ETV Bharat / bharat

ವಿಶ್ವಾಸಾರ್ಹ ಸಹಾಯ ಹದಿಹರೆಯದವರಿಗೆ ಖಿನ್ನತೆಯಿಂದ ಹೊರಬರಲು ಸಹಕಾರಿ - ಖಿನ್ನತೆಯಿಂದ ಹೊರಬರುವ ವಿಧಾನಗಳು

ಹದಿಹರೆಯದವರು ಆನ್‌ಲೈನ್​​ನಲ್ಲಿ ದೊರೆಯುವ ವಿಷಯಕ್ಕಿಂತ ಸಾಂಪ್ರದಾಯಿಕ ಮಾಧ್ಯಮಗಳಾದ ಟಿವಿ, ರೇಡಿಯೋ ಮತ್ತು ಪತ್ರಿಕೆಗಳಿಂದ ಲಭ್ಯವಾಗುವುದನ್ನು ಹೆಚ್ಚು ನಂಬಿದ್ದಾರೆಂದು ವರದಿ ಹೇಳಿದ್ದರೂ ಸಹ, ಸಾಮಾಜಿಕ ಮಾಧ್ಯಮ ಅಥವಾ ವೆಬ್‌ಸೈಟ್‌ಗಳಲ್ಲಿ ಸಿಗುವ ವಿಷಯ ಮಾತ್ರ ಹರೆಯದವರ ವರ್ತನೆಗಳಲ್ಲಿ ನಿಜವಾದ ಬದಲಾವಣೆಗಳಿಗೆ ಕಾರಣವಾಗಿದೆ.

depression in teens
ಖಿನ್ನತೆಯಿಂದ ಹೊರಬರಲು ಸಹಕಾರಿ
author img

By

Published : Mar 6, 2021, 1:05 PM IST

ವಿಶ್ವಾಸಾರ್ಹ ಮೂಲಗಳ ಮೂಲಕ ಆರೋಗ್ಯದ ಕಾಳಜಿ ಬಗ್ಗೆ ಕಲಿಯುವುದು ಹದಿಹರೆಯದವರು ತಮ್ಮನ್ನು ತಾವು ಚೆನ್ನಾಗಿ ನೋಡಿಕೊಳ್ಳಲು ಸಹಾಯ ಮಾಡುತ್ತದೆ, ಇದು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಕಾರಣವಾಗುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.

ಹದಿಹರೆಯದವರು ಆನ್‌ಲೈನ್​​ನಲ್ಲಿ ದೊರೆಯುವ ವಿಷಯಕ್ಕಿಂತ ಸಾಂಪ್ರದಾಯಿಕ ಮಾಧ್ಯಮಗಳಾದ ಟಿವಿ, ರೇಡಿಯೋ ಮತ್ತು ಪತ್ರಿಕೆಗಳಿಂದ ಲಭ್ಯವಾಗುವುದನ್ನು ಹೆಚ್ಚು ನಂಬಿದ್ದಾರೆ ಎಂದು ವರದಿ ಹೇಳಿದೆ. ಆದರೂ ಸಹ, ಸಾಮಾಜಿಕ ಮಾಧ್ಯಮ ಅಥವಾ ವೆಬ್‌ಸೈಟ್‌ಗಳಲ್ಲಿ ಸಿಗುವ ವಿಷಯ ಮಾತ್ರ ಹರೆಯದವರ ವರ್ತನೆಗಳಲ್ಲಿ ನಿಜವಾದ ಬದಲಾವಣೆಗಳಿಗೆ ಕಾರಣವಾಗಿದೆ. "ಈ ಅಧ್ಯಯನಕ್ಕೆ ನನ್ನ ವಿದ್ಯಾರ್ಥಿಗಳೆ ಸ್ಫೂರ್ತಿ, ಅವರಲ್ಲಿ ಅನೇಕರು ನನ್ನ ಬಳಿಗೆ ಬಂದ ನಂತರ ಈ ಕುರಿತು ಒತ್ತಿಹೇಳಿದ್ದಾರೆ" ಎಂದು ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕ ಬು ಜೋಂಗ್ ಹೇಳಿದ್ದಾರೆ.

ಈ ಕುರಿತ ಅಧ್ಯಯನಕ್ಕಾಗಿ ಮಕ್ಕಳ ಆರೋಗ್ಯ ಮತ್ತು ಕಲ್ಯಾಣ ಕುರಿತು ಪ್ರಕಟವಾದ ಜರ್ನಲ್​ ಚೈಲ್ಡ್​​, ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 310 ಹದಿಹರೆಯದವರನ್ನು ನೇಮಕ ಮಾಡಿತ್ತು. ಸೆಮಿನಾರ್‌ಗಳು, ತರಗತಿಗಳು, ಕರಪತ್ರಗಳು ಮತ್ತು ಇತರ ಮಾಧ್ಯಮಗಳ ಮೂಲಕ ಆರೋಗ್ಯ ಮಾಹಿತಿ ತಿಳಿಯುವವರು, ಈ ಮೂಲಕ ಅವರ ಖಿನ್ನತೆಯ ಲಕ್ಷಣಗಳು ಮತ್ತು ಆರೋಗ್ಯ ಮಾಹಿತಿ ಪಡೆಯುವುದರಿಂದ ಅವರ ನಡವಳಿಕೆಯ ಬದಲಾವಣೆಗಳಿಗೆ ಕಾರಣವಾಗುತ್ತದೆಯೇ ಎಂಬ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ,

ಆ ಮಾಹಿತಿಯ ಗುಣಮಟ್ಟ ,ಮೂಲ ಮತ್ತು ಮಾಹಿತಿ ವಿಶ್ವಾಸಾರ್ಹವಾಗಿದೆಯೆ ಎಂದು ಅವರು ಇತ್ತೀಚೆಗೆ ಕಂಡುಕೊಂಡಿದ್ದಾರೆ. ಉದಾಹರಣೆಗೆ ಈ ಮಾಹಿತಿಯು ರೋಗವನ್ನು ತಡೆಗಟ್ಟಲು ಸಹಾಯ ಮಾಡಿದೆ ಎಂದು ಅವರು ಭಾವಿಸಿದ್ದಾರೆಯೇ ಮತ್ತು ಆರೋಗ್ಯ ಮಾಹಿತಿಯನ್ನು ಸ್ನೇಹಿತರೊಂದಿಗೆ ಚರ್ಚಿಸಲು ಮತ್ತು ಹಂಚಿಕೊಳ್ಳಲು ಅವರ ಸಾಧ್ಯತೆಯನ್ನು ಹೆಚ್ಚಿಸಿದಿಯೇ ಎಂಬುದರ ಕುರಿತು ಮಾತನಾಡಿದ್ದಾರೆ.

ಹೆಚ್ಚಿನ ವಿದ್ಯಾರ್ಥಿಗಳು ಶಾಲೆಯಲ್ಲಿದ್ದ ಕಾರಣ ಮತ್ತು ಅವರ ಶ್ರೇಣಿಗಳು ಉತ್ತಮವಾಗಿರುವುದರಿಂದ ಅವರು ಯಶಸ್ಸು ಗಳಿಸುವ ನಿಟ್ಟಿನಲ್ಲಿ ಹೆಚ್ಚಿನ ಒತ್ತಡವನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಸಂಶೋಧಕರು ಹೇಳಿದ್ದಾರೆ. ಹೆಚ್ಚಾಗಿ ಈ ಸಂಶೋಧನೆಗೆ ಒಳಪಟ್ಟವರು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಾರೆ, ಈ ಸೋಶಿಯಲ್​ ಫ್ಲಾಟ್​ಫಾರ್ಮ್​ಗಳು ತಮ್ಮ ಆರೋಗ್ಯ ಹಾಗೂ ನಡವಳಿಕೆಗಳನ್ನು ಬದಲಾಯಿಸುವ ಸಾಧ್ಯತೆಯಿದೆ, ಇದು ಕಡಿಮೆ ಖಿನ್ನತೆಗೆ ಕಾರಣವಾಗುತ್ತದೆ ಎನ್ನುತ್ತಾರೆ.

ಒಟ್ಟಾರೆಯಾಗಿ ಹದಿಹರೆಯದವರಲ್ಲಿ ಖಿನ್ನತೆಯನ್ನು ತಗ್ಗಿಸಲು ಆರೋಗ್ಯ ಮಾಹಿತಿಯನ್ನು ಕಾರ್ಯತಂತ್ರವಾಗಿ ಬಳಸುವ ಸಾಮರ್ಥ್ಯವಿದೆ ಎಂದು ಈ ಅಧ್ಯಯನದ ಫಲಿತಾಂಶಗಳು ಸೂಚಿಸುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.