ತಿರುವನಂತಪುರಂ: ಇಲ್ಲಿನ ವಝೈಲ ಸಮೀಪದ ಲಾಡ್ಜ್‌ನಲ್ಲಿ ವ್ಯಕ್ತಿಯೊಬ್ಬನನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಲಾಗಿದೆ. 2011ರ ಜೋಡಿ ಕೊಲೆ ಪ್ರಕರಣದ ಆರೋಪಿ ಮಣಿಚನನ್ (34) ಎಂಬಾತನನ್ನು ಹತ್ಯೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ದೀಪಕ್ ಲಾಲ್ ಮತ್ತು ಅರುಣ್ ಜಿ ರಾಜೀವ್ ಬಂಧಿತರು. ಈ ಪೈಕಿ ದೀಪಕ್ ಲಾಲ್ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.
ಜೂನ್.1ರ ರಾತ್ರಿ 9.30 ಕ್ಕೆ ಈ ಘಟನೆ ನಡೆದಿದೆ. ಮದ್ಯಪಾನ ಮಾಡುವ ವೇಳೆ ನಡೆದ ಜಗಳವೇ ಕೊಲೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಮಣಿಚನನ್ ಹಾಗೂ ಆತನ ಸ್ನೇಹಿತ ಹರಿಲಾಲ್ ಎರಡು ದಿನಗಳ ಹಿಂದೆ ಲಾಡ್ಜ್‌ನಲ್ಲಿ ರೂಂ ಮಾಡಿಕೊಂಡಿದ್ದರು. ಕೊನೆಯ ದಿನ ಅರುಣ್ ಮತ್ತು ದೀಪಕ್ ಅಲ್ಲಿಗೆ ಬಂದಿದ್ದಾರೆ.
ಇದನ್ನೂ ಓದಿ: ಮೊಬೈಲ್ ಕೊಡಿಸದ 'ಬಡ' ತಾಯಿಯೊಂದಿಗೆ ಜಗಳ: ಮನೆ ಬಿಟ್ಟು ಹೋದ ವಿದ್ಯಾರ್ಥಿ ಶವವಾಗಿ ಪತ್ತೆ
ಎಲ್ಲರೂ ಒಟ್ಟಿಗೆ ಕೂತು ಮದ್ಯಪಾನ ಮಾಡುವಾಗ ನಡೆದ ಜಗಳವೇ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ. ಆರೋಪಿಗಳ ಜೊತೆಗಿದ್ದ ತಿರುಮಲ ಮೂಲದ ಹರಿಕುಮಾರ್ ಎಂಬಾತನಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳು ನೀಡಿದ ಮಾಹಿತಿ ಪ್ರಕಾರ ಮಣಿಚನನ್ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ನಾಲ್ಕು ತಿಂಗಳ ಹಿಂದೆ ಇವರಿಬ್ಬರ ನಡುವೆ ಜಗಳವಾಗಿತಂತೆ.