ETV Bharat / bharat

6ನೇ ಮದುವೆಯಾದ ಆರೋಪ.. ಮಾಜಿ ಸಚಿವನ ವಿರುದ್ಧ ದೂರು ನೀಡಿದ ಮೂರನೇ ಪತ್ನಿ! - ಉತ್ತರ ಪ್ರದೇಶ ಮಾಜಿ ಸಚಿವ ಚೌಧರಿ ಬಶೀರ್​

ಸಮಾಜವಾದಿ ಪಕ್ಷದ ಮಾಜಿ ಸಚಿವನೊಬ್ಬ ಆರನೇ ಮದುವೆ ಮಾಡಿಕೊಂಡಿದ್ದು, ತನಗೆ ತ್ರಿವಳಿ ತಲಾಖ್​ ನೀಡಿ ಮನೆಯಿಂದ ಹೊರಹಾಕಿದ್ದಾನೆಂದು ಮೂರನೇ ಪತ್ನಿ ದೂರು ದಾಖಲು ಮಾಡಿದ್ದಾರೆ.

agra news
agra news
author img

By

Published : Aug 3, 2021, 4:14 PM IST

ಆಗ್ರಾ(ಉತ್ತರ ಪ್ರದೇಶ): ಸದಾ ಒಂದಿಲ್ಲೊಂದು ವಿವಾದಗಳಿಂದ ಹೆಚ್ಚು ಸುದ್ದಿಯಲ್ಲಿರುವ ಉತ್ತರ ಪ್ರದೇಶದ ಮಾಜಿ ಸಚಿವ ಚೌಧರಿ ಬಶೀರ್​ ಇದೀಗ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಪೊಲೀಸ್ ಠಾಣೆ ಮೆಟ್ಟಿಲೇರಿರುವ ಪತ್ನಿ ನಗ್ಮಾ ಗಂಡನ ವಿರುದ್ಧ ತ್ರಿವಳಿ ತಲಾಖ್​ ಪ್ರಕರಣ ದಾಖಲು ಮಾಡಿದ್ದಾರೆ.

ಮಾಹಿತಿ ಹಂಚಿಕೊಂಡಿರುವ ನಗ್ಮಾ

ಸಮಾಜವಾದಿ ಪಕ್ಷದ ಮಾಜಿ ಸಚಿವ ಚೌಧರಿ ಬಶೀರ್​ ಆರನೇ ಮದುವೆ ಮಾಡಿಕೊಂಡಿದ್ದಾರೆ. ಹೀಗಾಗಿ ತನಗೆ ತಲಾಖ್​ ನೀಡಿ, ಮನೆಯಿಂದ ಹೊರಹಾಕಿದ್ದಾರೆಂದು ಮೂರನೇ ಪತ್ನಿ ನಗ್ಮಾ ಆರೋಪ ಮಾಡಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಮಂಥೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ

uttar pradesh news
ಮಾಜಿ ಸಚಿವನ ವಿರುದ್ಧ ದೂರು ನೀಡಿದ ಮೂರನೇ ಪತ್ನಿ

2012ರಲ್ಲಿ ಮಾಜಿ ಸಚಿವ ತಮ್ಮೊಂದಿಗೆ ಮದುವೆ ಮಾಡಿಕೊಂಡಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಗಂಡನ ಮನೆಯಲ್ಲಿ ನಿತ್ಯ ಕಿರುಕುಳ ನೀಡುತ್ತಿರುವ ಕಾರಣ ಸದ್ಯ ಪ್ರತ್ಯೇಕ ಮನೆಯಲ್ಲಿ ವಾಸ ಮಾಡುತ್ತಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ. ಆರನೇ ಮದುವೆ ಮಾಡಿಕೊಂಡಿರುವ ಗಂಡ, ಇದೀಗ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದು, ಹೊಡೆದು, ಮನೆಯಿಂದ ಹೊರಹಾಕಲಾಗಿದೆ.

ಇದನ್ನೂ ಓದಿರಿ: ದೇಶದ 24 ವಿಶ್ವವಿದ್ಯಾಲಯಗಳು FAKE​... ಯುಪಿಯಲ್ಲಿ ಅತಿ ಹೆಚ್ಚು, ಕರ್ನಾಟಕದಲ್ಲಿ ಎಷ್ಟು?

ಮಾಜಿ ಸಚಿವ ಚೌಧರಿ ಇದೀಗ ಶಾಹಿಸ್ತಾ ಎಂಬ ಹುಡುಗಿ ಜೊತೆ ಮತ್ತೊಂದು ಮದುವೆ ಮಾಡಿಕೊಂಡಿದ್ದು, ಇದಕ್ಕೆ ನಾನು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ತ್ರಿವಳಿ ತಲಾಖ್​ ನೀಡಿ ಮನೆಯಿಂದ ಹೊರಹಾಕಿದ್ದಾರೆ ಎಂದು ತಿಳಿಸಿದ್ದಾಳೆ. ಜತೆಗೆ ಇದರ ಬಗ್ಗೆ ಪೊಲೀಸ್​​ ಠಾಣೆಯಲ್ಲಿ ಯಾವುದೇ ಸರಿಯಾಗಿ ವಿಚಾರಣೆ ನಡೆಯುತ್ತಿಲ್ಲ ಎಂದಿದ್ದಾರೆ.

ನಗ್ಮಾಳ ಕೆಲವೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದ್ದು, ಗಂಡನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. 2013ರಲ್ಲೇ ಚೌಧರಿ ಬಶೀರ್​ ಜೈಲಿಗೆ ಹೋಗಿ ಬಂದಿದ್ದಾರೆ. ಇವರ ಮೇಲೆ ವರದಕ್ಷಿಣೆ ಕಿರುಕುಳ, ಹಲ್ಲೆ ಸೇರಿದಂತೆ ಅನೇಕ ಪ್ರಕರಣ ದಾಖಲಾಗಿವೆ.

ಬಶೀರ್​ 2003ರಲ್ಲಿ ಗಜಾಲಾ ಲಾರಿ ಜೊತೆ 2018ರಲ್ಲಿ ರುಬಿನಾ ಹಾಗೂ 2012ರಲ್ಲಿ ನಗ್ಮಾ ಜೊತೆ ಮದುವೆ ಮಾಡಿಕೊಂಡಿದ್ದು, ಇದರ ಮಧ್ಯೆ ತಮಗೆ ಗೊತ್ತಿಲ್ಲದಂತೆ ಬೇರೆ ಯುವತಿಯರೊಂದಿಗೆ ಮದುವೆ ಮಾಡಿಕೊಂಡಿದ್ದಾಗಿ ನಗ್ಮಾ ದೂರಿದ್ದಾಳೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.