ನಲ್ಗೊಂಡ(ತೆಲಂಗಾಣ): ತರಬೇತಿ ವಿಮಾನ ಪತನವಾಗಿ ಪೈಲಟ್ ಮತ್ತು ಟ್ರೈನಿ ಪೈಲಟ್ ಸಾವನ್ನಪ್ಪಿರುವ ಘಟನೆ ನಲ್ಗೊಂಡ ಜಿಲ್ಲೆಯಲ್ಲಿ ಸಂಭವಿಸಿದ್ದು, ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸುತ್ತಿದ್ದಾರೆ.
ನಲ್ಗೊಂಡ ಜಿಲ್ಲೆಯ ಪೆದ್ದವೂರ ಮಂಡಲದ ರಾಮಣ್ಣಗುಡೆಂ ತಾಂಡಾದಲ್ಲಿ ಈ ಘಟನೆ ನಡೆದ ಪರಿಣಾಮ ಪೈಲಟ್ ಮತ್ತು ಟ್ರೈನಿ ಪೈಲಟ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಮೃತರ ಕುರಿತ ಮಾಹಿತಿ ಇನ್ನೂ ತಿಳಿದುಬಂದಿಲ್ಲ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ಥಳೀಯರೊಬ್ಬರು 'ನಾವು ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಸಿಡಿಲು ಬಡಿದಂತೆ ಭಾರಿ ಶಬ್ದ ಕೇಳಿತು. ಏನಾಯಿತು ಎಂದು ನೋಡುತ್ತಿದ್ದಂತೆ ಆ ಸ್ಥಳದಿಂದ ದಟ್ಟವಾದ ಹೊಗೆ ಮತ್ತು ಬೆಂಕಿ ಬರುತ್ತಿರುವುದು ಕಂಡುಬಂತು. ಯಾರ ಜಮೀನಿಗಾದರೂ ಬೆಂಕಿ ಬಿದ್ದಿದೆಯೇ ಎಂಬುದನ್ನು ನೋಡಲು ನಾವು ಸ್ಥಳಕ್ಕೆ ಬಂದೆವು. ಅಲ್ಲಿ ವಿಮಾನವೊಂದು ಹೊತ್ತಿ ಉರಿಯುತ್ತಿತ್ತು. ಕಿರುಚಾಟ ಕೇಳಿಸಿದ್ದು, ಸ್ವಲ್ಪ ಸಮಯದಲ್ಲಿ ಕಿರುಚಾಟ ನಿಂತುಹೋಯಿತು. ಏನು ಮಾಡಬೇಕೆಂದು ಗೊತ್ತಾಗಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಭಾರತದೊಳಗೆ ಪಾಕಿಸ್ತಾನದ ಡ್ರೋನ್ನಿಂದ ಶಸ್ತ್ರಗಳು, ರಾಸಾಯನಿಕಗಳ ರವಾನೆ : ಪೊಲೀಸರ ತನಿಖೆ