ETV Bharat / bharat

ಟಿಆರ್‌ಎಸ್ ಪಕ್ಷದ 12 ಶಾಸಕರು ಕಮಲ ಮುಡಿಯಲು ಸಿದ್ಧ: ತೆಲಂಗಾಣ ಬಿಜೆಪಿ ಅಧ್ಯಕ್ಷ - ಶಾಸಕರು ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ

ಟಿಆರ್‌ಎಸ್ ಪಕ್ಷದ ಶಾಸಕರು ತಮ್ಮ ಸರ್ಕಾರದಲ್ಲಿ ಭವಿಷ್ಯವಿಲ್ಲ ಎಂದು ಭಾವಿಸಿ ರಾಜೀನಾಮೆ ನೀಡಲು ಸಿದ್ಧತೆ ನಡೆಸಿದ್ದಾರೆ ಎಂದು ತೆಲಂಗಾಣದ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ತಿಳಿಸಿದ್ದಾರೆ.

12 TRS MLAs ready to join BJP, claims Telangana BJP chief
ಟಿಆರ್‌ಎಸ್ ಪಕ್ಷದ 12 ಶಾಸಕರು ಕಮಲ ಮುಡಿಯಲು ಸಿದ್ಧ: ತೆಲಂಗಾಣದ ಬಿಜೆಪಿ ಅಧ್ಯಕ್ಷ
author img

By

Published : Aug 4, 2022, 9:32 PM IST

ಹೈದರಾಬಾದ್ (ತೆಲಂಗಾಣ): ತೆಲಂಗಾಣದ ಆಡಳಿತಾರೂಢ ಟಿಆರ್‌ಎಸ್ ಪಕ್ಷದ 12 ಶಾಸಕರು ಬಿಜೆಪಿ ಸೇರಲು ಸಜ್ಜಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಹೇಳಿದ್ದಾರೆ. ಅಲ್ಲದೇ, ಸದ್ಯದಲ್ಲೇ ತೆಲಂಗಾಣದಲ್ಲಿ ಸರಣಿ ಉಪಚುನಾವಣೆ ನಡೆಯಲಿದೆ ಎಂದೂ ಅವರು ಭವಿಷ್ಯ ನುಡಿದಿದ್ದಾರೆ.

ಇಲ್ಲಿನ ಭೋಂಗೀರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಟಿಆರ್‌ಎಸ್ ಶಾಸಕರು ತಮ್ಮ ಸರ್ಕಾರದಲ್ಲಿ ಭವಿಷ್ಯವಿಲ್ಲ ಎಂದು ಭಾವಿಸಿ ಆಡಳಿತ ಪಕ್ಷಕ್ಕೆ ರಾಜೀನಾಮೆ ನೀಡಲು ಉದ್ದೇಶಿಸಿದ್ದಾರೆ ಎಂದರು.

ಇದನ್ನೂ ಓದಿ: ಬಿಜೆಪಿಗೆ ಹೋಗ್ತಾರಾ ಕಾಂಗ್ರೆಸ್​ ಶಾಸಕ?: ಕೋಮಟಿ ರಾಜಗೋಪಾಲ್ ರೆಡ್ಡಿ ಮುಂದಿನ ನಡೆಯೇನು ?

ಅಲ್ಲದೇ, ಸರ್ಕಾರದ ವಿರುದ್ಧ ಸಾಕಷ್ಟು ಜನವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಟಿಆರ್​ಎಸ್ ಶಾಸಕರು ಪಕ್ಷವನ್ನು ತೊರೆಯಲು ತೀರ್ಮಾನಿಸಿದ್ದಾರೆ ಎಂದು ಬಂಡಿ ಸಂಜಯ್ ಕುಮಾರ್ ಹೇಳಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಕೋಮಟಿ ರಾಜಗೋಪಾಲ್ ರೆಡ್ಡಿ ರಾಜೀನಾಮೆ ನೀಡಿರುವ ಬೆನ್ನಲ್ಲೇ ಬಿಜೆಪಿ ನಾಯಕ ಈ ಹೇಳಿಕೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ರಾಜಗೋಪಾಲ್ ರೆಡ್ಡಿ ಕಾಂಗ್ರೆಸ್​​ ತೊರೆದಿರುವುದು ಮಾತ್ರವಲ್ಲದೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಇದೀಗ ಅವರು ಬಿಜೆಪಿಗೆ ಸೇರ್ಪಡೆಗೊಂಡು ಮರು ಆಯ್ಕೆಯಾಗುವ ಸುಳಿವು ಕೊಟ್ಟಿದ್ದಾರೆ.

ಇದನ್ನೂ ಓದಿ: ರಾಹುಲ್, ಸೋನಿಯಾ ಬಳಿಕ ಖರ್ಗೆಗೆ ಇಡಿ ಡ್ರಿಲ್: 4.30 ಗಂಟೆ ವಿಚಾರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.