ETV Bharat / bharat

ಹಳ್ಳಿಯೊಂದರಲ್ಲಿ ತರಬೇತಿ ವಿಮಾನ ಅಪಘಾತ; ಪೈಲಟ್​, ಸಹಪೈಲಟ್​ಗೆ ಗಾಯ.. ಆಸ್ಪತ್ರೆಗೆ ದಾಖಲು - ಹಳ್ಳಿಯೊಂದರಲ್ಲಿ ತರಬೇತಿ ವಿಮಾನ ಅಪಘಾತ

ಪಶ್ಚಿಮ ಮಹಾರಾಷ್ಟ್ರ ಜಿಲ್ಲೆಯ ಬಾರಾಮತಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಪೈಲಟ್, ಸಹ ಪೈಲಟ್​ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Training aircraft crashes near village in Pune district; pilot, 1 more person taken to hospital
ಹಳ್ಳಿಯೊಂದರಲ್ಲಿ ತರಬೇತಿ ವಿಮಾನ ಅಪಘಾತ; ಪೈಲಟ್​, ಸಹಪೈಲಟ್​ಗೆ ಗಾಯ.. ಆಸ್ಪತ್ರೆಗೆ ದಾಖಲು
author img

By ETV Bharat Karnataka Team

Published : Oct 20, 2023, 7:22 AM IST

Updated : Oct 20, 2023, 7:31 AM IST

ಪುಣೆ(ಮಹಾರಾಷ್ಟ್ರ): ಇಬ್ಬರು ಪೈಲಟ್​ಗಳಿದ್ದ ತರಬೇತಿ ವಿಮಾನವೊಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಹಳ್ಳಿಯೊಂದರ ಬಳಿ ಗುರುವಾರ ಸಂಜೆ ಪತನಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಶ್ಚಿಮ ಮಹಾರಾಷ್ಟ್ರ ಜಿಲ್ಲೆಯ ಬಾರಾಮತಿ ತಾಲೂಕಿನಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ಪೈಲಟ್ ಮತ್ತು ಖಾಸಗಿ ವಿಮಾನ ತರಬೇತಿ ಅಕಾಡೆಮಿಗೆ ಸೇರಿದ ವಿಮಾನದಲ್ಲಿದ್ದ ಮತ್ತೊಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

"ರೆಡ್‌ಬರ್ಡ್ ಸಂಸ್ಥೆಗೆ (ರೆಡ್‌ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡೆಮಿ) ಸೇರಿದ ತರಬೇತಿ ವಿಮಾನವು ಬಾರಾಮತಿ ತಾಲೂಕಿನ ಕಟ್‌ಫಾಲ್ ಗ್ರಾಮದ ಬಳಿ ಸಂಜೆ 5 ಗಂಟೆ ಸುಮಾರಿಗೆ ಅಪಘಾತಕ್ಕೀಡಾಯಿತು. ಇವರು ಪೈಲಟ್ ಮತ್ತು ಸಹ ಪೈಲಟ್ ಆಗಿರಬಹುದು ಎಂದು ಸ್ಥಳೀಯರು ಮತ್ತು ಪೊಲೀಸರು ಶಂಕಿಸಿದ್ದಾರೆ. ಅಷ್ಟೇ ಅಲ್ಲ ವಿಮಾನ ಪತನವಾಗುತ್ತಿದ್ದಂತೆ ಅದರಲ್ಲಿದ್ದ ಇಬ್ಬರನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಬಾರಾಮತಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರಭಾಕರ ಮೋರೆ ಮಾಹಿತಿ ನೀಡಿದ್ದಾರೆ. ಅಪಘಾತಕ್ಕೆ ಕಾರಣ ಏನು ಎಂಬುದರ ಬಗ್ಗೆ ತಕ್ಷಣವೇ ಮಾಹಿತಿ ತಿಳಿದು ಬಂದಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಇದನ್ನು ಓದಿ:ಚಿನ್ನದ ಐಫೋನ್​ ವಾಪಸ್​ ಕೊಡಬೇಕಾದ್ರೆ ಊರ್ವಶಿ ಈ ಬೇಡಿಕೆ ಈಡೇರಿಸಬೇಕಂತೆ: ಅದೇನು?

ಚಾಮರಾಜನಗರದಲ್ಲಿ ಇಂತಹದ್ದೇ ಘಟನೆ ನಡೆದಿತ್ತು: ಕಳೆದ ಜೂನ್​ನಲ್ಲಿ ಚಾಮರಾಜನಗರದಲ್ಲಿ ವಿಮಾನವೊಂದು ಪತನವಾಗಿತ್ತು. ಈ ಬಗ್ಗೆ ಮಾತನಾಡಿದ್ದ ಸ್ಥಳೀಯ ಪ್ರತ್ಯಕ್ಷದರ್ಶಿ, ’’ವಿಮಾನ ತೀರಾ ಸಮೀಪದಲ್ಲೇ ಬಂದಿತ್ತು ನೋಡುವಷ್ಟರಲ್ಲಿ ಉಲ್ಟಾ ಆಗಿ ಬ್ಲಾಸ್ಟ್ ಆಯಿತು ಎಂದು ಹೇಳಿದ್ದರು. ಚಾಮರಾಜನಗರ ತಾಲೂಕಿನ ಭೋಗಪುರ ಸಮೀಪದ ಜಮೀನೊಂದರಲ್ಲಿ ಭಾರತೀಯ ವಾಯುಸೇನೆಗೆ ಸೇರಿದ ಲಘು ವಿಮಾನ ಪತನಗೊಂಡಿತ್ತು. ಬಗ್ಗೆ ಮಾತನಾಡಿದ ಸ್ಥಳೀಯ ಸೋಮಶೇಖರ್​, "ಸಮೀಪದಲ್ಲೇ ಚಾಮರಾಜನಗರದ ಕಡೆ ವಿಮಾನ ಹೋಯಿತು, ಬಳಿಕ ಮತ್ತೇ ನಮ್ಮ ಊರಿನತ್ತ ಬಂದಿತು. ನೋಡುವಷ್ಟರಲ್ಲಿ ಇಬ್ಬರು ಹೊರ ನೆಗೆದರು, ಕೆಲವೇ ಕ್ಷಣಗಳಲ್ಲಿ ವಿಮಾನ ಉಲ್ಟಾ ಆಗಿ ಬ್ಲಾಸ್ಟ್ ಆಯಿತು ಎಂದಿದ್ದರು.

ಬೆಂಕಿ ನಂದಿಸಲು ಬಂದ ವಿಮಾನ ಪತನ: ಇದೇ ಜುಲೈನಲ್ಲಿ ಗ್ರೀಕ್​ನ ಎವಿಯಾ ದ್ವೀಪದಲ್ಲಿ ಮಂಗಳವಾರ ಕಾಳ್ಗಿಚ್ಚನ್ನು ನಿಯಂತ್ರಿಸಲು ಆಗಮಿಸಿದ್ದ ವಿಮಾನವೊಂದು ಪತನಗೊಂಡು ಗ್ರೀಕ್ ವಾಯುಪಡೆಯ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ಬೆಂಕಿಗೆ ನೀರು ಹಾಯಿಸುತ್ತಿರುವಾಗ ವಿಮಾನವು ಮರಕ್ಕೆ ಡಿಕ್ಕಿ ಹೊಡೆದು ಸ್ವಲ್ಪ ದೂರ ತೆರಳಿ ಪತನಗೊಂಡಿತ್ತು.

ಘಟನೆಯ ಬಳಿಕ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ 34 ವರ್ಷದ ವಿಮಾನದ ಕ್ಯಾಪ್ಟನ್ ಮತ್ತು 27 ವರ್ಷದ ಸಹ ಪೈಲಟ್ ಇಬ್ಬರೂ ಸುಟ್ಟು ಕರಕಲಾಗಿದ್ದರು.

Last Updated : Oct 20, 2023, 7:31 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.