ETV Bharat / bharat

ತಿಮ್ಮಪ್ಪನ ಭಕ್ತರಿಗಾಗಿ ವಿಶೇಷ ಆ್ಯಪ್​ ವಿನ್ಯಾಸ: ರಿಲಯನ್ಸ್​​​ ಜಿಯೋ ಜತೆ TTD ಒಪ್ಪಂದ - ತಿಮ್ಮಪ್ಪನ ಭಕ್ತರಿಗಾಗಿ ವಿಶೇಷ ಆ್ಯಪ್​

ತಿರುಪತಿ ಬಾಲಾಜಿ ದರ್ಶನ ಪಡೆದುಕೊಳ್ಳಬೇಕಾದರೆ ಇದೀಗ ಆನ್​ಲೈನ್ ಟಿಕೆಟ್​ ಬುಕ್​ ಮಾಡಿಕೊಳ್ಳಬೇಕಾಗಿದ್ದು, ಈ ವೇಳೆ ಕೆಲವರು ತೊಂದರೆಗೊಳಗಾಗುತ್ತಿದ್ದಾರೆ. ಸಮಸ್ಯೆ ಬಗೆಹರಿಸಲು ಟಿಟಿಡಿ ಮುಂದಾಗಿದ್ದು, ಅದಕ್ಕಾಗಿ ಜಿಯೋ ಜೊತೆ ಒಪ್ಪಂದ ಮಾಡಿಕೊಂಡಿದೆ.

TTD
TTD
author img

By

Published : Oct 9, 2021, 7:23 PM IST

ತಿರುಪತಿ(ಆಂಧ್ರಪ್ರದೇಶ): ದೇಶದ ಅತಿ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾಗಿರುವ ತಿರುಪತಿ ದೇವಸ್ಥಾನ ಈಗಾಗಲೇ ರೀ ಓಪನ್​ ಆಗಿದ್ದು, ಆನ್​ಲೈನ್​ ಮೂಲಕ ಟಿಕೆಟ್​ ಬುಕ್​ ಮಾಡಿ ಬಾಲಾಜಿ ದರ್ಶನ ಪಡೆದುಕೊಳ್ಳಬಹುದಾಗಿದೆ. ಭಕ್ತರಿಗೋಸ್ಕರ ಟಿಟಿಡಿ ಇದೀಗ ಹೊಸದೊಂದು ಆ್ಯಪ್​ ವಿನ್ಯಾಸ ಮಾಡಲು ಮುಂದಾಗಿದೆ.

ದೇವಸ್ಥಾನದ ಎಲ್ಲ ಸೇವೆಗಳು ಒಂದೇ ಸ್ಥಳದಲ್ಲಿ ಸಿಗುವ ಉದ್ದೇಶದಿಂದ ಟಿಟಿಡಿ ಈ ನಿರ್ಧಾರಕ್ಕೆ ಮುಂದಾಗಿದ್ದು, ವಿಶೇಷ ಆ್ಯಪ್​​ ಅಭಿವೃದ್ಧಿಪಡಿಸಲು ಇದೀಗ ರಿಲಯನ್ಸ್​​​ ಜಿಯೋ ಜೊತೆ ಒಪ್ಪಂದ ಮಾಡಿಕೊಂಡಿದೆ.

ಇದಕ್ಕೆ ಸಂಬಂಧಿಸಿದಂತೆ ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ, ಇಒ ಜವಾಹರ್​ ರೆಡ್ಡಿ, ಹೆಚ್ಚುವರಿ ಇಒ ಧರ್ಮರೆಡ್ಡಿ ಮತ್ತು ಟಿಟಿಡಿ ಐಟಿ ಇಲಾಖೆ ಅಧಿಕಾರಿಗಳು ಇಂದು ಜಿಯೋ ಪ್ರತಿನಿಧಿಗಳನ್ನ ಭೇಟಿ ಮಾಡಿ, ಮಾತುಕತೆ ನಡೆಸಿದರು.

ಇದನ್ನೂ ಓದಿರಿ: ಮಾರಾಟವಾಗ್ತಿವೆ ನಕಲಿ ಟಿಕೆಟ್​​.. ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಬರುವ ಮುನ್ನ ಎಚ್ಚರ!

ಕಳೆದ ಕೆಲ ದಿನಗಳಿಂದ ಆನ್​​ಲೈನ್​​ನಲ್ಲಿ ಟಿಕೆಟ್ ಲಭ್ಯವಾಗುತ್ತಿದ್ದು, ಕೆಲವರು ತೊಂದರೆ ಅನುಭವಿಸುತ್ತಿದ್ದರೆ, ಇನ್ನು ಹಲವರು ನಕಲಿ ಟಿಕೆಟ್​ ಬುಕ್​​ ಮಾಡಿ ಮೋಸ ಹೋಗಿದ್ದಾರೆ. ಈ ಸಮಸ್ಯೆ ಬಗೆಹರಿಸಲು ಜಿಯೋ ಜೊತೆ ಒಪ್ಪಂದ ಮಾಡಿಕೊಂಡಿದೆ. ವಿಶೇಷವಾದ ಆ್ಯಪ್​​ ವಿನ್ಯಾಸ ಮಾಡಲು ಜಿಯೋ ಒಪ್ಪಿಕೊಂಡಿದ್ದು, ಮುಂದಿನ ಕೆಲ ತಿಂಗಳಲ್ಲಿ ಆ್ಯಪ್​​​ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.