕ್ಷಣಕ್ಕೆ ಅವಕಾಶ ನೀಡದಿರುವ, ಹಿಜಾಬ್​ಗೆ ಅವಕಾಶ ನೀಡದಿದ್ದರೆ ತರಗತಿಗಳು, ಪರೀಕ್ಷೆಗಳಿಗೆ ಹಾಜರಾಗುವುದಿಲ್ಲ ಎಂಬ ವಾದ-ಪ್ರತಿವಾದಗಳು ರಾಷ್ಟ್ರಾದ್ಯಂತ ನಡೆಯುತ್ತಿವೆ. ಎರಡೂ ವಾದ-ಪ್ರತಿವಾದಗಳಲ್ಲಿ ಶಿಕ್ಷಣ ಅನಾಥವಾಗಿದೆ. ಆದರೆ, ಶಿಕ್ಷಣದ ಮಹತ್ವವನ್ನು ಹೇಳುವ ಪುಟ್ಟ ಬಾಲಕಿಯೊಬ್ಬಳು ಇಲ್ಲಿದ್ದಾಳೆ. ಆ ಬಾಲಕಿಯ ಕತೆ ಹಿಜಾಬ್ ಪರ ಮತ್ತು ಹಿಜಾಬ್​ ವಿರೋಧಿಗಳಿಗೆ ಖಂಡಿತಾ ಉತ್ತರವಾಗಬಲ್ಲದು.

ಆ ಪುಟ್ಟ ಬಾಲಕಿ ಹೆಸರು ಮೈನಿಂಗ್ಸಿನ್ಲಿಯು ಪಮೇಯಿ. ಮಣಿಪುರದಲ್ಲಿ ತಮೆಂಗ್ಲಾಂಗ್ ನಗರದಲ್ಲಿರುವ ಡೈಲಾಂಗ್ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿ ಮೈನಿಂಗ್ಸಿನ್ಲಿಯು ಪಮೇಯಿ ಶಾಲೆಗೆ ಬರಬೇಕಾದರೆ ತನ್ನ ಪುಟ್ಟ ತಮ್ಮನನ್ನು ಕರೆತರುತ್ತಾಳೆ. ಪುಟ್ಟ ಬಾಲಕಿಗೊಬ್ಬ ಪುಟ್ಟ ತಮ್ಮ. ಶಾಲೆಗೆ ಕರೆತರುವುದು ಮಾತ್ರವಲ್ಲದೇ ಪಾಠಗಳು ನಡೆಯಬೇಕಾದರೆ ಕೂಡಾ ತಮ್ಮನನ್ನು ತನ್ನ ಜೊತೆಯಲ್ಲಿಯೇ ಜೋಪಾನವಾಗಿ ನೋಡಿಕೊಳ್ಳುತ್ತಾಳೆ.

  • Her dedication for education is what left me amazed!

    This 10-year-old girl named Meiningsinliu Pamei from Tamenglong, Manipur attends school babysitting her sister, as her parents were out for farming & studies while keeping her younger sister in her lap. pic.twitter.com/OUIwQ6fUQR

    — Th.Biswajit Singh (@BiswajitThongam) April 2, 2022 " class="align-text-top noRightClick twitterSection" data=" ">

ತಮ್ಮನಿಗೆ ನಿದ್ರೆ ಬಂದರೆ ತನ್ನದೇ ಮಡಿಲಲ್ಲಿ ಮಲಗಿಸಿಕೊಳ್ಳುತ್ತಾಳೆ. ಪಾಠಗಳು ನಡೆಯುತ್ತಿದ್ದರೂ ಕೂಡಾ ತಮ್ಮನನ್ನು ತನ್ನ ಪುಟ್ಟ ಮಡಿಲಲ್ಲೇ ಜೋಪಾನ ಮಾಡುತ್ತಾ ಶಿಕ್ಷಕರು ಹೇಳಿದ್ದನ್ನು ಬರೆದುಕೊಳ್ಳುತ್ತಾಳೆ ಮೈನಿಂಗ್ಸಿನ್ಲಿಯು ಪಮೇಯಿ. ಮಣಿಪುರದ ಸಚಿವರಾದ ಥಾಂಗಂ ಬಿಸ್ವಜಿತ್ ಸಿಂಗ್ ಅವರು ಟ್ವಿಟರ್​ನಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದು, ಮೈನಿಂಗ್ಸಿನ್ಲಿಯು ಪಮೇಯಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ತಂದೆ, ತಾಯಿ ಇಬ್ಬರೂ ಕಾರ್ಮಿಕರು: ಮೈನಿಂಗ್ಸಿನ್ಲಿಯು ಪಮೇಯಿ ಅವರ ಕುಟುಂಬ ತೀರಾ ಕಡುಬಡತನದಲ್ಲಿರುವ ಕುಟುಂಬ. ಪಮೇಯಿ ಅವರ ತಂದೆ ತಾಯಿಗಳಿಬ್ಬರೂ ತೋಟದ ಕೆಲಸಕ್ಕೆ ತೆರಳುತ್ತಾರೆ. ಆಗ ಮಗುವನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇರುವುದಿಲ್ಲ. ಈ ವೇಳೆ ಶಾಲೆಗೆ ತೆರಳಲೇಬೇಕೆಂಬ ಉದ್ದೇಶದಿಂದ ಪಮೇಯಿ ತನ್ನ ಎರಡು ವರ್ಷದ ತಮ್ಮನೊಂದಿಗೆ ಶಾಲೆಗೆ ಬರುತ್ತಾಳೆ.

ಶಾಲೆ ಮುಗಿದ ನಂತರ ತಮ್ಮನೊಂದಿಗೆ ಮನೆಗೆ ತೆರಳುತ್ತಾಳೆ. ಸಚಿವ ಬಿಸ್ವಜಿತ್ ಸಿಂಗ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಪಮೇಯಿ ಪೋಷಕರೊಂದಿಗೆ ಮಾತನಾಡಿದ್ದು, ಹಣಕಾಸಿನ ನೆರವು ನೀಡುವ ಭರವಸೆ ನೀಡಿದ್ದಾರೆ. ಜೊತೆಗೆ ಪಮೇಯಿಗೆ ಪದವಿಯವರೆಗೆ ಆಕೆಯ ಶಿಕ್ಷಣಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಾ ಪಮೇಯಿಗೆ ಹೊಗಳಿಕೆಯ ಮಹಾಪೂರವನ್ನೇ ಹರಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮೈನಿಂಗ್ಸಿನ್ಲಿಯು ಪಮೇಯಿ ಅವರಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಜೀವನವನ್ನು ರೂಪಿಸುವ ಸಾಧನ ಶಿಕ್ಷಣ. ಶಿಕ್ಷಣ ಈಗ ದುಬಾರಿಯಾಗುತ್ತಿದೆ. ಒಂದು ವೇಳೆ ಶಿಕ್ಷಣ ದುಬಾರಿ ಅಲ್ಲದಿದ್ದರೂ, ಕೆಲವು ಬಡಮಕ್ಕಳಿಗೆ ಅದು ಕನಸಾಗಿಯೇ ಉಳಿದಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಜೊತೆಗೆ ಎಲ್ಲಾ ಸೌಲಭ್ಯಗಳು ಉಚಿತವಿದ್ದು, ಬಡಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗಿ ಶಿಕ್ಷಣ ಪಡೆಯಬಹುದು ಎಂಬ ಪೂರ್ವಾಗ್ರಹ ಪೀಡಿತ ಮನಸ್ಥಿತಿಯನ್ನು ಕೆಲವರು ಹೊಂದಿರುತ್ತಾರೆ.

ಆದರೆ, ಕೌಟುಂಬಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗಳು ಕೆಲವೊಮ್ಮೆ ಶಿಕ್ಷಣ ಪಡೆದು ಜೀವನ ರೂಪಿಸಿಕೊಳ್ಳಬೇಕಾದ ಮಗುವನ್ನು ಅನಕ್ಷರತೆಯ ಕತ್ತಲಿನಲ್ಲಿ ಕೊಳೆಯುವಂತೆ ಮಾಡುತ್ತವೆ ಎಂಬುದು ಎಲ್ಲರೂ ಅರಿತಿರಬೇಕಾದ ಸತ್ಯ. ಇದಕ್ಕೆಲ್ಲಾ ಅಪವಾದ ಎಂಬಂತಿದೆ ಮಣಿಪುರದ ಪುಟ್ಟ ಬಾಲಕಿಯೋರ್ವಳ ಕತೆ.

ಇದನ್ನೂ ಓದಿ: ಗೋಡೆ ನಡುವೆ ಸಿಲುಕಿಕೊಂಡು ಹೊರಬರಲಾಗದೇ ಒದ್ದಾಡಿದ ಕಳ್ಳ!; ವಿಡಿಯೋ ನೋಡಿ

Last Updated : Apr 6, 2022, 12:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.