ಪನ್ನಾ, ಮಧ್ಯಪ್ರದೇಶ: ಪ್ರಪಂಚದಾದ್ಯಂತ ಅತ್ಯಂತ ಆಕರ್ಷಕ, ಗುಣಮಟ್ಟದ ವಜ್ರಗಳು ಸಿಗುವ ಮಧ್ಯಪ್ರದೇಶ ರಾಜ್ಯದ ಪನ್ನಾ ಗಣಿಗಳಲ್ಲಿ ಬುಡಕಟ್ಟು ಸಮುದಾಯದ ಕೂಲಿ ಕಾರ್ಮಿಕನಿಗೆ ಸುಮಾರು 60 ಲಕ್ಷ ರೂಪಾಯಿ ಮೌಲ್ಯದ 13.54 ಕ್ಯಾರೆಟ್ ವಜ್ರ ದೊರಕಿದೆ.
ಕೃಷ್ಣ ಕಲ್ಯಾಣಪುರ ಪಟ್ಟಿ ಬಳಿ ಉತ್ಖನನ ನಡೆಸುತ್ತಿದ್ದ ವೇಳೆ ಮುಲಾಯಂ ಸಿಂಗ್ ಎಂಬಾತನಿಗೆ ವಜ್ರ ದೊರೆತಿದ್ದು, ಮುಲಾಯಂ ಸೇರಿದಂತೆ ಇನ್ನೂ ಆರು ಮಂದಿಗೆ ಸಣ್ಣ ಸಣ್ಣ ವಜ್ರಗಳು ದೊರೆತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದೇ ದಿನದಲ್ಲಿ ಪತ್ತೆಯಾದ 7 ವಜ್ರಗಳು ಪತ್ತೆಯಾದ ಹಿನ್ನೆಲೆಯಲ್ಲಿ ಈ ದಿನವನ್ನು ‘ಡೈಮಂಡ್ ಡೇ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹರಾಜಿನಲ್ಲಿ ಈ ವಜ್ರಗಳ ನಿಖರ ಬೆಲೆ ತಿಳಿಯಲಿದೆ. ವಜ್ರದಿಂದ ಬಂದ ಹಣವನ್ನು ಮಕ್ಕಳಿಗೆ ಶಿಕ್ಷಣ ನೀಡಲು ಮತ್ತು ಕೃಷಿ ಮಾಡಲು ಬಳಸಲಾಗುತ್ತದೆ ಎಂದು ಮುಲಾಯಂ ಹೇಳಿದ್ದಾರೆ.
ಇದನ್ನೂ ಓದಿ: ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಿದ ವ್ಯಕ್ತಿ : 900 ಪುರಾತನ ವಸ್ತುಗಳ ಸಂಗ್ರಹ