ಅಗರ್ತಲಾ(ತ್ರಿಪುರಾ): ಈಶಾನ್ಯ ರಾಜ್ಯಗಳ ಖ್ಯಾತ ಆಧ್ಯಾತ್ಮಿಕ ನಾಯಕಿ ಪಗ್ಲಿ ಮಾಶಿ ತಮ್ಮ ಆಶ್ರಮದಲ್ಲಿ ಕೊನೆಯುಸಿರೆಳೆದಿದ್ದಾರೆಂದು ವರದಿಯಾಗಿದೆ. ಸೆಪಹಿಜಲ ಜಿಲ್ಲೆಯ ಮೇಲಗಢ್ದಲ್ಲಿರುವ ಅವರ ಆಶ್ರಮದ ಮುಂದೆ ಸಾವಿರಾರು ಭಕ್ತರು ಜಮಾವಣೆಯಾಗಿದ್ದಾರೆ.
ವೈದ್ಯರು ಬುಧವಾರ ಮಧ್ಯಾಹ್ನ 3 ಗಂಟೆಗೆ ಪಗ್ಲಿ ಮಾಶಿ ಮೃತಪಟ್ಟಿದ್ದಾರೆಂದು ಘೋಷಿಸಿದ್ದಾರೆ. ನೂರು ವರ್ಷಕ್ಕೂ ಹೆಚ್ಚು ಕಾಲ ಬದುಕಿರುವ ಪಗ್ಲಿ ಮಾಶಿ ವಯೋಸಹಜ ಕಾಯಿಲೆಗಳಿಂದಲೂ ಬಳಲುತ್ತಿದ್ದರು.
ಇದನ್ನೂ ಓದಿ: ಕುರಾನ್ನಲ್ಲಿ ಬದಲಾವಣೆ ಬಯಸಿದ್ದ ವಾಸೀಂ ರಿಜ್ವಿಗೆ ಪಾಕಿಸ್ತಾನದಿಂದ ಬೆದರಿಕೆ ಕರೆ
ಪಗ್ಲಿ ಮಾಶಿಯ ಅಂತ್ಯಸಂಸ್ಕಾರ ಇಂದು ನೆರವೇರಿಸಲಾಗಿದ್ದು, ಭಾರತ ಮಾತ್ರವಲ್ಲದೇ ಬಾಂಗ್ಲಾದೇಶದಲ್ಲೂ ಲಕ್ಷಾಂತರ ಅನುಯಾಯಿಗಳನ್ನು ಪಗ್ಲಿ ಮಾಶಿ ಹೊಂದಿದ್ದರು. ಆಶ್ರಮದ ಮೂಲಗಳ ಪ್ರಕಾರ ಕಳೆದ ಮೂರು ದಿನಗಳಿಂದ ಆಕೆಯ ಆರೋಗ್ಯ ಸರಿಯಿರಲಿಲ್ಲ. ಆಕೆಯ ಮುಖದಲ್ಲಿ ಆಗಿದ್ದ ಗಾಯವೂ ಆಗಿತ್ತು.
ಇದನ್ನೂ ಓದಿ: ಮುಂದೂಡಿಕೆಯಾಗಿದ್ದ ಪರೀಕ್ಷೆಗಳಿಗೆ ದಿನಾಂಕ ನಿಗದಿ ಮಾಡಿದ ಕೆಪಿಎಸ್‌ಸಿ
ಪಗ್ಲಿ ಮಾಶಿ ನಿಧನಕ್ಕೆ ತ್ರಿಪುರಾ ಸಿಎಂ ಬಿಪ್ಲಬ್ ಕುಮಾರ್ ದೇಬ್ ಸಂತಾಪ ವ್ಯಕ್ತಪಡಿಸಿದ್ದಾರೆ.