ETV Bharat / bharat

ನಾಗಾಲ್ಯಾಂಡ್‌, ತ್ರಿಪುರಾ ಬಿಜೆಪಿ ತೆಕ್ಕೆಗೆ; ಮೇಘಾಲಯ ಅತಂತ್ರ ಸಾಧ್ಯತೆ

ಮೂರು ಈಶಾನ್ಯ ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು 5 ರಾಜ್ಯಗಳ ಕೆಲ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದೆ.

ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ ಚುನಾವಣೆ
ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ ಚುನಾವಣೆ
author img

By

Published : Mar 2, 2023, 9:19 AM IST

Updated : Mar 2, 2023, 12:17 PM IST

3 states live results" class="align-text-top noRightClick twitterSection" data="
3 states live results">
3 states live results

3 states live results" class="align-text-top noRightClick twitterSection" data="
3 states live results">
3 states live results

ನವದೆಹಲಿ: ಮೂರು ಈಶಾನ್ಯ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಪಡೆಯಲಿದೆ. ಇತ್ತೀಚೆಗಿನ ಮಾಹಿತಿಯಂತೆ ತ್ರಿಪುರಾದಲ್ಲಿ 32, ನಾಗಾಲ್ಯಾಂಡ್​ನಲ್ಲಿ 36 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದು, ಮೇಘಾಲಯದಲ್ಲಿ ಮುಖ್ಯಮಂತ್ರಿ ಕಾನ್ರಾಡ್​ ಸಂಗ್ಮಾ ನೇತೃತ್ವದ ನ್ಯಾಷನಲ್​ ಪೀಪಲ್ಸ್​ ಪಾರ್ಟಿ(ಎನ್​ಪಿಪಿ) 27 ಸ್ಥಾನಗಳಲ್ಲಿ ಮುಂದಿದೆ.

ಮೇಘಾಲಯ ಅತಂತ್ರ?: ತ್ರಿಪುರಾದಲ್ಲಿ ಬಿಜೆಪಿ ಸ್ವಶಕ್ತಿಯ ಮೇಲೆ ಆಡಳಿತಕ್ಕೆ ಬರಲಿದೆ. ನಾಗಾಲ್ಯಾಂಡ್​ನಲ್ಲಿ ಮೈತ್ರಿ ಸರ್ಕಾರದೊಂದಿಗೆ ಅಧಿಕಾರ ಹಿಡಿಯಲಿದೆ. ಮೇಘಾಲಯದಲ್ಲಿ ಮಾತ್ರ ಕಮಲ ಪಾಳಯದ ಆಟ ನಡೆದಿಲ್ಲ. ಇಲ್ಲಿ ಮುಖ್ಯಮಂತ್ರಿ ಕಾನ್ರಾಡ್​ ಸಂಗ್ಮಾ ನೇತೃತ್ವದ ಎನ್​ಪಿಪಿ ಮುಂದಿದ್ದರೂ ಅತಂತ್ರ ವಿಧಾನಸಭೆಯ ಲಕ್ಷಣ ಗೋಚರಿಸುತ್ತಿದೆ.

ತ್ರಿಪುರಾ ವಿಧಾನಸಭೆಗೆ ಫೆಬ್ರವರಿ 16 ರಂದು ಚುನಾವಣೆಗೆ ನಡೆದರೆ, ಮೇಘಾಲಯ ಮತ್ತು ನಾಗಾಲ್ಯಾಂಡ್​ನಲ್ಲಿ ಫೆಬ್ರವರಿ 27 ರಂದು ಮತ ಚಲಾವಣೆ ನಡೆದಿತ್ತು. ಮೂರು ವಿಧಾನಸಭೆಗಳ ತಲಾ 60 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಇದು ರಾಜಕೀಯ ಪಕ್ಷಗಳಿಗೆ 2024 ರ ಲೋಕಸಭಾ ಚುನಾವಣೆಗೆ ದೊಡ್ಡ ವೇದಿಕೆ ಒದಗಿಸಿಕೊಡಲಿದೆ ಎಂದೇ ವಿಶ್ಲೇಷಿಸಲಾಗಿದೆ.

ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್‌ಗಳಲ್ಲಿ ಕ್ರಮವಾಗಿ ಶೇ.87.76, ಶೇ.85.27 ಮತ್ತು ಶೇ.85.90 ರಷ್ಟು ಉತ್ತಮ ಮತದಾನವಾಗಿದೆ. ಈ ರಾಜ್ಯಗಳಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಟಿಎಂಸಿ ಮಧ್ಯೆ ತುರುಸಿನ ಪೈಪೋಟಿ ಇದೆ.

ಎಕ್ಸಿಟ್ ಪೋಲ್ ಭವಿಷ್ಯವೇನು?: ತ್ರಿಪುರಾದಲ್ಲಿ ಬಿಜೆಪಿ ಸತತ ಎರಡನೇ ಅವಧಿಗೆ ಸರ್ಕಾರವನ್ನು ರಚಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ಪ್ರೇಮ್ ಕುಮಾರ್ ರಿಯಾಂಗ್ ಅವರ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ 55 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಉಳಿದ 5 ಸ್ಥಾನಗಳಲ್ಲಿ ಐಪಿಎಫ್‌ಟಿ ಇದೆ. ನಿರ್ಗಮನ ಸಮೀಕ್ಷೆಗಳ ಪ್ರಕಾರ, ಬಿಜೆಪಿ 29 ರಿಂದ 40 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಕಾಂಗ್ರೆಸ್ ಮತ್ತು ಎಡಪಕ್ಷಗಳು 6 ರಿಂದ 11 ಸ್ಥಾನ, ಟಿಎಂಪಿ 9 ರಿಂದ 17 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಮೇಘಾಲಯ ಅತಂತ್ರ: ಸಮೀಕ್ಷೆಗಳ ಪ್ರಕಾರ, ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎಂದು ಅಂದಾಜಿಸಲಾಗಿದೆ. ಸಿಎಂ ಕಾನ್ರಾಡ್ ಸಂಗ್ಮಾ ಅವರ ಎನ್‌ಪಿಪಿ ಮೇಘಾಲಯದಲ್ಲಿ ಅತಿಹೆಚ್ಚು ಸ್ಥಾನ ಗೆದ್ದರೂ ಬಹುಮತ ಪಡೆಯುವುದಿಲ್ಲ. 18 ರಿಂದ 26 ಸ್ಥಾನ ಸಿಗಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ 6 ರಿಂದ 12 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ. ಇನ್ನೊಂದು ಮಾಧ್ಯಮ ಸಮೀಕ್ಷೆಯ ಪ್ರಕಾರ ಎನ್‌ಪಿಪಿ 18-24, ತೃಣಮೂಲ ಕಾಂಗ್ರೆಸ್ 5-9, ಬಿಜೆಪಿ 4-8, ಕಾಂಗ್ರೆಸ್ 6-12 ಮತ್ತು ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ 8-12 ಸ್ಥಾನಗಳನ್ನು ಪಡೆಯಲಿದೆ ಎಂದು ಊಹಿಸಲಾಗಿದೆ.

ಬಿಜೆಪಿ ತೆಕ್ಕೆಗೆ ನಾಗಾಲ್ಯಾಂಡ್‌: ಬಿಜೆಪಿ-ಎನ್‌ಡಿಪಿಪಿ ಮೈತ್ರಿ ಎರಡನೇ ಅವಧಿಗೆ ಸರ್ಕಾರ ಮುನ್ನಡೆಸಲಿದೆ. 60 ಅಸೆಂಬ್ಲಿ ಸ್ಥಾನಗಳಲ್ಲಿ ಬಿಜೆಪಿ-ಎನ್‌ಡಿಪಿಪಿ ಮೈತ್ರಿಕೂಟ 38-48 ಸ್ಥಾನಗಳನ್ನು ಗೆದ್ದು ಅಧಿಕಾರವನ್ನು ಉಳಿಸಿಕೊಳ್ಳಲಿದೆ. ನಾಗಾ ಪೀಪಲ್ಸ್ ಫ್ರಂಟ್ 3-8 ಸ್ಥಾನ, ಕಾಂಗ್ರೆಸ್ 1-2 ಸ್ಥಾನ, ಇತರರು 5-15 ಸ್ಥಾನಗಳನ್ನು ಗಳಿಸಬಹುದು ಎಂದು ಎಕ್ಸಿಟ್​ ಪೋಲ್​ ಅಂದಾಜಿಸಿದೆ.

ಉಪ ಚುನಾವಣೆಯ ಫಲಿತಾಂಶ: ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯ ಮತಎಣಿಕೆಯ ಜೊತೆಗೆ 5 ರಾಜ್ಯಗಳ 6 ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಮತ ಎಣಿಕೆ ನಡೆಯುತ್ತಿದೆ. ಅರುಣಾಚಲ ಪ್ರದೇಶದ ಲುಮ್ಲಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಜಾರ್ಖಂಡ್​ನ ರಾಮಗಢ ಕ್ಷೇತ್ರದಲ್ಲಿ ಎಜೆಎಸ್​ಯು ಪಕ್ಷ ಮುನ್ನಡೆಯಲ್ಲಿದೆ. ತಮಿಳುನಾಡಿನ ಪೂರ್ವ ಈರೋಡ್​​ನಲ್ಲಿ ಕಾಂಗ್ರೆಸ್​ ಮುಂದಿದೆ. ಮಹಾರಾಷ್ಟ್ರದ 2 ಸ್ಥಾನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ಪೈಪೋಟಿ ನಡೆಸುತ್ತಿವೆ. ಪಶ್ಚಿಮಬಂಗಾಳದ ಚಿಂಚ್‌ವಾಡ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​​ ಮುಂದೆ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ: ಇಂದು ಮೂರು ಈಶಾನ್ಯ ರಾಜ್ಯಗಳ ಫಲಿತಾಂಶ: ಮತ ಎಣಿಕೆಗೆ ಎಲ್ಲ ಸಿದ್ಧತೆ ಪೂರ್ಣ, ಪೊಲೀಸ್​ ಬಿಗಿ ಭದ್ರತೆ

Last Updated : Mar 2, 2023, 12:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.