ಬರೇಲಿ (ಉತ್ತರ ಪ್ರದೇಶ): ತ್ರಿವಳಿ ತಲಾಖ್ ಸಂತ್ರಸ್ತರ ಹೋರಾಟದಲ್ಲಿ ನಿರತರಾಗಿರುವ ಅಲಹಜರತ್ ಕುಟುಂಬದ ಸೊಸೆ ನಿದಾ ಖಾನ್ ಅವರು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಬೆಂಬಲಿಸಿ ಪ್ರಧಾನಿಗೆ ಧನ್ಯವಾದ ಪತ್ರ ಬರೆದಿದ್ದಾರೆ. ತ್ರಿವಳಿ ತಲಾಖ್ ಕಾನೂನು ಜಾರಿಗೊಳಿಸುವ ಮೂಲಕ ಮುಸ್ಲಿಂ ಮಹಿಳೆಯರ ಹಿತಾಸಕ್ತಿಗಳನ್ನು ರಕ್ಷಿಸಲಾಗಿದೆ. ಜೊತೆಗೆ ಏಕರೂಪ ನಾಗರಿಕ ಸಂಹಿತೆಯು ಮುಸ್ಲಿಂ ಮಹಿಳೆಯರ ಹಿತಾಸಕ್ತಿಯನ್ನು ರಕ್ಷಣೆ ಮಾಡುತ್ತದೆ ಎಂದು ನಿದಾ ಖಾನ್ ಹೇಳಿದ್ದಾರೆ.
ಇದನ್ನೂ ಓದಿ: Uniform Civil Code: ಏಕರೂಪ ನಾಗರಿಕ ಸಂಹಿತೆ; ಕಾನೂನು ಆಯೋಗಕ್ಕೆ 15 ದಿನದಲ್ಲಿ 8.5 ಲಕ್ಷ ಸಲಹೆ, ಜನರಿಂದ ಭಾರಿ ಸ್ಪಂದನೆ
ನಿದಾ ಖಾನ್ ಪತ್ರದಲ್ಲಿದ್ದೇನಿದೆ?: ನಿದಾ ಖಾನ್ ಅವರ ತಮ್ಮ ಪತಿಯೊಂದಿಗೆ ತ್ರಿವಳಿ ತಲಾಖ್ ಪ್ರಕರಣದಲ್ಲಿ ಹೋರಾಟ ನಡೆಸುತ್ತಿದ್ದಾರೆ. ನಿದಾ ಖಾನ್ ತ್ರಿವಳಿ ತಲಾಖ್ ಸಂತ್ರಸ್ತರಾಗಿದ್ದು, ಜೊತೆಗೆ ತ್ರಿವಳಿ ತಲಾಖ್ ಸಂತ್ರಸ್ತರಿಗೆ ಸಹಾಯ ಮಾಡುವ ಕೆಲಸ ಮಾಡುತ್ತಿದ್ದಾರೆ. ತ್ರಿವಳಿ ತಲಾಖ್ ಸಂತ್ರಸ್ತೆ ನಿದಾ ಖಾನ್ ಅವರು ಏಕರೂಪ ನಾಗರಿಕ ಸಂಹಿತೆ ಕಾನೂನನ್ನು ಬೆಂಬಲಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈ ಹಿಂದೆ ತ್ರಿವಳಿ ತಲಾಖ್ ಎಂಬ ಕತ್ತಿ ಮುಸ್ಲಿಂ ಮಹಿಳೆಯರ ಮೇಲೆ ತೂಗಾಡಿದೆ. ಕೆಲವೊಮ್ಮೆ ಪತಿ ಅಕ್ರಮವಾಗಿ ಮದುವೆಯಾಗಿದ್ದಾನೆ ಎಂದು ನಿದಾ ಖಾನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: 'ಏಕರೂಪ ನಾಗರಿಕ ಸಂಹಿತೆಗೆ ಆಮ್ ಆದ್ಮಿ ಪಾರ್ಟಿ ಬೆಂಬಲಿಸುತ್ತದೆ, ಆದರೆ..'
ಮದುವೆಯಾದ ನಂತರ ಹೆಂಡತಿಯನ್ನು ಕರೆತಂದು ಮನೆಯಲ್ಲಿಟ್ಟು ಮೊದಲ ಹೆಂಡತಿಯ ಹಕ್ಕನ್ನು ಎರಡನೇ ಹೆಂಡತಿಗೆ ಕೊಡುತ್ತಿದ್ದ. ಅಷ್ಟೇ ಅಲ್ಲ ಎರಡನೇ ಪತ್ನಿ ಬಂದ ನಂತರ ಮೊದಲ ಪತ್ನಿ, ಮಕ್ಕಳನ್ನೂ ಮನೆಯಿಂದ ಹೊರ ಹಾಕಿದ್ದಾರೆ. ಆದರೆ, ಪ್ರಸ್ತುತ ತ್ರಿವಳಿ ತಲಾಖ್ ಕಾನೂನು ಮಾಡುವ ಮೂಲಕ ಮುಸ್ಲಿಂ ಮಹಿಳೆಯರ ಹಿತಾಸಕ್ತಿ ಕಾಪಾಡಲಾಗಿದೆ. ಅದೇ ರೀತಿಯಲ್ಲಿ ನಮ್ಮ ಹಕ್ಕುಗಳನ್ನು ಯುಸಿಸಿ ಕಾನೂನಿನಿಂದ ರಕ್ಷಿಸಲಾಗುತ್ತದೆ. ಇದು ಮುಸ್ಲಿಂ ಮಹಿಳೆಯರ ಪರವಾಗಲಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ನಿದಾ ಖಾನ್: ತ್ರಿವಳಿ ತಲಾಖ್ ಕಾನೂನು ಜಾರಿಗೆ ಬಂದ ನಂತರ ಮಹಿಳೆಯರು ಹೇಗೆ ಸುರಕ್ಷಿತ ಭಾವನೆ ಹೊಂದಿದ್ದಾರೋ ಅದೇ ರೀತಿ ಯುಸಿಸಿ ಕಾನೂನು ಜಾರಿಯಾದ ನಂತರ ಮುಸ್ಲಿಂ ಮಹಿಳೆಯರು ಹೆಚ್ಚು ಸುರಕ್ಷಿತವಾಗಿರುತ್ತಾರೆ. ಏಕರೂಪ ನಾಗರಿಕ ಸಂಹಿತೆ ಕಾನೂನು ಜಾರಿಗೊಳಿಸಲು ಮುಂದಾಗಿರುವ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ ನಿದಾ ಖಾನ್ ಅವರು ಮುಸ್ಲಿಂ ಮಹಿಳೆಯರನ್ನು ಬೆಂಬಲಿಸುವ ಮಾತನಾಡಿದ್ದಾರೆ.
ಇದನ್ನೂ ಓದಿ: ವರದಕ್ಷಿಣೆ ಕಿರುಕುಳ: ಪತ್ನಿ ಮೇಲೆ ಹಲ್ಲೆ ಮಾಡಿ ತ್ರಿವಳಿ ತಲಾಖ್ ನೀಡಿದ ಪತಿ..!