ETV Bharat / bharat

ಪ್ರಿಯಕರನಿಗಾಗಿ ಪೊಲೀಸರ ಮೊರೆ ಹೋದ ತೃತೀಯ ಲಿಂಗಿ: ಈ ವಿಚಿತ್ರ ಲವ್​ ಸ್ಟೋರಿ ಕತೆ ಏನು ಗೊತ್ತಾ?

ತೃತೀಯಲಿಂಗಿಯೊಬ್ಬರು ತನ್ನ ಪ್ರಿಯಕರನಿಗಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

transgender-who-went-to-the-police-for-her-lover-in-kaushambi
ಪ್ರಿಯಕರನಿಗಾಗಿ ಪೊಲೀಸರ ಮೊರೆ ಹೋದ ತೃತೀಯಲಿಂಗಿ: ಈ ವಿಚಿತ್ರ ಲವ್​ ಸ್ಟೋರಿ ಕತೆ ಏನು ಗೊತ್ತಾ?
author img

By

Published : Jul 3, 2023, 10:32 PM IST

ಕೌಶಂಬಿ(ಉತ್ತರ ಪ್ರದೇಶ): ತೃತೀಯಲಿಂಗಿಯೊಬ್ಬರು ತನ್ನ ಪ್ರಿಯಕರನಿಗಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿರುವ ಘಟನೆ ಕೌಶಂಬಿ ಜಿಲ್ಲೆಯಲ್ಲಿ ನಡೆದಿದೆ. ತೃತೀಯ ಲಿಂಗಿಗೆ ಯುವಕನೊಬ್ಬನ ಜೊತೆಗೆ ಸ್ನೇಹ ಏರ್ಪಟ್ಟಿತ್ತು. ನಂತರ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ ಪರಸ್ಪರ ಇಚ್ಛೆಯಿಂದ ಮದುವೆಯಾಗಲು ನಿರ್ಧರಿಸಿದ್ದರು. ದೇವಾಲಯದಲ್ಲಿ ಮದುವೆಯಾಗಿ ಕೆಲವು ತಿಂಗಳುಗಳ ಕಾಲ ಇಬ್ಬರೂ ಒಟ್ಟಿಗೆ ಇದ್ದರು. ಆದರೆ ಈ ವಿಷಯ ತಿಳಿದ ಯುವಕನ ಕುಟುಂಬಸ್ಥರು, ಯುವಕನನ್ನು ಅಲ್ಲಿಂದ ಕರೆದ್ಯೊದಿದ್ದಾರೆ. ಸದ್ಯ ತೃತೀಯಲಿಂಗಿ ತನ್ನ ಪ್ರಿಯಕರನಿಗೋಸ್ಕರ ಪೊಲೀಸರ ಮೊರೆ ಹೋಗಿದ್ದಾರೆ.

ಕೌಶಂಬಿ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​ ಮಹೇಶ್ ಚಂದ್ರ ಮಾತನಾಡಿ, ಇಲ್ಲಿನ ಗ್ರಾಮವೊಂದರಲ್ಲಿ ದಂಪತಿಗೆ ಗಂಡು ಮಗು ಜನಿಸಿತ್ತು. ಯುವಕ ದೊಡ್ಡವನಾದಂತೆ ಆತನಲ್ಲಿ ಕಂಡು ಬಂದ ದೈಹಿಕ ಬದಲಾವಣೆಗಳಿಂದ ಕುಟುಂಬಸ್ಥರು ಆತನನ್ನು ಅವಮಾನಿಸುವುದು, ತಾರತಮ್ಯ ಮಾಡುವುದಕ್ಕೆ ಪ್ರಾರಂಭಿಸಿದ್ದರು. ಇದರಿಂದ ಮನನೊಂದ ಯುವಕ ಮನೆಬಿಟ್ಟು ಹೋಗಿ ತೃತೀಯ ಲಿಂಗಿಯಾಗಿ ಬದಲಾಗುತ್ತಾನೆ. ನಂತರ ತೃತೀಯಲಿಂಗಿಗಳೊಂದಿಗೆ ಸೇರಿಕೊಂಡು ಜೀವನ ನಡೆಸುತ್ತಿರುತ್ತಾನೆ. ಈ ವೇಳೆ ತೃತೀಯಲಿಂಗಿಗೆ ಗ್ರಾಮದ ಯುವಕನೊಬ್ಬನ ಪರಿಚಯವಾಗಿ ನಂತರ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎಂದು ಅವರು ಮಾಹಿತಿ ನೀಡಿದರು.

ತೃತೀಯಲಿಂಗಿ ಯುವಕನನ್ನು ಮದುವೆಯಾಗಲು ಎಂಟು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಹೆಣ್ಣಾಗಿ ಬದಲಾಗಿ ಇಬ್ಬರೂ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ನಂತರ ಇಬ್ಬರು ಆರು ತಿಂಗಳು ಒಟ್ಟಿಗೆ ಇದ್ದರು. ಅಷ್ಟರಲ್ಲಿ ಯುವಕನ ಮನೆಯವರಿಗೆ ಈ ವಿಷಯ ತಿಳಿದಿದೆ. ಇದಾದ ಬಳಿಕ ಕುಟುಂಬಸ್ಥರು ಯುವಕನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಯುವಕನ ಜೊತೆ ತೃತೀಯಲಿಂಗಿ ಸಂಪರ್ಕಕ್ಕೆ ಬರದಂತೆ ತಡೆದಿದ್ದಾರೆ.

ಈಗ ಸಂತ್ರಸ್ತೆ ತೃತೀಯಲಿಂಗಿ ಯುವಕರ ಕುಟುಂಬಸ್ಥರು ನಮ್ಮನ್ನು ಭೇಟಿಯಾಗಲು ಬಿಡುತ್ತಿಲ್ಲ ಎಂದು ದೂರು ದಾಖಲಿಸಿದ್ದಾರೆ.ದೂರು ಸ್ವೀಕರಿಸಿದ ಕೌಶಂಬಿ ಠಾಣೆಯ ಪೊಲೀಸರು ಎರಡೂ ಕುಟುಂಬದವರನ್ನು ಕರೆಸಿ ಮಾತನಾಡಲು ಪ್ರಯತ್ನಿಸಿದ್ದಾರೆ. ಆದರೆ ಇದಕ್ಕೆ ಎರಡು ಕುಟುಂಬಗಳು ಯಾವುದೇ ಪ್ರತಿಕ್ರಿಯೆ ನೀಡದಿರುವುದರಿಂದ ಈ ಬಗ್ಗೆ ಹಿರಿಯ ಪೊಲೀಸ್​ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಬಡ ಮುಸ್ಲಿಂ ಜೋಡಿಗೆ ಹಿಂದೂ ದೇವಾಲಯದಲ್ಲಿ ನಿಕಾಹ್: ಕೋಮು ಘರ್ಷಣೆಗಳ ಮಧ್ಯೆ ಇಲ್ಲೊಂದು ಸುದ್ದಿ ಉತ್ತಮ ಸಂದೇಶ ಸಾರುತ್ತದೆ. ಗುಜರಾತ್​ನ ಜುನಾಗಢದ ಹಿಂದೂ ದೇವಾಲಯದಲ್ಲಿ ಮುಸ್ಲಿಂ ಜೋಡಿಯೊಂದು ನಿಕಾಹ್​ ಮಾಡಿಕೊಂಡಿದೆ. ಬಡ ಕುಟುಂಬದ ವಿವಾಹಕ್ಕೆ ಸತ್ಯಂ ಸೇವಾ ಯುವಕ ಮಂಡಳಿ ಪೌರೋಹಿತ್ಯ ವಹಿಸಿದ್ದು, ಧಾರ್ಮಿಕ ಐಕ್ಯತೆಗೆ ಉತ್ತಮ ಉದಾಹರಣೆಯಾಗಿದೆ.

ಆರ್ಥಿಕವಾಗಿ ದುರ್ಬಲವಾಗಿದ್ದ ಕುಟುಂಬ ವಿವಾಹಕ್ಕೆ ಪರದಾಡುತ್ತಿರುವಾಗ ಸತ್ಯಂ ಸೇವಾ ಯುವಕ ಮಂಡಳಿಯನ್ನು ಸಂಪರ್ಕಿಸಿದ್ದಾರೆ. ಉಚಿತ ಮತ್ತು ಸರಳವಾಗಿ ವಿವಾಹ ಮಾಡಿಕೊಡುವ ಪದ್ಧತಿಯನ್ನು ರೂಢಿಸಿಕೊಂಡು ಬಂದಿರುವ ಮಂಡಳಿ ಆ ಕುಟುಂಬಕ್ಕೆ ನೆರವು ನೀಡಲು ಒಪ್ಪಿದ್ದಾರೆ. ಅದರಂತೆ ದೇವಾಲಯದ ಆವರಣದಲ್ಲಿ ಉಭಯ ಕುಟುಂಬಗಳ ಬಂಧುಗಳ ಸಮ್ಮುಖದಲ್ಲಿ ಅವರ ಸಂಪ್ರದಾಯದಂತೆಯೇ ಸರಳವಾಗಿ ವಿವಾಹ ನೆರವೇರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: ವಿದೇಶಿ ಮಹಿಳಾ ಪ್ರವಾಸಿಯೊಂದಿಗೆ ವ್ಯಕ್ತಿಯ ಅನುಚಿತ ವರ್ತನೆ.. ಎಲ್ಲೆಂದರಲ್ಲಿ ಮುಟ್ಟಿದವನ ವಿರುದ್ಧ ಕ್ರಮಕ್ಕೆ ಒತ್ತಾಯ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.