ಮುಂಬೈ: ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಝಾನ್ ಖಾನ್ ವಿರುದ್ಧ ಕಠಿಣ ಸ್ವರೂಪದಲ್ಲಿ ವಿಚಾರಣೆ ನಡೆಸಬೇಕು ಎಂದು ಅವರ ತಾಯಿ ಆಗ್ರಹಿಸಿದ್ದಾರೆ. ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿರುವ ಅವರು, ಶೀಝಾನ್ ಖಾನ್ ನನ್ನ ಮಗಳು ತುನಿಶಾಳನ್ನು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ, ಬಳಸಿಕೊಂಡಿದ್ದಾನೆ. ಅಲ್ಲದೇ ಈ ಮೊದಲು ಆತನಿಗೆ ಬೇರೆ ಹುಡುಗಿಯೊಂದಿಗೆ ಸಂಬಂಧವಿತ್ತು. ಅದಾಗಿಯೂ ತುನಿಶಾಳನ್ನು ನಾಲ್ಕು ತಿಂಗಳು ಕಾಲ ದುರ್ಬಳಕೆ ಮಾಡಿದ್ದಾನೆ. ಮಗಳ ಸಾವಿಗೆ ಕಾರಣನಾದ ಶೀಝಾನ್ಗೆ ಶಿಕ್ಷೆ ಆಗಲೇಬೇಕು ಎಂದರು.
ಪ್ರಕರಣದ ವಿವರ: ಡಿಸೆಂಬರ್ 24 ರಂದು ಮುಂಬೈನ ನೈಗಾಂವ್ ಸಮೀಪದ ಟಿವಿ ಧಾರವಾಹಿ ಸೆಟ್ವೊಂದರ ಮೇಕಪ್ ರೂಂನಲ್ಲಿ ನಟಿ ತುನಿಶಾ ಆತ್ಮಹತ್ಯೆ ಮಾಡಿಕೊಂಡಿದ್ದರು. ನಟಿ ಗರ್ಭಿಣಿಯಾಗಿದ್ದು, ಶೀಝಾನ್ ಖಾನ್ ಮದುವೆಯಾಗಲು ನಿರಾಕರಿಸಿದ್ದೇ ಅವರ ಸಾವಿಗೆ ಕಾರಣ ಎಂದು ಹೇಳಲಾಗಿದೆ. ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಟಿವಿ ಧಾರಾವಾಹಿ ಸೆಟ್‌ನಲ್ಲೇ ಕಿರುತೆರೆ ನಟಿ ಆತ್ಮಹತ್ಯೆ