ETV Bharat / bharat

ಭುಜದ ಮೇಲೆ ಗಂಡನ ಸಂಬಂಧಿ ಹೊತ್ತು ನಡೆಯುವ ಶಿಕ್ಷೆ... ದೊಣ್ಣೆ, ಬ್ಯಾಟ್​ನಿಂದ ಹೊಡೆದ ಜನ್ರು! - ಮಧ್ಯಪ್ರದೇಶ ಕ್ರೈಂ ನ್ಯೂಸ್​

ಗಂಡನೊಂದಿಗೆ ವಿಚ್ಛೇದನ ಪಡೆದುಕೊಂಡಿದ್ದ ಮಹಿಳೆಯೋರ್ವಳು ಬೇರೆ ವ್ಯಕ್ತಿ ಜತೆ ಸಂಪರ್ಕವಿಟ್ಟುಕೊಂಡಿದ್ದಕ್ಕಾಗಿ ಗಂಡನ ಮನೆಯವರು ಆಕೆಗೆ ಚಿತ್ರ ಹಿಂಸೆ ನೀಡಿದ್ದಾರೆ.

tribal woman
tribal woman
author img

By

Published : Feb 15, 2021, 9:40 PM IST

Updated : Feb 15, 2021, 10:47 PM IST

ಭೋಪಾಲ್​: ಮಧ್ಯಪ್ರದೇಶದ ಗುಣ್ ಜಿಲ್ಲೆಯಲ್ಲಿ ನಡೆದ ಘಟನೆವೊಂದು ಮಾನವ ಸಮಾಜ ತಲೆತಗ್ಗಿಸುವಂತೆ ಮಾಡಿದ್ದು, ಬುಡಕಟ್ಟು ಮಹಿಳೆಯೋರ್ವಳು ತನ್ನ ಗಂಡ ಕುಟುಂಬದ ಸದಸ್ಯನೋರ್ವನನ್ನ ಹೆಗಲ ಮೇಳೆ ಹೊತ್ತು ಮೂರು ಕಿಲೋ ಮೀಟರ್​​ ನಡೆದುಕೊಂಡು ಹೋಗಿದ್ದಾಳೆ.

ಭುಜದ ಮೇಲೆ ಗಂಡನ ಸಂಬಂಧಿ ಹೊತ್ತು ನಡೆಯುವ ಶಿಕ್ಷೆ

ಇದರ ವಿಡಿಯೋ ಸದ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಎಲ್ಲೆಡೆಯಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಯಾವ ಕಾರಣಕ್ಕಾಗಿ ಶಿಕ್ಷೆ!?

ಮಹಿಳೆ ನೀಡಿರುವ ದೂರಿನ ಪ್ರಕಾರ, ಈಗಾಗಲೇ ಗಂಡನಿಂದ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದುಕೊಂಡಿರುವ ಆಕೆ, ಬೇರೆ ವ್ಯಕ್ತಿ ಜತೆ ಸಂಬಂಧವಿಟ್ಟುಕೊಂಡಿದ್ದಾಳೆ. ಆದರೆ ಕಳೆದ ವಾರ ಆಕೆಯ ವಿಚ್ಛೇದಿತ ಗಂಡನ ಕುಟುಂಬದವರು ಹಾಗೂ ಗ್ರಾಮಸ್ಥರು ಮನೆಗೆ ನುಗ್ಗಿ ಮಹಿಳೆಯ ಅಪಹರಣ ಮಾಡಿ ಈ ಕ್ರೂರ ಶಿಕ್ಷೆ ನೀಡಿದ್ದಾರೆ. ಗಂಡನ ಕುಟುಂಬದ ವ್ಯಕ್ತಿಯೋರ್ವನನ್ನ ಹೆಗಲ ಮೇಲೆ ಹೊತ್ತುಕೊಂಡು ಮೂರು ಕಿಲೋ ಮೀಟರ್ ನಡೆದುಕೊಂಡು ಹೋಗುತ್ತಿರುವ ಮಹಿಳೆಗೆ ಹಿಂದಿನಿಂದ ಕೆಲವರು ದೊಣ್ಣೆ ಹಾಗೂ ಬ್ಯಾಟ್​​ನಿಂದ ಹೊಡೆದಿದ್ದಾರೆ.

tribal woman
ಮಧ್ಯಪ್ರದೇಶದಲ್ಲಿ ಮಹಿಳೆಗೆ ಕ್ರೂರ ಶಿಕ್ಷೆ

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಇಲ್ಲಿಯವರೆಗೆ ನಾಲ್ವರು ಆರೋಪಿಗಳ ಬಂಧನ ಮಾಡಲಾಗಿದೆ. ಮಧ್ಯಪ್ರದೇಶದಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ, ಈ ಹಿಂದೆ ಜುಲೈನಲ್ಲಿ ಬೇರೆ ವ್ಯಕ್ತಿ ಜತೆ ಸಂಬಂಧ ಹೊಂದಿದ್ದ ಮಹಿಳೆಯೋರ್ವಳನ್ನ ಇದೇ ರೀತಿ ಅವಮಾನಿಸಲಾಗಿತ್ತು.

Last Updated : Feb 15, 2021, 10:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.