ETV Bharat / bharat

ಭಾರತದಲ್ಲಿ ಮಕ್ಕಳ ಲೈಂಗಿಕ ಶೋಷಣೆ, ನಗ್ನತೆಗೆ ಉತ್ತೇಜನೆ: ತಿಂಗಳಲ್ಲಿ 44 ಸಾವಿರ ಟ್ವಿಟರ್​ ಖಾತೆಗಳು ರದ್ದು - ಟ್ವಿಟರ್​ ಖಾತೆಗಳು ರದ್ದು

ಸೆಪ್ಟೆಂಬರ್ 26ರಿಂದ ಅಕ್ಟೋಬರ್ 25ರ ಅವಧಿಯಲ್ಲಿ 44,611 ಖಾತೆಗಳ ಮೇಲೆ ಟ್ವಿಟರ್ ನಿಷೇಧ ಹೇರಿದೆ. ಅಲ್ಲದೇ, ಭಯೋತ್ಪಾದನೆ ಉತ್ತೇಜಿಸುವ 4,014 ಖಾತೆಗಳನ್ನೂ ಟ್ವಿಟರ್​ ತೆಗೆದುಹಾಕಿದೆ.

twitter-bans-over-44k-accounts-for-policy-violations-in-india
ಭಾರತದಲ್ಲಿ ಮಕ್ಕಳ ಲೈಂಗಿಕ ಶೋಷಣೆ, ನಗ್ನತೆಗೆ ಉತ್ತೇಜನೆ: ತಿಂಗಳಲ್ಲಿ 44 ಸಾವಿರ ಟ್ವಿಟರ್​ ಖಾತೆಗಳು ರದ್ದು
author img

By

Published : Dec 1, 2022, 9:26 PM IST

ನವದೆಹಲಿ: ಬಿಲಿಯೇನರ್ ಎಲೋನ್ ಮಸ್ಕ್ ಅಧಿಕಾರ ವಹಿಸಿಕೊಂಡ ಒಂದೇ ತಿಂಗಳಲ್ಲಿ ಭಾರತದಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ನಗ್ನತೆಯನ್ನು ಉತ್ತೇಜಿಸುವ 44,611 ಖಾತೆಗಳನ್ನು ಟ್ವಿಟರ್ ರದ್ದು ಮಾಡಿದೆ.

ಈ ಹಿಂದೆ ಆಗಸ್ಟ್ 26ರಿಂದ ಸೆಪ್ಟೆಂಬರ್ 25ರ ನಡುವಿನ ಅವಧಿಯಲ್ಲೂ ಮಕ್ಕಳ ಲೈಂಗಿಕ ಶೋಷಣೆ ಉತ್ತೇಜಿಸುತ್ತಿದ್ದ 52,141 ಖಾತೆಗಳನ್ನು ರದ್ದು ಟ್ವಿಟರ್​ ಮಾಡಿತ್ತು. ಇದೀಗ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 25ರ ನಡುವೆ ಇಂತಹ 44,611 ಖಾತೆಗಳ ಮೇಲೆ ಟ್ವಿಟರ್ ನಿಷೇಧ ಹೇರಿದೆ. ಅಲ್ಲದೇ, ಭಯೋತ್ಪಾದನೆಯನ್ನು ಉತ್ತೇಜಿಸುವ 4,014 ಖಾತೆಗಳನ್ನೂ ಟ್ವಿಟರ್​ ತೆಗೆದುಹಾಕಿದೆ.

2021ರ ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ ಭಾರತದಲ್ಲಿನ ಬಳಕೆದಾರರಿಂದ 582 ದೂರುಗಳನ್ನು ಸ್ವೀಕರಿಸಿದ್ದು, 20 ಯುಆರ್​ಎಲ್​ಗಳ ಮೇಲೂ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ವಿಟರ್​ ತಿಳಿಸಿದೆ. ಹೊಸ ಐಟಿ ನಿಯಮಗಳ ಪ್ರಕಾರ 5 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ದೊಡ್ಡ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮಾಸಿಕ ವರದಿಗಳನ್ನು ಪ್ರಕಟಿಸಬೇಕು.

ಇದನ್ನೂ ಓದಿ: ಟ್ವಿಟರ್ ಹೊಸ ಖಾತೆ: 90 ದಿನಗಳವರೆಗೆ 'ಬ್ಲೂ ಟಿಕ್ ಚಂದಾದಾರಿಕೆ ಸೇವೆ'ಗೆ ಅನುಮತಿಯಿಲ್ಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.