ETV Bharat / bharat

ಲೋಡ್​, ಅನ್​ಲೋಡ್​ ಗೂಡ್ಸ್​ ರೈಲುಗಳ ಮಧ್ಯೆ ಡಿಕ್ಕಿ... ಲೋಕೋ ಪೈಲಟ್​ ಗಂಭೀರ

ಲೋಡ್​ ಮತ್ತು ಅನ್​ಲೋಡ್​ ಗೂಡ್ಸ್​ ರೈಲುಗಳ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಭೀಕರ ರೈಲು ಅಪಘಾತದಲ್ಲಿ ಲೋಕೋ ಪೈಲಟ್​ವೊಬ್ಬ​ ಗಂಭೀರ ಗಾಯಗೊಂಡಿರುವ ಘಟನೆ ಜಾರ್ಖಂಡ್​ನ ರಾಂಚಿಯಲ್ಲಿ ನಡೆದಿದೆ.

Train Accident in Jharkhand, Two goods rail between accident, Jharkhand news, Jharkhand Rail collide news, ಜಾರ್ಖಂಡ್​ನಲ್ಲಿ ರೈಲು ಅಪಘಾತ, ಎರಡು ರೈಲುಗಲ ಮಧ್ಯೆ ಡಿಕ್ಕಿ, ಜಾರ್ಖಂಡ್​ ಸುದ್ದಿ, ಜಾರ್ಖಂಡ್​ ರೈಲುಗಳ ಡಿಕ್ಕಿ ಸುದ್ದಿ,
ಲೋಡ್​, ಅನ್​ಲೋಡ್​ ಗೂಡ್ಸ್​ ರೈಲುಗಳ ಮಧ್ಯೆ ಡಿಕ್ಕಿ
author img

By

Published : Dec 26, 2021, 5:48 AM IST

ರಾಂಚಿ: ಹಟಿಯಾ-ಬಾರಾಮುಡಾ ರೈಲು ಮಾರ್ಗದಲ್ಲಿ ಭಾರಿ ರೈಲು ಅಪಘಾತ ಸಂಭವಿಸಿದೆ. ಮಾಹಿತಿ ಪ್ರಕಾರ, ಲೋಡ್ ಮತ್ತು ಅನ್​ಲೋಡ್​ ಆಗಿದ್ದ ಗೂಡ್ಸ್ ರೈಲುಗಳ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಸದ್ಯ ರೈಲ್ವೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

ಎರಡು ಗೂಡ್ಸ್ ರೈಲುಗಳ ನಡುವೆ ಪ್ರಬಲ ಡಿಕ್ಕಿ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಪಾಕ್ರಾ ಮತ್ತು ಕುರುಕ್ರಾ ರೈಲು ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ. ಇದು ರಾಂಚಿ ರೈಲು ವಿಭಾಗದ ಕಾರ್ಯಾಚರಣೆ ವಿಭಾಗದ ಪ್ರಮುಖ ವೈಫಲ್ಯ ಎಂದು ತಜ್ಞರು ಹೇಳಿದ್ದಾರೆ.

ಓದಿ: ರಾಜ್ಯದಲ್ಲಿ ಮತ್ತೊಮ್ಮೆ ಸದ್ದು ಮಾಡಿದ ಒಮಿಕ್ರಾನ್ ಸೋಂಕು... ಇಂದು 7 ಮಂದಿಗೆ ದೃಢ, 38ಕ್ಕೇರಿದ ಸೋಂಕಿತರ ಸಂಖ್ಯೆ...!

ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಯುವ ಸಾಧ್ಯತೆ ಇದೆ. ಈ ಘಟನೆಯ ನಂತರ ಲೋಕೋ ಪೈಲಟ್ ಆರೋಗ್ಯವಾಗಿದ್ದಾರೆ ಎಂದು ಡಿಆರ್‌ಎಂ ಪ್ರದೀಪ್ ಗುಪ್ತಾ ಹೇಳಿದ್ದಾರೆ. ಆದರೆ ಒಬ್ಬ ಲೋಕೋ ಪೈಲಟ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.