ETV Bharat / bharat

ಕಾರಿನಲ್ಲಿ ಆಟವಾಡುತ್ತಿದ್ದಾಗ ಡೋರ್ ಲಾಕ್​: ಉಸಿರುಗಟ್ಟಿ ಮೂವರು ಮಕ್ಕಳ ದಾರುಣ ಸಾವು - ಓರ್ವ ಬಾಲಕಿ ಸೇರಿ ಮೂವರು ಮಕ್ಕಳ ದಾರುಣ ಸಾವು

ಇದ್ದಕ್ಕಿದ್ದಂತೆ ಕಾರಿನ ಡೋರ್ ಲಾಕ್ ಆಗಿದ್ದರಿಂದ ಮಕ್ಕಳು ಉಸಿರಾಟದ ಸಮಸ್ಯೆ ಎದುರಿಸಿ ಕಾರಿನ ಡೋರ್​ ತೆರೆಯಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ.

Tragic Incident: 3 Children suffocated to death as car doors closed
ಕಾರಿನಲ್ಲಿ ಆಟವಾಡುತ್ತಿದ್ದಾಗ ಡೋರ್ ಲಾಕ್​: ಓರ್ವ ಬಾಲಕಿ ಸೇರಿ ಮೂವರು ಮಕ್ಕಳ ದಾರುಣ ಸಾವು
author img

By

Published : Jun 4, 2022, 11:09 PM IST

ತಿರುನೆಲ್ವೇಲಿ (ತಮಿಳುನಾಡು): ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ದಾರುಣ ಘಟನೆಯೊಂದು ನಡೆದಿದೆ. ಕಾರಿನೊಳಗೆ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಡೋರ್ ಲಾಕ್​ ​ಆಗಿ ಓರ್ವ ಬಾಲಕಿ ಸೇರಿ ಮೂವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಪನಂಗುಡಿ ಸಮೀಪದ ಲೆಪ್ಪಾಯಿ ಅಪಾರ್ಟ್‌ಮೆಂಟ್‌ ಬಳಿ ಈ ದುರ್ಘಟನೆ ಜರುಗಿದೆ. ನಿತೀಶ್ (5), ನಿತೀಶಾ (7) ಹಾಗೂ ಕಬಿಶಾಂತ್(4) ಎಂಬುವವರೇ ಮೃತ ಮಕ್ಕಳು ಎಂದು ಗುರುತಿಸಲಾಗಿದೆ. ಮೃತ ನಿತೀಶ್ ಹಾಗೂ ನಿತೀಶಾ ನಾಗರಾಜ ಎಂಬುವರ ಮಕ್ಕಳಾಗಿದ್ದಾರೆ. ಕಬಿಶಾಂತ್ ಸುಧಾಕರ್ ಎಂಬುವರ ಮಗನಾಗಿದ್ದಾನೆ.

ನಾಗರಾಜನ ಸಹೋದರ ಮಣಿಕಂದನ್​​ಗೆ ಸೇರಿದ ಕಾರಿನಲ್ಲಿ ಈ ಮಕ್ಕಳು ಆಟವಾಡುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆ ಕಾರಿನ ಡೋರ್ ಲಾಕ್ ಆಗಿದ್ದರಿಂದ ಮಕ್ಕಳು ಉಸಿರಾಟದ ಸಮಸ್ಯೆ ಎದುರಿಸಿ ಕಾರಿನ ಡೋರ್​ ತೆರೆಯಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆಯ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಗೋಕರ್ಣದಲ್ಲಿ ವೇಶ್ಯಾವಾಟಿಕೆ ದಂಧೆ: ನಾಲ್ವರು ಯುವತಿಯರ ರಕ್ಷಣೆ, ಓರ್ವನ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.