ಮಥುರಾ (ಉತ್ತರ ಪ್ರದೇಶ): ಖಾಸಗಿ ಕಂಪನಿಯ ತರಬೇತಿ ವಿಮಾನವೊಂದು ತಾಂತ್ರಿಕ ತೊಂದರೆಯಿಂದ ಯಮುನಾ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ತುರ್ತು ಲ್ಯಾಂಡಿಂಗ್ ಆಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ನ 2.30 ರ ಸುಮಾರಿಗೆ ಉತ್ತರ ಪ್ರದೇಶದ ಮಥುರಾದ ಸುರಿರ್‌ನ ಬಳಿ ಈ ಘಟನೆ ನಡೆದಿದೆ. ವಿಮಾನದಲ್ಲಿ ಒಬ್ಬ ಟ್ರೈನಿಂಗ್ ಪೈಲಟ್ ಮತ್ತು ಒಬ್ಬ ಕೋಚ್ ಇದ್ದರು. ಇಬ್ಬರೂ ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಅಕ್ರಮ ವಾಸ್ತವ್ಯ: ತೆರವುಗೊಳಿಸಲು ಹೋಗಿದ್ದ ಪೊಲೀಸರ ಮೇಲೆಯೇ ಹಲ್ಲೆ..!
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.