ETV Bharat / bharat

ಮುಂಬೈ-ಗೋವಾ ಹೆದ್ದಾರಿಯಲ್ಲಿ ಟ್ರಕ್‌-ವ್ಯಾನ್‌ ಅಪಘಾತ; ಮಗು ಸೇರಿ 9 ಮಂದಿ ಸಾವು - ETv Bharat kannada news

ಇತ್ತೀಚೆಗೆ ಶಿರಡಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದ ಕಹಿನೆನಪು ಮಾಸುವ ಮುನ್ನವೇ ಇಂದು ರಾಯಗಡ ಜಿಲ್ಲೆಯಲ್ಲಿ ಅಪಘಾತ ನಡೆದು ಸಾಕಷ್ಟು ಸಾವು-ನೋವು ಉಂಟಾಗಿದೆ.

Truck and car collided
ಟ್ರಕ್​ ಹಾಗೂ ಕಾರು ಡಿಕ್ಕಿ
author img

By

Published : Jan 19, 2023, 9:02 AM IST

Updated : Jan 19, 2023, 11:01 AM IST

ರಾಯಗಡದಲ್ಲಿ ಭೀಕರ ರಸ್ತೆ ಅಪಘಾತ: ಘಟನಾ ಸ್ಥಳದ ದೃಶ್ಯ

ರಾಯಗಡ (ಮಹರಾಷ್ಟ್ರ): ಗೋವಾ- ಮುಂಬೈ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ವ್ಯಾನ್‌ ಮತ್ತು ಟ್ರಕ್‌ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿ 9 ಜನರು ಮೃತಪಟ್ಟಿದ್ದಾರೆ. ಮೃತರಲ್ಲಿ 5 ಜನ ಪುರುಷರು ಮತ್ತು ಮೂವರು ಮಹಿಳೆಯರು ಹಾಗು ಒಂದು ಮಗು ಸೇರಿದೆ. ಒಂದು ಮಗು ಗಾಯಗೊಂಡಿದೆ. ರಾಯಗಡ ಜಿಲ್ಲೆ ರೆಪೊಲಿ ಎಂಬಲ್ಲಿ ದುರಂತ ಘಟಿಸಿದೆ.

ಈ ಘಟನೆ ಬೆಳಗ್ಗೆ ಅಂದಾಜು 4.45 ಗಂಟೆಗೆ ಸಂಭವಿಸಿದೆ. ಘಟನಾ ಸ್ಥಳವಾದ ರೆಪೊಲಿ ಗ್ರಾಮ ಮುಂಬೈಯಿಂದ ಸುಮಾರು 130 ಕಿಲೋ ಮೀಟರ್‌ ದೂರದಲ್ಲಿದೆ. ದುರಂತದಲ್ಲಿ ಮೃತಪಟ್ಟವರನ್ನು ರತ್ನಗಿರಿ ಜಿಲ್ಲೆಯ ನಿವಾಸಿಗಳೆಂದು ಗುರುತಿಸಲಾಗಿದೆ. ಎಲ್ಲರೂ ಸಂಬಂಧಿಕರೆಂದು ಎಸ್ಪಿ ಸೋಮನಾಥ್ ಗರ್ಗೆ ತಿಳಿಸಿದರು.

ಗಾಯಗೊಂಡ ನಾಲ್ಕು ವರ್ಷದ ಮಗುವನ್ನು ಮಂಗಾಂವ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಅಸುನೀಗಿದ ಜನರ ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಘಟನೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಅವರು ಮಾಹಿತಿ ನೀಡಿದರು.

ಇತ್ತೀಚೆಗೆ ಶಿರಡಿ ಯಾತ್ರಿಕರಿದ್ದ ಬಸ್‌ವೊಂದು ಅಪಘಾತಕ್ಕೀಡಾಗಿದ್ದು ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅವಘಡ ನಡೆದಿದೆ. ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ಘಟನೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

van was hit by a truck and injured
ಅಪಘಾತದಲ್ಲಿ ಜಖಂಗೊಂಡಿರುವ ವ್ಯಾನ್​

ಇತ್ತೀಚಿಗೆ ನಡೆದ ಭೀಕರ ರಸ್ತೆ ಅಪಘಾತ: ಐದು ದಿನದ ಹಿಂದೆ ಅಂದರೆ ಜನವರಿ 14ರಂದು ವಿಶ್ವ ವಿಖ್ಯಾತ ಧಾರ್ಮಿಕ ಕ್ಷೇತ್ರ ಶಿರಡಿ ಸಮೀಪ ಭೀಕರ ರಸ್ತೆ ಅಪಘಾತ ನಡೆದಿತ್ತು. ನಾಸಿಕ್​ ಹೆದ್ದಾರಿಯ ಪಥರೆ ಬಳಿಯ ಇಶಾನೇಶ್ವರ ದೇವಸ್ಥಾನದ ಕಮಾನು ಬಳಿ ಮುಂಜಾವು ಶಿರಡಿ ಯಾತ್ರಿಕರಿದ್ದ ಖಾಸಗಿ ಬಸ್ ​ಮತ್ತು ಟ್ರಕ್​ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು. ಈ ಘಟನೆಯಲ್ಲಿ ಬಸ್​ನಲ್ಲಿದವರ ಪೈಕಿ ಸುಮಾರು 10 ಮಂದಿ ದಾರುಣ ಸಾವು ಕಂಡಿದ್ದರು. ಹಲವರು ಗಾಯಗೊಂಡಿದ್ದರು. ದುರಂತದಲ್ಲಿ ಏಳು ಮಂದಿ ಮಹಿಳೆಯರು, ಇಬ್ಬರು ಮಕ್ಕಳು, ಓರ್ವ ಪುರುಷ ಸೇರಿ ಹತ್ತು ಜನರು ಮೃತಪಟ್ಟಿದ್ದರು ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದರು.

ಮುಂಬೈನಿಂದ ಶಿರಡಿಗೆ ಬರುತ್ತಿದ್ದ ಖಾಸಗಿ ಬಸ್​ ಮತ್ತು ಶಿರಡಿಬಾಜು ಕಡೆಯಿಂದ ಹೋಗುತ್ತಿದ ಸರಕು ಸಾಗಣೆ ಟ್ರಕ್​ ನಡುವೆ ಆಪಘಾತ ಉಂಟಾಗಿತ್ತು. ಟ್ರಕ್​ ಡಿಕ್ಕಿ ಹೊಡೆದ ರಭಸಕ್ಕೆ ಬಸ್​ ನೆಲಕ್ಕುರಳಿದೆ. ಟ್ರಕ್​ನ ಮುಂಭಾಗ ಸಂಪೂರ್ಣ ಜಖಂಗೊಂಡಿತ್ತು. ಅಪಘಾತವಾದ ಬಸ್​ನಲ್ಲಿ ಅಂಬರನಾಥ್​ ಥಾಣೆಯಿಂದ ಸುಮಾರು 50 ಮಂದಿ ಪ್ರಯಾಣಿಕರು ಶಿರಡಿ ಸಾಯಿಬಾಬ ದರ್ಶನಕ್ಕೆಂದು ಹೊರಟಿದ್ದರು. ಆದರೆ ವಿಧಿಯಾಟ ಅವರ ಬದುಕು ಕಸಿದುಕೊಂಡಿದೆ.

ಅಪಘಾತದ ಸುದ್ದಿ ತಿಳಿಯುತ್ತಿದಂತೆ ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಮತ್ತು ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಅಪಘಾತಗೀಡಾಗಿದ್ದವರ ರಕ್ಷಣಾ ಕಾರ್ಯ ಕೈಗೊಂಡಿದ್ದರು. ಮೃತದೇಹಗಳನ್ನು ಬಸ್​ನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು. ಗಾಯಾಳುಗಳನ್ನು ಸಿನ್ನಾರ್ ಗ್ರಾಮಾಂತರ ಆಸ್ಪತ್ರೆ ಮತ್ತು ಯಶವಂತ್​ ಎಂಬ ಮತ್ತೊಂದು ಆಸ್ಪತ್ರೆಗೆ ಸೇರಿಸಲಾಗಿತ್ತು.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಯಾತ್ರಿಕರ ಬಸ್​-ಟ್ರಕ್ ಭೀಕರ​ ಅಪಘಾತ: 10ಕ್ಕೂ ಹೆಚ್ಚು ಮಂದಿ ಭಕ್ತರು ಸಾವು!

Last Updated : Jan 19, 2023, 11:01 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.