ತಿರುಚ್ಚಿ(ತಮಿಳುನಾಡು): ನಿನ್ನೆ ಜಿಲ್ಲೆಯ ತೆನ್ನೂರಿನ ಸುಬ್ಬಯ್ಯ ಸ್ಮಾರಕ ಮಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಗಿದ್ದು, ಕಾರ್ಯಕ್ರಮಕ್ಕೆ ಟ್ರಾನ್ಸ್‌ಜೆಂಡರ್ ಅವರನ್ನು ಮುಖ್ಯ ಅಥಿತಿಗಳಾಗಿ ಕರೆಸಲಾಗಿತ್ತು.
ದೇಶಾದ್ಯಂತ ನಿನ್ನೆ 72 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಅದರಂತೆ ತೆನ್ನೂರಿನ ಸುಬ್ಬಯ್ಯ ಸ್ಮಾರಕ ಮಧ್ಯಮ ಶಾಲೆಯಲ್ಲಿಯೂ ಗಣರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಾರಂಭಕ್ಕೆ ತೃತೀಯ ಲಿಂಗಿ ಎಂ. ಸ್ನೇಹ ಅವರನ್ನು ಮುಖ್ಯ ಅತಿಥಿಯಾಗಿ ಕರೆಸಲಾಗಿತ್ತು. ಇವರು ನಾಯಕರಿಗೆ ಗೌರ ನಮನ ಸಲ್ಲಿಸಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದರು.
ಈ ವೇಳೆ ಮಾತನಾಡಿದ ಸ್ನೇಹ, ನಾವು ದೃಢವಾದ ನಿಶ್ಚಯವನ್ನು ಹೊಂದಿದ್ದರೆ ಜೀವನದಲ್ಲಿ ಮುಂದುವರೆಯಬಹುದು. ನಮ್ಮಂತಹ ಜನರಿಗೆ ಈ ರೀತಿಯ ಅವಕಾಶ ನೀಡುವುದರಿಂದ ನಾವು ಆತ್ಮವಿಶ್ವಾಸದಿಂದ ಮುಂದಿನ ಹಂತಕ್ಕೆ ಹೋಗಲು ಸಹಾಯ ಆಗುತ್ತದೆ ಎನ್ನುವ ಮೂಲಕ ಕಾರ್ಯಕ್ರಮ ಆಯೋಜಕರಿಗೆ ಧನ್ಯವಾದ ಅರ್ಪಿಸಿದರು.